
ಮುಂಬಯಿ (ಆರ್‍ಬಿಐ), ಎ.30: ರಿಪಬ್ಲಿಕ್ ಆಫ್ ಬೆಲಾರಸ್‍ನ ಕಾನ್ಸುಲ್ ಜನರಲ್ ಅಲಿಯಾಕ್ಸಂಡರ್ ಮತ್ಸುಕೌ ಅವರು ಇಂದಿಲ್ಲಿ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಇವರನ್ನು ಇಂದಿಲ್ಲಿ ಮಂಗಳವಾರ ಮುಂಬಯಿಯಲ್ಲಿನ ರಾಜಭವನದಲ್ಲಿ ಭೇಟಿಯಾದರು.
ಕಾನ್ಸುಲ್ ಜನರಲ್ ಮಹಾರಾಷ್ಟ್ರ ಮತ್ತು ಬೆಲಾರಸ್ ಪ್ರದೇಶಗಳ ನಡುವೆ ಪ್ರಾದೇಶಿಕ ಮಟ್ಟದ ತಿಳುವಳಿಕೆಯನ್ನು ಉತ್ತೇಜಿಸಲು ಮತ್ತು ಕೃಷಿ ಮತ್ತು ತೋಟಗಾರಿಕೆ, ಯಂತ್ರೋಪಕರಣಗಳು, ಶಿಕ್ಷಣ, ಜವಳಿ, ಚಲನಚಿತ್ರ ನಿರ್ಮಾಣ, ಪ್ರವಾಸೋದ್ಯಮ, ಸಂಸ್ಕೃತಿ ಇತ್ಯಾದಿ ಕ್ಷೇತ್ರಗಳಲ್ಲಿ ಸಹಕಾರದ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಮುಂಬಯಿಯಲ್ಲಿರುವ ಬೆಲಾರಸ್ ಕಾನ್ಸುಲೇಟ್ ಜನರಲ್ ಕಾನ್ಸುಲ್ ಕಾನ್ಸ್ಟಾನ್ಸಿನ್ ಪಿಂಚುಕ್ ಉಪಸ್ಥಿತರಿದ್ದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























