
ಕತಾರಿನಲ್ಲಿರುವ ಭಾರತೀಯ ದೂತಾವಾಸದ ಸಹಯೋಗದೊಂದಿಗೆ ಭಾರತೀಯ ಕ್ರೀಡ ಕೇಂದ್ರವು ಮತ್ತು ಹಲವು ಭಾರತೀಯ ಸಮುದಾಯದ ಸಂಘ ಸಂಸ್ಥೆಗಳ ನೆರವಿನೊಂದಿಗೆ ಐಡಿಯಲ್ ಭಾರತೀಯ ಶಾಲೆಯ ಆಟದ ಮೈದಾನದ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮವನ್ನು ಸುಮಾರು 1500ಕ್ಕೂ ಹೆಚ್ಚು ಜನರು ಸೇರಿ ಶನಿವಾರ 21 ಜೂನ್ 2025 ರಂದು ಸಂಜೆ ಆಚರಿಸಲಾಯಿತು.

ಸಂಜೆಯ ಕಾರ್ಯಕ್ರಮವು ಯೋಗಭ್ಯಾಸದ ಕುರಿತು ಆಯೋಜಿಸಲಾಗಿದ್ದ ರಸಪ್ರಶ್ನೆ ಕಾರ್ಯಕ್ರಮದಿಂದ ಪ್ರಾರಂಭವಾಯಿತು. ನಂತರ ಮಹಿಳೆಯರಿಗೆ ಪುರುಷರಿಗೆ ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ಯೋಗಾಸನದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ವಿಶೇಷವಾದ ಧ್ಯಾನ ಕಾರ್ಯಕ್ರಮವು ಆಗಮಿಸಿದ್ದ ಎಲ್ಲರಿಗೂ ವಿಶ್ರಾಂತಿಯನ್ನು ನೀಡಲು ಸಹಕರಿಸಿತು.
ಭಾರತದಿಂದ ಆಗಮಿಸಿದ್ದ ಹಾಗೂ ಸ್ಥಳೀಯ ನಿಪುಣ ತಂಡಗಳಿಂದ ಯೋಗ ನೃತ್ಯವನ್ನು ಪ್ರದರ್ಶಿಸಲಾಯಿತು.
ನಂತರ ಆಗಮಿಸಿದ್ದ ಎಲ್ಲರಿಗೂ ಸಾಮೂಹಿಕ ಯೋಗಭ್ಯಾಸ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕೇವಲ ಭಾರತೀಯರು ಮಾತ್ರವಲ್ಲದೆ ನೆರೆ ರಾಷ್ಟ್ರಗಳಾದ ನೇಪಾಳ ಶ್ರೀಲಂಕಾ ಹಾಗೂ ಆಫ್ರಿಕಾ ಖಂಡದ ಹಲವು ದೇಶಗಳ ನಾಗರೀಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ರಾಯಭಾರಿಗಳಾದ ಶ್ರೀ ವಿಪುಲ್ ಅವರು 2014ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲು ಪ್ರಾರಂಭಿಸಿದ ಐತಿಹಾಸಿಕ ಗಳಿಗೆಯನ್ನು ಶ್ಲಾಘಿಸಿದರು. ಈ ದಿನಾಚರಣೆಗೆ ಮೂಲ ಕಾರಣಕರ್ತರಾದ ಭಾರತೀಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದರು.

ಅಂತರರಾಷ್ಟ್ರೀಯ ಸಮುದಾಯದ ಈ ನಿಲುವನ್ನು 177 ರಾಷ್ಟ್ರಗಳು ತಮ್ಮದಾಗಿಸಿಕೊಂಡಿರುವುದು ಬಹಳ ಪ್ರಶಂಸನಿಯಾ, ಕಳೆದ ಒಂದು ದಶಕದಿಂದ ಯೋಗಭ್ಯಾಸವು ಜಾಗತಿಕ ಮಟ್ಟದಲ್ಲಿ ಸಂಪೂರ್ಣ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತಾ ಪ್ರಪಂಚದಾದ್ಯಂತ ಸಹಸ್ರಾರು ಜನರಿಗೆ ಸದುಪಯೋಗವನ್ನು ತಂದಿರುವುದು ಸಂತಸ ಕರ ಎಂದು ಹೇಳಿದರು.
ಹೀಗೆ ಇನ್ನೂ ವರ್ಷದಾದ್ಯಂತ ಹಾಗೂ ಮುಂಬರುವ ವರ್ಷಗಳಲ್ಲಿ ಯೋಗಭ್ಯಾಸದ ಮಹತ್ವವು ಪ್ರಪಂಚದಲ್ಲೆಡೆ ಪಸರಿಸಲೆಂದು ಆಶಿಸೋಣ

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























