ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ “ತಾಯಿಯ ಹೆಸರಿನಲ್ಲಿ ಒಂದು ಗಿಡ” ನೆಡುವ ಕಾರ್ಯಕ್ರಮ.

ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ “ತಾಯಿಯ ಹೆಸರಿನಲ್ಲಿ ಒಂದು ಗಿಡ” ನೆಡುವ ಕಾರ್ಯಕ್ರಮ.

0Shares

ಸಹಕಾರಕ್ಕೆ 100 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ, 2025ನೇ ವರ್ಷವನ್ನು “ಅಂತಾರಾಷ್ಟ್ರೀಯ ಸಹಕಾರಿ ವರ್ಷ 2025” ಎಂದು ಘೋಷಿಸಲಾಗಿದೆ. “ಏಕ್ ಪೇಡ್, ಮಾ ಕಾ ನಾಮ್” ಎಂಬ ಶೀರ್ಷಿಕೆಯಡಿಯಲ್ಲಿ, “ಸಹಕಾರ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸಬಲ್ಲವು” ಎಂಬ ಧ್ಯೇಯ ವಾಕ್ಯದೊಂದಿಗೆ ದೇಶದಾದ್ಯಾಂತ ಸಹಕಾರಿ ಸಂಸ್ಥೆಗಳ ಮೂಲಕ ಪರಿಸರ ಕಾಳಜಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತಿದೆ.**

ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ, ಮತ್ತು ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಇವರ ಸಹಯೋಗದೊಂದಿಗೆ 30.06.2025 ರಂದು ಸರಕಾರಿ ಪ್ರೌಢಶಾಲೆ, ಕೊಳಲಗಿರಿ ಶಾಲೆಯಲ್ಲಿ ಗಿಡ ನೆಡುವ ಹಾಗೂ ಗಿಡ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್. ರಮೇಶ್ ಶೆಟ್ಟಿ ರವರು ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಉದ್ಘಾಟಿಸಿದರು.

ಸಂಘದ ಉಪಾಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ, ನಿರ್ದೇಶಕರಾದ ಹೂವಯ್ಯ ಸೇರ್ವೆಗಾರ್, ಪ್ರಫುಲ್ಲಚಂದ್ರ , ದೋಗು ಪೂಜಾರಿ, ಜಯಕರ್ ಆಚಾರ್, ಸುರೇಶ್ ಸುವರ್ಣ, ರಮೇಶ್ ಕರ್ಕೇರಾ, ಪರಮೇಶ್ವರ ಯು, ಗುಣಾಕಾರ ನಾಯ್ಕ್, ಪ್ರೇಮಾ ಲೂವಿಸ್, ವಿದ್ಯಾ ಜಯರಾಮ್ ಶೆಟ್ಟಿ, ಶಂಕರ್ ಶೆಟ್ಟಿರವರು*, ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರು ಗಿಡಗಳನ್ನು ನೆಡುವ ಮೂಲಕ ಪರಿಸರ ಕಾಳಜಿಗೆ ಉತ್ತೇಜನ ನೀಡಿದರು.

ಅತ್ಯುತ್ತಮ ಹಣ್ಣು ಹಂಪಲಿನ ರಾಮಫಲ ಮತ್ತು ಲಕ್ಷ್ಮಣ ಫಲ ಇನ್ನಿತರ ಫಲವಸ್ತುಗಳ ಗಿಡಗಳನ್ನು ವಿತರಿಸಿರುವುದರಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಸಾರ್ವಜನಿಕರು, ಪರಿಸರ ಪ್ರೇಮಿಗಳು ಗಿಡ ಪಡೆದುಕೊಳ್ಳಲು ಭಾಗವಹಿಸಿದ್ದರು. ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಸರಸ್ವತಿ ಮೇಡಂ ಹಾಗೂ ಶಿಕ್ಷಕ ವ್ರಂದದವರು ಶಾಲಾ ವಿದ್ಯಾರ್ಥಿಗಳು ಗಿಡಗಳನ್ನು ಪಡೆದುಕೊಂಡರು. ಸಂಘದ ಸಿಬ್ಬಂದಿಗಳು, ಸಂಘದ ಸ್ಥಳೀಯ ಸದಸ್ಯರು ಭಾಗವಹಿಸಿ ಸುಮಾರು 500 ಗಿಡಗಳನ್ನು ವಿತರಿಸುವ ಈ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದುಕೊಟ್ಟರು.
ಗಿಡವನ್ನು ಪಾಲನೆ ಪೋಷಣೆ ಮಾಡಿ ಅತಿ ಬೇಗ ಫಲ ನೀಡಿದ ಗಿಡಕ್ಕೆ ಪೋಷಣೆ ಮಾಡಿರುವ ಪೋಷಕರಿಗೆ ಸ್ಪರ್ಧೆಯಲ್ಲಿ ವಿಜೇತರಿಗೆ ಸಂಸ್ಥೆ ವತಿಯಿಂದ ಬಹುಮಾನವನ್ನು ನೀಡುವುದಾಗಿ ಘೋಷಣೆ ಮಾಡಲಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now