ರಕ್ಷಣೆಗೋಳಗಾದ ಹೋರ ರಾಜ್ಯದ ಮಾನಸಿಕ ಅಸ್ವಸ್ಥ ಮಹಿಳೆ ಸಂಬಂಧಿಕರ ವಶ

ರಕ್ಷಣೆಗೋಳಗಾದ ಹೋರ ರಾಜ್ಯದ ಮಾನಸಿಕ ಅಸ್ವಸ್ಥ ಮಹಿಳೆ ಸಂಬಂಧಿಕರ ವಶ

0Shares

ಉಡುಪಿ. :- ನಿರಂತರ ಮಳೆಗೆ ರಾತ್ರಿಯಿಂದ ಬೆಳಗಿನವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಾಡುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಸಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ರಾಜ್ಯ ಮಹಿಳಾ ನಿಲಯದಲ್ಲಿ ದಾಖಲಿಸಿದ್ದು, ಇದೀಗ ಮಹಿಳೆಯ ಸಂಬಂಧಿಕರು ಪತ್ತೆಯಾಗಿದ್ದು ಆಕೆಯನ್ನು ಹಸ್ತಾಂತರಿಸಲಾಗಿದೆ.

ಮಹಿಳೆ ವೈಶಾಲಿ (40 ವರ್ಷ) ರಕ್ಷಣೆಗೊಳಗಾದ ಮಾನಸಿಕ ಮಹಿಳೆ. ಮಹಿಳೆ ರಾತ್ರಿಯಿಂದ ಬೆಳಗಿನವರೆಗೆ ನಡುರಸ್ತೆಯಲ್ಲಿ ಹಿಂದೆ ಮುಂದೆ ನಿರಂತರವಾಗಿ ಸಂಚರಿಸುತ್ತ ಆತಂಕದ ವಾತವರಣ ಸೃಷ್ಟಿಸಿದ್ದರು. ಮಹಿಳೆಯನ್ನು ರಕ್ಷಿಸಲು ವಿಶುಶೆಟ್ಟಿಯವರು ನಗರ ಠಾಣಾ ಪೋಲಿಸರ ಸಹಾಯದಿಂದ ಹರಸಾಹಸ ಪಡಬೇಕಾಯಿತು.

 ರಕ್ಷಿಸಿದ ಮಹಿಳೆಯನ್ನು ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಿದಾಗ  ಮಹಿಳೆ ಶಾಂತವಾಗಿ ಸುದಾರಣೆ ಬರಲು ಪ್ರಾರಂಭಿಸಿದ್ದರು.  ಸಂಬಂಧಿಕರು ಪತ್ತೆಯಾಗದ ಕಾರಣ ವಿಶುಶೆಟ್ಟಿಯವರು ಚಿಕಿತ್ಸೆಯ ಬಳಿಕ ಮಹಿಳೆಯನ್ನು  ರಾಜ್ಯ ಮಹಿಳಾ ನಿಲಯಕ್ಕೆ ದಾಖಲಿಸಿದ್ದರು. ನಿಲಯ ಮುಖ್ಯಾಧಿಕಾರಿ ಶ್ರೀಮತಿ ಪುಪ್ಪರಾಣಿಯವರು ಮಹಿಳೆಯನ್ನು ವಿಶ್ವಾಸಕ್ಕೆ ಪಡೆದು ಆಕೆ ನೀಡಿದ ಮಾಹಿತಿಯ ಮೆರೆಗೆ ಸಂಬಂಧಿಕರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದರು. ಸಂಬಂಧಿಕರಿಗೆ ಇದೀಗ ಮಹಿಳೆಯನ್ನು ಹಸ್ತಾಂತರಿಸಲಾಗಿದೆ. 

ಔರಂಗಾಬಾದ್ ಮೂಲದ ಮಹಿಳೆ ಇವಳಾಗಿದ್ದು , ಮನೋರೋಗದಿಂದ ಬೀದಿಪಾಲಾಗಿ ಉಡುಪಿಗೆ ಬಂದಿದ್ದರು. ಕಾಣೆಯಾದ ಬಗ್ಗೆ ಔರಂಗಬಾದ್ ನಲ್ಲಿ ಪೋಲಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಲಾಗಿತ್ತು.

ಬೇರೆ ಬೇರೆ ಕಾರಣಗಳಿಂದ ಮನೋರೋಗಿಗಳಾಗಿ ಹೊರ ಜಿಲ್ಲೆ ಹೊರ ರಾಜ್ಯದಿಂದ ಬರುತ್ತಾರೆ. ಯಾರನ್ನೂ ನಿರ್ಲಕ್ಷಸಬಾರದು. ಸಾದ್ಯವಾದರೆ ರಕ್ಷಿಸುವ ಕೆಲಸ ಮಾಡಿದ್ದಲ್ಲಿ ಎಷ್ಟೋ ಜನ ತಮ್ಮ ಕುಟುಂಬವನ್ನು ಸೇರಿರುವ ಉದಾಹರಣೆಗಳು ಬಹಳಷ್ಟು ಇದೆ. ಈ ಪ್ರಕರಣದಲ್ಲಯೂ ಕೂಡ ಮಹಿಳೆಯನ್ನು ಬಹಳ ಹರಸಾಹಸಪಟ್ಟು ರಕ್ಷಣೆ ಮಾಡಿದ್ದು, ಚಿಕಿತ್ಸೆ ಕೊಡಿಸಿದ ಬಳಿಕ ರಾಜ್ಯ ಮಹಿಳಾ ನಿಲಯದಿಂದ ಹಸ್ತಾಂತರವಾಗಿರುವುದು ಒಂದು ಉದಾಹರಣೆ. ಮಹಿಳೆಯನ್ನು ಹಸ್ತಾಂತರಿಸುವಲ್ಲಿ ಯಶಸ್ವಿಯಾದ ರಾಜ್ಯ ಮಹಿಳಾ ನಿಲಯದ ಅಧಿಕಾರಿ ಹಾಗೂ ಸಿಬಂಧಿಗಳಿಗೂ ಧನ್ಯವಾದಗಳು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now