ಪರಿಸರ ರಕ್ಷಣೆಯಲ್ಲಿ ನಾವು ಎನ್ನುದಕ್ಕಿಂತ ನಾನು ಎನ್ನುವುದು ಮುಖ್ಯವಾಗುತ್ತದೆ – ಕೇಶವ ಪೂಜಾರಿ

ಪರಿಸರ ರಕ್ಷಣೆಯಲ್ಲಿ ನಾವು ಎನ್ನುದಕ್ಕಿಂತ ನಾನು ಎನ್ನುವುದು ಮುಖ್ಯವಾಗುತ್ತದೆ – ಕೇಶವ ಪೂಜಾರಿ

0Shares

ಉದ್ಯಾವರ : ಪರಿಸರವನ್ನು ನಾವು ರಕ್ಷಿಸುತ್ತೇವೆ ಎನ್ನುವುದಕ್ಕಿಂತ ನಾನು ರಕ್ಷಿಸುತ್ತೇನೆ ಎಂಬುವುದು ಮುಖ್ಯವಾಗುತ್ತದೆ. ನಾವು ಅಂದಾಗ ಜವಾಬ್ದಾರಿ ಹಂಚಿ ಹೋಗುತ್ತದೆ ಮತ್ತು ಜವಾಬ್ದಾರಿಯಿಂದ ತಪ್ಪಿಸಿ ಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ನಾನು ಪರಿಸರವನ್ನು ರಕ್ಷಿಸುತ್ತೇನೆ ಎಂದು ನಿರ್ಧಾರವನ್ನು ಮಾಡ ಬೇಕು ಒಂದು ಗಿಡವನ್ನು ನೆಟ್ಟು ನಾವು ಮೂರು ವರ್ಷಗಳ ಕಾಲ ಜಾಗ್ರತೆಯಿಂದ ಅದನ್ನು ಆರೈಕೆ ಮಾಡಿ ಬೆಳೆಸಿದರೆ, ಆ ಗಿಡ ಮರವಾಗಿ ನೂರು ವರ್ಷಗಳ ಕಾಲ ನಮ್ಮನ್ನು ಬೆಳೆಸುತ್ತದೆ .ಇಂದು ನಾವು ಉಸಿರಾಡುವ ಆಮ್ಲಜನಕ ಮರ ಮಟ್ಟುಗಳಿಂದ ನಮಗೆ ಲಭ್ಯವಾಗುತ್ತದೆ. ಒಬ್ಬ ಮನುಷ್ಯನಿಗೆ ಸರಾಸರಿ 6ರಿಂದ 7 ಮರಗಳಿಂದ ಹೊರ ಸೂಸುವ ಆಮ್ಲಜನಕದ ಅವಶ್ಯಕತೆ ಇದೆ. ನಾವು ಇದನ್ನು ಆಲೋಚನೆ ಮಾಡದೆ ಅಭಿವೃದ್ಧಿಯ ಹೆಸರಲ್ಲಿ ಮರಮಟ್ಟುಗಳನ್ನು ಕಡಿದು ಹಾಕಿದರೆ ಮುಂದೊಂದು ದಿನ ನಮಗೆ ಆಮ್ಲಜನಕದ ಕೊರತೆಯಾಗುವಂತಹ ಸಂದರ್ಭ ಬಂದೀತು. ಹಾಗಾಗಿ ಮಕ್ಕಳೇ ನೀವು ಎಲ್ಲಿ ಸ್ಥಳ ಇದೆ ಅಲ್ಲಿ ಒಂದು ಗಿಡವನ್ನು ನೆಟ್ಟು ಮರವನ್ನಾಗಿ ಬೆಳೆಸಿ ಎಂದು ಉಡುಪಿ ಗಸ್ತು ಅರಣ್ಯ ಪಾಲಕರಾದ ಶ್ರೀ ಕೇಶವ ಪೂಜಾರಿಯವರು ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶಯದಲ್ಲಿ ಉದ್ಯಾವರ ,ಪಿತ್ರೋಡಿ ಸ್ಮಾರ್ಟ್ ಇಂಡಿಯನ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಲ್ಲಿ ಜರಗಿದ ಸಾಗುವಾನಿ ಗಿಡ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು .

