ಟೀಂ ಐಲೇಸಾದ ಕೊರಗ ಹಾಡು ‘ಕೂಜಿನ ಪಾಟು’ ಸಪ್ಟೆಂಬರ್ 28ರಂದು  ನಿಟ್ಟೆ ವಿಶ್ವವಿದ್ಯಾಲಯದ ತುಳು ದಿನ 2024ರ ಆಚರಣೆಯಂದು ಬಿಡುಗಡೆ

ಟೀಂ ಐಲೇಸಾದ ಕೊರಗ ಹಾಡು ‘ಕೂಜಿನ ಪಾಟು’ ಸಪ್ಟೆಂಬರ್ 28ರಂದು ನಿಟ್ಟೆ ವಿಶ್ವವಿದ್ಯಾಲಯದ ತುಳು ದಿನ 2024ರ ಆಚರಣೆಯಂದು ಬಿಡುಗಡೆ

0Shares

ನಿಟ್ಟೆ, Sept 24, 2024: ಮಂಗಳೂರು ಅಲ್ಲಿನ ನಿಟ್ಟೆ ವಿಶ್ವ ವಿದ್ಯಾಲಯವು ಇದೇ ಸೆ.28ನೇ ಶನಿವಾರ ತುಳು ದಿನ ಮತ್ತು ತುಳುವಿನ ಪ್ರಸಿದ್ಧ ಕವಿ ಡಾ| ಅಮೃತ ಸೋಮೇಶ್ವರ ಅವರ ನೆನಪಿನಲ್ಲಿ ‘ಅಮೃತ ನೆಂಪು’ ಆಚರಿಸಲಿದ್ದು ಆ ಸಂದರ್ಭದಲ್ಲಿ ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ.) ಪ್ರಸ್ತುತಿಯ ಕೊರಗ ಭಾಷೆಯ ಮೊತ್ತ ಮೊದಲ ‘ಕೂಜಿನ ಪಾಟು’ ಎಂಬ ಹಾಡ ಬಿಡುಗಡೆ ಮಾಡಲಿದೆ. ಇದೆ ಸಂದರ್ಭದಲ್ಲಿ ಅಮೃತರ ನೆನಪಿನಲ್ಲಿ ಅವರ ಕೈಬರಹದ ಗ್ರಂಥ ಗೊಂಚಲನ್ನು ನಿಟ್ಟೆ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಿದೆ. ನಿಟ್ಟೆ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಪ್ರೊಫೆಸರ್ ಡಾ| ಸತೀಶ್ ಕುಮಾರ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಅತಿಥಿಗಳಾಗಿ ಅಮೃತ ಸೋಮೇಶ್ವರ ಅವರ ಸುಪುತ್ರ, ಸಾಹಿತಿ ಡಾ| ಚೇತನ್ ಸೋಮೇಶ್ವರ್, ನಿಟ್ಟೆ ವಿಶ್ವ ವಿದ್ಯಾಲಯದ ಪ್ರೊಫೆಸರ್ ಡಾ| ಗೋಪಾಲ್ ಮುಗೆರಾಯ ಮತ್ತು ಖ್ಯಾತ ಕನ್ನಡ ತುಳು ಸಂಗೀತ ನಿರ್ದೇಶಕ ವಿ.ಮನೋಹರ್ ಭಾಗವಹಿಸಲಿದ್ದಾರೆ ಎಂದು ನಿಟ್ಟೆ ವಿವಿ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಲೂಣ್ಕರ್ ಮತ್ತು ನಿಟ್ಟೆ ವಿಶ್ವ ವಿದಾಲಯದ ಕುಲಸಚಿವ ಪ್ರೊಫೆಸರ್ ಡಾ| ಹರ್ಷ ಹಾಲಹಳ್ಳಿ ತಿಳಿಸಿದ್ದಾರೆ.

