
ಎಸ್ ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ಉಡುಪಿ ಶಾಖೆಯ ಹಿರಿಯ ಶಾಖಾ ವ್ಯವಸ್ಥಾಪಕರಾದ ಶ್ರೀಯುತ ಲಕ್ಷ್ಮೀ ನಾರಾಯಣ. ಬಿ. ಆಚಾರ್, ಇವರು 41 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿ, ದಿನಾಂಕ 31-05 -2025 ರಂದು ನಿವೃತ್ತಿಗೊಂಡಿದ್ದು , ಇವರ ಬೀಳ್ಕೊಡುಗೆ ಸಮಾರಂಭವು ವುಡ್ ಲ್ಯಾಂಡ್ ಹೋಟೆಲ್ ನ ಸಭಾಭವನದಲ್ಲಿ ಸೊಸೈಟಿಯ ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯರ ಅಧ್ಯಕ್ಷತೆಯಲ್ಲಿ ನೆರವೇರಿತು.
ನಿವೃತ್ತಿ ಎಂಬುದು ವೃತ್ತಿಗಷ್ಟೇ ವಿನಃ ಪ್ರವೃತ್ತಿಗಲ್ಲ ಎಂಬ ಮಾತಿನೊಂದಿಗೆ ಶ್ರೀ ಲಕ್ಷ್ಮೀನಾರಾಯಣ ಬಿ ಆಚಾರ್ ಅವರನ್ನು ಅಭಿನಂದಿಸಿ, ಅವರು ನಡೆದು ಬಂದ ದಾರಿಯನ್ನು ತಿಳಿಸುವುದರೊಂದಿಗೆ ಇನ್ನುಳಿದ ಸಿಬ್ಬಂದಿಯವರಿಗೆ ದಾರಿದೀಪವಾಗಲಿ ಎಂದು ಅಧ್ಯಕ್ಷರು ಶುಭ ಹಾರೈಸಿದರು. ಪ್ರಧಾನ ವ್ಯವಸ್ಥಾಪಕರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೀಳ್ಕೊಡುಗೆ ಸಮಾರಂಭದ ವೇದಿಕೆಯಲ್ಲಿ ನಿರ್ದೇಶಕರುಗಳಾದ ಕೆ. ಯಜ್ಞೇಶ್ವರ ಆಚಾರ್ಯ, ಕೆ. ಶಶಿಕಾಂತ್ ಆಚಾರ್ಯ, ಮಲ್ಲಪ್ಪ ಎನ್ ಪತ್ತಾರ್, ಚಂದ್ರಶೇಖರ್ ಎ.ಎಸ್, ಯು. ರಮೇಶ್ ರಾವ್ ಉಪಸ್ಥಿತರಿದ್ದರು.
ಗುರು ಶ್ರೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಶ್ರೀಧರನ್, ಸದಸ್ಯ ಗ್ರಾಹಕರಾದ ಸದಾನಂದ ನಾಯಕ್, ಅಶ್ವಥ್ ಶೆಟ್ಟಿ ಸಂಸ್ಥೆಯ ಕಾನೂನು ಸಲಹೆಗಾರರಾದ ಗಂಗಾಧರ್ ಹೆಚ್.ಎಂ, ಹಾಗೂ ವಿವಿಧ ಸಹಕಾರಿ ಸಂಘ ಮತ್ತು ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯ ಗ್ರಾಹಕರು ಶ್ರೀ ಬಿ ಲಕ್ಷ್ಮೀನಾರಾಯಣ ಆಚಾರ್ ಸುದೀರ್ಘ ಸೇವೆಯನ್ನು ಪ್ರಶಂಸಿಸಿ ಶುಭಾಶಯಗೈದರು. ಮಾರಟ ಅಧಿಕಾರಿಯಾದ ಜಯಪ್ರಕಾಶ್ ಬಿ. ಎಸ್., ಎಂಪ್ಲೋಯೀಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಶಾಖಾ ವ್ಯವಸ್ಥಾಪಕರಾದ ರಾಜೇಶ್, ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಾರ್ಕಳ ಶಾಖೆಯ ಶಾಖಾ ವ್ಯವಸ್ಥಾಪಕರು, ಆಟೋ ನಿರ್ವಾಹಕ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಶಾಖಾ ವ್ಯವಸ್ಥಾಪಕರು, ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಉಡುಪಿ ಜಿಲ್ಲಾ ಕೃಷಿಕ ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ್ ಬಲ್ಲಾಳ್ , ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ವೆಂಕಟೇಶ್ ಆಚಾರ್ಯ, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕಾಳಿಕಾಂಬಾ ಮಹಿಳಾ ಮಂಡಳಿ ಶಿವಳ್ಳಿ ಇದರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕನಕದಾಸ ಜ್ಯುವೆಲ್ಲರ್ಸ್ ನ ಮಾಲಕರಾದ ಅಲೆವೂರು ನಾಗರಾಜ ಆಚಾರ್ಯ, ಉಡುಪಿ ರಾಜ್ ಟವರ್ ನ ಮಾಲಕರಾದ ವಸಂತ್ ಕಾಮತ್, ಪಿ. ನ್ ಆಚಾರ್ಯ, ಬಿ. ಎ. ಆಚಾರ್ಯ, ರಾಜ್ ಮೋಹನ್,ಸರಾಫರು ಜಗದೀಶ್ ಆಚಾರ್ಯ, ಹರಿಶ್ಚಂದ್ರ ಜೋಗಿ, ಸುಧಾಕರ್ ರಾವ್ ಯು,ವಿವಿಧ ಶಾಖೆಗಳ ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿವರ್ಗದವರು, ನಿವೃತ್ತ ಶಾಖಾ ವ್ಯವಸ್ಥಾಪಕರು ಹಾಗೂ ನಿವೃತ್ತ ಸಿಬ್ಬಂದಿಯವರು, ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಸಿಬ್ಬಂದಿಯವರು, ಉಡುಪಿ ಶಾಖೆಯ ಸದಸ್ಯ ಗ್ರಾಹಕರು ಮೊದಲಾದವರು ಉಪಸ್ಥಿತರಿದ್ದರು.
ಅಭಿನಂದನೆ ಸ್ವೀಕರಿಸಿದ ನಂತರ ಹಿರಿಯ ಶಾಖ ವ್ಯವಸ್ಥಾಪಕರು ಬ್ಯಾಂಕ್ ನಲ್ಲಿ ಠೇವಣಿ ಹಾಗೂ ಸಾಲ ಸೌಲಭ್ಯವನ್ನು ಕ್ಲಪ್ತ ಸಮಯಕ್ಕೆ ಪಾವತಿಸಿದ ಎಲ್ಲಾ ಗ್ರಾಹಕರಿಗೆ ಮನದಾಳದ ಅಭಿನಂದನೆಯನ್ನು ತಿಳಿಸಿದರು
ಅನ್ವಿeಶ್ ಪ್ರಾರ್ಥಿಸಿದ ಈ ಕಾರ್ಯಕ್ರಮದಲ್ಲಿ ಸಿಬ್ಬಂದಿ ರಾಜಿತ ಸ್ವಾಗತಿಸಿ, ರಕ್ಷಿತ್ ವಂದಿಸಿದರು ಹಾಗೂ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























