
ಯುವ ವಿಚಾರ ವೇದಿಕೆಯ ರಜತ ಸಂಭ್ರಮದ ಅಂಗವಾಗಿ ಹಡಿಲು ಭೂಮಿ ಕೃಷಿ ಯೋಜನೆಯ ಅಡಿಯಲ್ಲಿ ಕ್ರೀಡೆಯೊಂದಿಗೆ ಕೃಷಿ ಕಾರ್ಯ: “ಕೇಸರ್ಡ ಗೊಬ್ಬುಗ ಬೆನ್ನಿ ಮಲ್ಪುಗ” ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಭೂಮಿ ತಾಯಿಗೆ ಹಾಲನ್ನು ಎರೆಯುವ ಮೂಲಕ ಉದ್ಘಾಟಿಸಿದ ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ದೇವಾಡಿಗ ಕೃಷಿಯ ಮಹತ್ವ ತಿಳಿಸುತ್ತಾ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯರು ಹಾಗೂ ಹಿರಿಯ ಕೃಷಿಕರಾದ ಜಲಜ ಪೂಜಾರಿ ಅಮ್ಮುಂಜೆ ಹಾಗೂ ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಮೈಕಲ್ ಡಿಸೋಜಾ ರವರನ್ನು ಸಮ್ಮಾನಿಸಲಾಯಿತು.
ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನಾ ಸಭೆ ಹಾಗು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ವಿನ್ ರೋಚ್, ಛಾಯಾಗ್ರಹಕರಾದ ಸುಂದರ್ ಸೋಮ ಪೂಜಾರಿ, ತಾಲೂಕು ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಶಾಖಾ ವ್ಯವಸ್ಥಾಪಕರಾದ ಸಂದೀಪ್ ಶೆಟ್ಟಿ ಹಾರಾಡಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಐರಿನ್ ಮಸ್ಕರೇನಸ್, ಉಪ್ಪೂರು ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರ, ಮುಂಬೈ ಉದ್ಯಮಿಗಳಾದ ಹೆನ್ರಿ ಡಿಸೋಜಾ, ವೇದಿಕೆಯ ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್, ಕಾರ್ಯಕ್ರಮ ಸಂಯೋಜಕರಾದ ವೇದಿಕೆಯ ಸಾಂಸ್ಕೃತಿಕ ಕಾರ್ಯದರ್ಶಿ ರವೀಂದ್ರ ಕುಮಾರ್, ಕೋಶಾಧಿಕಾರಿ ಅಶೋಕ್, ಜೊತೆ ಕಾರ್ಯದರ್ಶಿ ಶಕುಂತಲಾ, ಶಾಂತ ಸೆಲ್ವರಾಜ್, ನಿಕಟಪೂರ್ವ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಉಪಾಧ್ಯಕ್ಷರಾದ ಸುಕೇಶ್ ಪಾಣ ಉಪಸ್ಥಿತರಿದ್ದರು
ಸ್ಪರ್ಧೆಗಳನ್ನು ಮಕ್ಕಳಿಗೆ, ಮಹಿಳೆಯರು ಹಾಗೂ ಪುರುಷರ ವಿಭಾಗದಲ್ಲಿ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರೋಪ ಸಮಾರಂಭದ ನಂತರ ಗದ್ದೆಯ ನಾಟಿ ಕಾರ್ಯ ನಡೆಸಲಾಯಿತು.
ಯೋಗೀಶ್ ಕೊಳಲಗಿರಿ ಹಾಗೂ ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರೆ ಸದಾಶಿವ ಕುಮಾರ್ ಸರ್ವರಿಗೂ ವಂದಿಸಿದರು











Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