ನಿಟ್ಟೆ ವಿಶ್ವವಿದ್ಯಾಲಯದ ಡಾ| ಸಾಯಿಗೀತಾ ಹೆಗ್ಡೆ, ಡಾ| ನರಸಿಂಹ ಬೈಲ್ಕೇರಿ, ಶಶಿಕುಮಾರ್ ಶೆಟ್ಟಿ ಮತ್ತು ಐಲೇಸಾ ಇದರ ಸಾರಥಿ ಡಾ| ರಮೇಶ್ಚಂದ್ರ ಅನಂತ್ ರಾವ್, ಕವಿ ಶಾಂತಾರಾಮ್ ಶೆಟ್ಟಿ ಕಾರ್ಯಕ್ರಮವನ್ನು ಜಂಟಿಯಾಗಿ ಸಂಯೋಜಿಸಲಿದ್ದು ತಾಂತ್ರಿಕ ಹಿನ್ನಲೆಯನ್ನು ಗೋಪಾಲ್ ಪಟ್ಟೆ ಮತ್ತು ವಿವೇಕಾನಂದ ಮಂಡೆಕರ ನಿರ್ವಹಿಸಲಿದ್ದಾರೆ. ಐಲೇಸಾ ಇದರ ಗಾಯಕರುಗಳಾದ ಸುಧಾಕರ್ ಶೆಟ್ಟಿ ಡಾ| ಸುಶೀಲಾ, ಪ್ರಕಾಶ್ ಪಾವಂಜೆ, ಆತ್ಮಾರಾಮ್ ಆಳ್ವ, ಸುಮಾಕೋಟೆ, ಅಜೇಶ್ ಚಾರ್ಮಾಡಿ ಇವರು ಅಮೃತ ಸೋಮೇಶ್ವರ ಅವರ ಸಾಹಿತ್ಯದ ಹಾಡುಗಳನ್ನು ಹಾಡಲಿದ್ದಾರೆ. ಪಳ್ಳಿ ವಿಶ್ವನಾಥ್ ಶೆಟ್ಟಿ, ನರೇಂದ್ರ ಕಬ್ಬಿನಾಲೆ ಇವರ ಸಹಕಾರದೊಂದಿಗೆ ಕಾರ್ಯ ಕ್ರಮ ನಡೆಯಲಿದೆಎಂದು ಐಲೇಸಾ ಮಾಧ್ಯಮ ಸಂಚಾಲಕ ಸುರೇಂದ್ರ ಮಾರ್ನಾಡು ತಿಳಿಸಿದ್ದಾರೆ .

ಕೂಜಿನ ಪಾಟು’ ಪ್ರಪ್ರಥಮ ಕೊರಗ ಭಾಷೆಯ ಹಾಡು:
ಕೂಜಿನ ಪಾಟು ಹೆಣ್ಣು ಮಗುವಿನ ಜನನವನ್ನು ಸಂಭ್ರಮಿಸುವ ಹಾಡು ಆಗಿದ್ದು ತುಳುನಾಡ ಆದಿಮೂಲ ಜನಾಂಗವಾದ ಪೂರ್ಣ ಪ್ರಮಾಣದಲ್ಲಿ ಕೊರಗ ಭಾಷೆಯ ಮೊದಲ ಹಾಡಾಗಿ ಬಿಡುಗಡೆ ಆಗಲಿದೆ. ಕೊರಗ ಸಾಹಿತ್ಯದಲ್ಲಿ ವಿಶೇಷ ಕೃಷಿ ಮಾಡಿದ ಪಾಂಗಾಳ ಬಾಬು ಕೊರಗ ಈ ಹಾಡಿಗೆ ಅತ್ಯುತ್ತಮ ಸಾಹಿತ್ಯ ನೀಡಿದ್ದಾರೆ.ತುಳುನಾಡಿನ ಅಂಗಭಾಷೆಯಾಗಿರುವ ಕೊರಗ ಭಾಷೆಯನ್ನು ಉಳಿಸುವ, ಬೆಳೆಸುವ ಸಲುವಾಗಿ ಈ ಹಾಡನ್ನು Sheydar Electric Groupನ ಜನರಲ್ ಕೌನ್ಸೆಲ್ ಆಗಿರುವ ಕಿಶೋರ್ ಶೆಟ್ಟಿ ಐಲೇಸಾ ಸಂಸ್ಥೆಯ ಮೂಲಕ ಪ್ರಾಯೋಜಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಬುಡಕಟ್ಟು ಜನಾಂಗದ ಮೂಲ ಸಂಗೀತವನ್ನೇ ಅಳವಡಿಸಿದ್ದು ಹಾಡು ಮಂಗಳೂರಿನ ಉದಯೋನ್ಮುಖ ಗಾಯಕ ಚೇತನ್ ಖುಷಿ ಕುಲಾಲ್ ಇವರ ಧ್ವನಿಯಲ್ಲಿ ಮಧುರವಾಗಿ ಮೂಡಿ ಬಂದಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now