
ಯುವ ವಿಚಾರ ವೇದಿಕೆ:
ಏಕ್ ಪೇಡ್ ಮಾ ಕೆ ನಾಮ್ ವನಮಹೋತ್ಸವ ಅಭಿಯಾನ
ಭಾರತ ಸರಕಾರ , ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಮೈ ಭಾರತ್ ಉಡುಪಿ ಹಾಗೂ ಸುವರ್ಣ ಎಂಟರ್ಪ್ರೈಸಸ್ ಬ್ರಹ್ಮಾವರ ಇವರ ಜಂಟಿ ಸಹಯೋಗದೊಂದಿಗೆ ಯುವ ವಿಚಾರ ವೇದಿಕೆಯ ರಜತ ಸಂಭ್ರಮದ ಅಂಗವಾಗಿ ಏಕ್ ಪೇಡ್ ಮಾ ಕೆ ನಾಮ್ ಅಭಿಯಾನ ವನ್ನು ವೇದಿಕೆಯ ವಠಾರ ಹಾಗೂ ಉಪ್ಪೂರು ಗ್ರಾಮದ ಯುವ ವಿಚಾರ ವೇದಿಕೆಯ ಸದಸ್ಯರ ಮನೆ ಮನೆಗೆ ತೆರಳಿ ಮಾತೆಯ ಹೆಸರಲ್ಲಿ ಒಂದು ಗಿಡ ನೆಟ್ಟು ಅಭಿಯಾನವನ್ನು ನಡೆಸಲಾಯಿತು.
ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಉಪ್ಥಿತರಿದ್ದ ಸುವರ್ಣ ಎಂಟರ್ ಪ್ರೈಸಸ್ ಬ್ರಹ್ಮಾವರ ಇದರ ಮಾಲಕರು ಸಮಾಜ ಸೇವಕರು ಆದ ಮಧುಸೂಧನ್ ಹೇರೂರು ಗಿಡ ಹಾಗೂ ಮರಗಳ ಮಹತ್ವ, ಗಿಡಗಳ ಪ್ರಯೋಜನ, ಔಷದೀಯ ಗುಣಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಲಲಿತಾ, ರೋಟರಿ ಕಲ್ಯಾಣಪುರ ವಿಜಯ್ ಮಾಯಾಡಿ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರ, ವೇದಿಕೆಯ ಸದಸ್ಯರು ಹಾಗೂ ಅಂಗನವಾಡಿ ಶಿಕ್ಷಕಿ ಮಾತೆ ಸುಜಾತ ಟೀಚರ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು , ವೇದಿಕೆಯ ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್ ಉಪಸ್ಥಿತರಿದ್ದು ಸರ್ವರನ್ನು ಸ್ವಾಗತಿಸಿದರು.
ಮೈ ಭಾರತ್ ಉಡುಪಿ ಇವರ ಸಂಪೂರ್ಣ ಮಾರ್ಗದರ್ಶನ ಹಾಗೂ ಸಹಕಾರದಿಂದ ನಡೆದ ಅಭಿಯಾನದಲ್ಲಿ ಸುಮಾರು 200 ಗಿಡಗಳನ್ನು ವೇದಿಕೆಯ ವಠಾರ , ಸದಸ್ಯರ ಹಾಗೂ ಸಾರ್ವಜನಿಕರ ಮನೆ ಮನೆಗೆ ತೆರಳಿ ಗಿಡ ನೆಟ್ಟು ಏಕ್ ಪೇಡ್ ಮಾ ಕೆ ನಾಮ್ ಅಭಿಯಾನವನ್ನು ಯಶಸ್ವಿ ಗೊಳಿಸಲಾಯಿತು.
ವೇದಿಕೆಯ ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು ಹಾಗೂ ಜೊತೆ ಕಾರ್ಯದರ್ಶಿ ಶಕುಂತಳಾ ಸರ್ವರಿಗೂ ವಂದಿಸಿದರು.








Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























