
ಮುಂಬಯಿ, ಜು.02: ತುಳುವರ ಹೆಮ್ಮೆಯ ಅಂತಾರಾಷ್ಟ್ರೀಯ ಸಂಸ್ಥೆ ಅಮೆರಿಕಾದಲ್ಲಿರುವ ಆಲ್ ಅಮೆರಿಕಾ ತುಳು ಅಸೋಸಿಯೇಷನ್‍ನ ನಾಲ್ಕನೆ ಹುಟ್ಟು ಹಬ್ಬವನ್ನು ತುಳು ಸಿರಿ ಪರ್ಬ ಹೆಸರಲ್ಲಿ ಬರುವ ಜುಲೈ 4ರಿಂದ 6ರ ತನಕ ಮೂರು ದಿನಗಳ ಸಂಭ್ರಮಾಚರಣೆಯಲ್ಲಿ ನಡೆಸಲಿದೆ

ಮೊದಲ ದಿನ ಜುಲೈ ನಾಲ್ಕನೇ ತಾರೀಕು ವಿಶ್ವದ ಎಲ್ಲಾ ತುಳುವರ ಸೇರುವಿಕೆಯೊಂದಿಗೆ ನಾರ್ಥ್ ಕೆರೋಲಿನದ ದಿ ಲೋಟರ್ಸ್ ಪಾರ್ಟಿ ಹಾಲ್ ಇಲ್ಲಿ ಔತಣಕ್ಕಾಗಿ ಸೇರುವುದರೊಂದಿಗೆ ಕಾರ್ಯಕ್ರಮ ವಿದ್ಯುಕ್ತವಾಗಿ ಆರಂಭವಾಗಲಿದೆ.
ಐದನೇ ತಾರೀಕು ಮುಖ್ಯ ಕಾರ್ಯಕ್ರಮವು ಆಟ ಸಿರಿ ಮುಡಿ, ಆಟ ಸನ್ಮಾನ ಮತ್ತು ಆಟ ಸಿರಿನುಡಿ ಪ್ರಶಸ್ತಿ ಪ್ರದಾನದೊಂದಿಗೆ ಅಲ್ಸ್ಟನ್ ರಿಡ್ಜ್ ಮಿಡ್ಲ್ ಸ್ಕೂಲ್ ಕ್ಯಾರಿ ಕೆರೋಲಿನಾ ಇಲ್ಲಿ ಆಯೋಜನೆಗೊಂಡಿದ್ದು ಇದರಲ್ಲಿ ಕರ್ನಾಟಕದ ವಿಧಾನ ಸಭಾಸಭಾಪತಿ ಯು.ಟಿ ಖಾದರ್, ನಿಟ್ಟೆ ವಿಶ್ವ ವಿದ್ಯಾಲಯದ ತುಳು ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ| ಸಾಯಿಗೀತ ಹೆಗ್ಡೆ , ಕತಾರ್ ಕನ್ನಡ ಸಂಘದ ಅಧ್ಯಕ್ಷ ಎ ಟಿ ಎಸ್ ಸಂಸ್ಥೆಯ ಮುಖ್ಯಸ್ಥ ಡಾ| ರವಿ ಶೆಟ್ಟಿ ಮೂಡಂಬೈಲ್ ಮತ್ತು ಎಂ ರಿಸಲ್ಪ್ಟ್ ಸಂಸ್ಥೆಯ ಸಂಸ್ಥಾಪಕ ಮುಖ್ಯಾಧಿಕಾರಿ ಶೇಖರ್ ಮಾಯಕ್ ಮುಖ್ಯ ಅತಿಥಿsಗಳಾಗಿ ಪಾಲು ಪಡೆಯುತ್ತಾರೆ. ಕಾರ್ಯಕ್ರಮದಲ್ಲಿ ವಿಶೇಷ ತುಳುನಾಡ ಖಾದ್ಯಗಳು ಮತ್ತು ನೆಲಸಂಸ್ಕೃತಿಯ ಮನರಂಜನಾ ಕಾರ್ಯಕ್ರಮಗಳು, ಚರ್ಚೆಗಳು ನಡೆಯಲಿವೆ .
ಆರನೇ ತಾರೀಕು ಕಾರ್ಯಕ್ರಮದ ಅಂತಿಮ ದಿನದಲ್ಲಿ ವಿಶೇಷ ಮಿಲನ ಕೂಟವನ್ನು ಆಯೋಜಿಸಿರುವ ಸಂಸ್ಥೆ ಅಲ್ಲಿ ನಮ್ಮ ಬಾಲ್ಯದ ಆಟೋಟಗಳನ್ನು, ಹಾಡು ಹಸೆ ಮನರಂಜನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 01 ಹೈ ಹೌಸ್ ರೋಡ್ ಕೇರಿ ಎನ್ ಸಿ ಇಲ್ಲಿ ನಡೆಯಲಿದೆ.
ವಿಶ್ವದ ತುಳುವರನ್ನು ಸೇರಿಸಿಕೊಂಡು ಮೊದಲ ಬಾರಿಗೆ ಆರಂಭಿಸಿರುವ ಈ ಸಿರಿಪರ್ಬ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕಾರ್ಯಕ್ರಮದ ಮುಖ್ಯಕಾರ್ಯಕಾರಿ ಸಚೇತಕೆ ರಂಜನಿ ಅಸೈಗೋಳಿ, ಅಧ್ಯಕ್ಷೆ ಶ್ರೀವಲ್ಲಿ ರೈ ಮಾರ್ಟೆಲ್, ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಮತ್ತು ಆಟ ಸಂಸ್ಥೆಯ ಸರ್ವ ಸದಸ್ಯರು ಅದರ ಪೂರ್ವಕವಾಗಿ ಭಿನ್ನವಿಸಿಕೊಂಡಿದ್ದಾರೆ





Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