ಅವರು ಮುಂದುವರಿಯುತ್ತಾ ನಮ್ಮ ದೇಶದಲ್ಲಿ 24 ಶೇಕಡಾ ಕಾಡು ಪ್ರದೇಶವಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ ದೊರಕುವಾಗ 44 ಶೇಕಡ ಕಾಡು ಪ್ರದೇಶವಿದ್ದು ಅದು ಈಗ 24ಕ್ಕೆ ಇಳಿದಿದೆ. ಈ ಅಸಮತೋಲನ ಹೋಗಲಾಡಿಸದಿದ್ದರೆ ಮುಂದೊಂದು ದಿನ ನಾವು ದುರಂತದತ್ತ ಸಾಗುತ್ತೇವೆ. ಕರ್ನಾಟಕದಲ್ಲಿ ಇರುವಂತಹ ಕಾಡು ಪ್ರದೇಶವು ಕೂಡ 20 ಶೇಕಡ ಅದು ಕೂಡ ನಮ್ಮ ಜನಸಂಖ್ಯೆಯ ಅನುಪಾತದಲ್ಲಿ ಕೊರತೆ ಉಂಟುಮಾಡುತ್ತದೆ. ಹಾಗಾಗಿ ನಮ್ಮ ಬದುಕು ಸುಗಮವಾಗಲು ಈ ಪ್ರಕೃತಿಯ ಸಮತೋಲನ ಇರಿಸಲು ನಾವು ಕಂಕಣ ಬದ್ಧರಾಗೋಣ ಎಂದರು. ಅವರು ವಿದ್ಯಾರ್ಥಿ ಸಮುದಾಯಕ್ಕೆ ಪರಿಸರ ರಕ್ಷಣೆಯ ಬಗ್ಗೆ ಬಹಳ ವಿವರ ಣಾತ್ಮಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಅರ್ಚನಾ ಎ. ಬಂಗೇರ ಈ ಕಾರ್ಯಕ್ರಮದ ಔಚಿತ್ಯವನ್ನು ಮಕ್ಕಳಿಗೆ ವಿವರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಗೌರವ ಅಧ್ಯಕ್ಷ ಶ್ರೀ ಉದ್ಯಾವರ ನಾಗೇಶ್ ಕುಮಾರ್ ರವರು ಮಾತನಾಡುತ್ತಾ ಆಧುನಿಕರಣದ ಭರಾಟೆಯಲ್ಲಿ ಇಂದು ಪರಿಸರಕ್ಕೆ ಹಾನಿ ಮಾಡುವ ಸ್ವಾರ್ಥಿ ಮನುಷ್ಯರಿಂದ ಮುಂದಿನ ನಮ್ಮ ಬದುಕನ್ನು ಆತಂಕ ಒಡ್ಡುತ್ತಿದ್ದೇವೆ. ಹೀಗೆಯೇ ಮುಂದುವರಿದರೆ ಮನುಕುಲ ನಾಶದತ್ತ ಚಲಿಸುತ್ತದೆ. ಇದನ್ನು ಸಮತೂಗಿಸುವ ಏಕೈಕ ಮಾರ್ಗ ಅಂದರೆ ನಾವು ಗಿಡ ಬೆಳೆಸುವುದು ಮರಗಳನ್ನ ರಕ್ಷಿಸುವುದು. ಈ ಕೆಲಸವನ್ನು ಸಂಸ್ಥೆ ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿರುತ್ತದೆ ಗಿಡಗಳನ್ನು ವಿತರಿಸುವುದು ಮಾತ್ರವಲ್ಲ ಒಂದು ವರ್ಷದ ನಂತರ ನಮ್ಮ ಸದಸ್ಯರು ಆ ವಿದ್ಯಾರ್ಥಿಯ ಮನೆಗೆ ಭೇಟಿಕೊಟ್ಟು ಬೆಳೆದ ಗಿಡವನ್ನು ಗಮನಿಸಿ ಅದಕ್ಕೆ ಬಹುಮಾನವನ್ನ ನೀಡುವ ಕಾರ್ಯಕ್ರಮವನ್ನು ನಾವು ಹಮ್ಮಿಕೊಂಡಿರುತ್ತೇವೆ. ಹಾಗಾಗಿ ಇಲ್ಲಿ ಕೊಂಡು ಹೋದ ಗಿಡವನ್ನು ಯೋಗ್ಯ ಸ್ಥಳದಲ್ಲಿ ನೆಟ್ಟು ಬೆಳೆಸಿ .ಗಿಡವನ್ನು ಪ್ರೀತಿಸಿ ಆಗ ಅದು ನಮ್ಮನ್ನು ಪ್ರೀತಿಸುತ್ತದೆ ಎಂದರು.

ನಿರ್ದೇಶಕರಾದ ಯು.ಪದ್ಮನಾಭ ಕಾಮತ್ , ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತುಲ್ಲ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿ ಸ್ವಾಗತವನ್ನು ಬಯಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಉಷಾ ಆಚಾರ್ಯ ಧನ್ಯವಾದ ಅರ್ಪಿಸಿದರು. ಮಾಜಿ ಅಧ್ಯಕ್ಷ ತಿಲಕ್ ರಾಜ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಚಂದ್ರಾವತಿ ಎಸ್. ಭಂಡಾರಿ , ಉಪಾಧ್ಯಕ್ಷೆ ಶ್ರೀಮತಿ ಹೆಲನ್ ಫೆರ್ನಾಂಡಿಸ್ , ಕೋಶಾಧಿಕಾರಿ ಸತೀಶ್ ಡಿ. ಸಾಲ್ಯಾನ್ ಕಾರ್ಯದರ್ಶಿಗಳಾದ ಶ್ರೀಮತಿ ಆಶಾವಾಸು ,ಭಾಸ್ಕರ ಬಂಗೇರ , ಸದಸ್ಯರುಗಳಾದ ಸೋಮಶೇಖರ ಸುರತ್ಕಲ್, ರೋಯ್ಸ್ ಫೆರ್ನಾಂಡಿಸ್, ಶೇಖರ್ ಕೋಟ್ಯಾನ್, ರಿಯಾಝ್ ಪಳ್ಳಿ ಸುಗಂಧಿ ಶೇಖರ್, , ವಿಶ್ವನಾಥ್ ಪೂಜಾರಿ , ಹಮೀದ್ ಸಾಬ್ಜಾನ್ , ಪ್ರೇಮ್ ಮಿನೇಜಸ್ ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಸುಮಾರು 300 ವಿದ್ಯಾರ್ಥಿಗಳಿಗೆ ವಿವಿಧ ಗಿಡಗಳನ್ನು ವಿತರಿಸಲಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now