ಡಾ. ಗಾನವಿ ಡಿ. ಉಜಿರೆ ಯಶಸ್ವಿಯಾಗಿ ಪಿಎಚ್‌ಡಿ ಪದವಿ ಪಡೆದರು.

ಡಾ. ಗಾನವಿ ಡಿ. ಉಜಿರೆ ಯಶಸ್ವಿಯಾಗಿ ಪಿಎಚ್‌ಡಿ ಪದವಿ ಪಡೆದರು.

0Shares

ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗಾನವಿ ಡಿ. ಅವರು “ಸಿಂಥೆಸಿಸ್ ಅಂಡ್ ಬೈಯೋಲಾಜಿಕಲ್ ಆಕ್ಟಿವಿಟಿ ಸ್ಟಡೀಸ್ ಆಫ್ ಸಮ್ ಸಿಂಪಲ್ ಅಂಡ್ ಫ್ಯೂಸ್‌ಡ್ ನೈಟ್ರೋಜನಸ್ ಹೆಟೆರೋಸೈಕ್ಲಸ್”(Synthesis and Biological Activity Studies of Some Simple and Fused Nitrogenous Heterocycles) ಎಂಬ ಶೀರ್ಷಿಕೆಯಲ್ಲಿ ಮಹಾಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷರು ಹಾಗೂ ಮಾರ್ಗದರ್ಶಕರಾದ ಪ್ರೊ. ಭೋಜ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧ ಮಂಡಿಸಿದ್ದಾರೆ. ಸಮರ್ಥ ಶೋಧನಾ ಕಾರ್ಯಕ್ಕೆ ಬೆಂಗಳೂರು ಸಿಟಿ ಯುನಿವರ್ಸಿಟಿಯ ರಸಾಯನ ಶಾಸ್ತç ವಿಭಾಗದ ಸೀನಿಯರ್ ಪ್ರೊಪೆಸರ್ ಡಾ. ಹರಿಪ್ರಸಾದ್ ಎಸ್. ಇವರ ಸಮ್ಮುಖದಲ್ಲಿ ಡಾ. ಗಾನವಿ ಡಿ. ಅವರಿಗೆ ದಿನಾಂಕ 11 ಜುಲೈ 2025 ಪಿಎಚ್.ಡಿ ಪದವಿ ನೀಡಲಾಯಿತು.

ಉಜಿರೆಯ ಲಲಿತನಗರದ ನಿವಾಸಿಯಗಿರುವ ಇವರು ಧರ್ಮಸ್ಥಳದ ದೇವಸ್ಥಾನ ಕಚೇರಿಯ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಉದಯ ಜೈನ್ ಅವರ ಧರ್ಮಪತ್ನಿ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now