ವೃತ್ತಿಯಲ್ಲಿ ಆತ್ಮವಿಶ್ವಾಸ – ಶಿಸ್ತು ಮುಖ್ಯ -ಡಾ.ಸೌಮ್ಯ ಬಿ.ಪಿ

ವೃತ್ತಿಯಲ್ಲಿ ಆತ್ಮವಿಶ್ವಾಸ – ಶಿಸ್ತು ಮುಖ್ಯ -ಡಾ.ಸೌಮ್ಯ ಬಿ.ಪಿ

0Shares

ಉಜಿರೆ : ನಾವು ಕೈ ಗೊಳ್ಳುವ ವೃತ್ತಿಯಲ್ಲಿ ಶಿಸ್ತು ಬಹುಮುಖ್ಯ. ನೀವು ಮಾಡುವ ಕೆಲಸದಲ್ಲಿ ಕಾರ್ಯಕ್ಷಮತೆ ಅನ್ನುವುದನ್ನು ಅಳವಡಿಸಿಕೊಂಡು ಆತ್ಮವಿಶ್ವಾಸ ಬೆಳೆಸಿಕೊಂಡು ಮುಂದುವರೆಯಬೇಕು.

ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ಸಮಯ ನಿರ್ವಹಣೆ ಮಾಡಿಕೊಳ್ಳಿ. ಗ್ರಾಹಕರ ಜೊತೆಗೆ ಉತ್ತಮ ಸಂವಹನ ಮಾಡಿ. ಉತ್ತಮವಾದ ಮನೋಭಾವ ಬೆಳಸಿಕೊಳ್ಳಿ. ಸರಕಾರದ ಮತ್ತು ಬ್ಯಾಂಕಿನ ಆರ್ಥಿಕ ಸಹಕಾರ ಪಡೆದುಕೊಂಡು ಮುಮದುವರೆಯಿರಿ. ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಇಂತಹ ಒಂದು ಉತ್ತಮವಾದ ಅವಕಾಶ ಕಲ್ಪಸಿಕೊಟ್ಟಿದ್ದಾರೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ವಿಭಾಗ ಡೀನ್ ಡಾ. ಸೌಮ್ಯ ಬಿ.ಪಿ ಅಭಿಪ್ರಾಯ ಪಟ್ಟರು. ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 45 ದಿನಗಳ ಕಾಲ ನಡೆದ * ಕಂಪ್ಯೂಟರ್ ಡಿ.ಟಿ.ಪಿ ಮತ್ತ 30 ದಿನಗಳ ಕಾಲ ನಡೆದ

ಮಹಿಳಾ ಟೈಲರಿಂಗ್* ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭಹಾರೈಸಿದರು. ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಅಜೇಯ ಅವರು ಸ್ವಾಗತಿಸಿದರು. ಸಂಸ್ಥೆಯ *ಹಿರಿಯ ಉಪನ್ಯಾಸಕರಾದ *ಅಬ್ರಹಾಂ ಜೇಮ್ಸ್* ಕಾರ್ಯಕ್ರಮ ನಿರೂಪಿಸಿದರು *ಉಪನ್ಯಾಸಕರಾದ *ಕೆ.ಕರುಣಾಕರ ಜೈನ್* ವಂದಿಸಿದರು. ಕಾರ್ಯಕ್ರಮದಲ್ಲಿ ಅತಿಥಿ ಉಪ್ಯಾಸಕಿಯಾದ ಶ್ರೀಮತಿ ವೀಣಾ ಉಪಸ್ಥಿತರಿದ್ದರು. ಕುಮಾರಿ

ವಿಧಾತ್ರಿ ಪ್ರಾರ್ಥನೆ ಮಾಡಿದರು.

ಶಿಬಿರಾರ್ಥಿಗಳಾದ ಬಸವರಾಜ್, ಶೃಜನ್ಯ, ದಿವ್ಯಾ, ವಿಧಾತ್ರಿ ತಮ್ಮ ತರಬೇತಿಯ ಅನುಭವ ಹಂಚಿಕೊಂಡರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now