ಕೀಳಂಜೆ ಶಾಲೆಯಲ್ಲಿ ಸಡಗರದ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ

ಕೀಳಂಜೆ ಶಾಲೆಯಲ್ಲಿ ಸಡಗರದ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ

0Shares

ಬ್ರಹ್ಮವಾರ:ಕೀಳಂಜೆ ಶಾಲೆಯಲ್ಲಿ ಸಡಗರದ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ. ಬಿ.ವಿ.ಹೆಗ್ಡೆ.ಅ.ಹಿ.ಪ್ರಾ.ಶಾಲೆ ಕೀಳಂಜೆಯಲ್ಲಿ ಹಾವಂಜೆ ಗ್ರಾಮ ಪಂಚಾಯತಿನ ಅಧ್ಯಕ್ಷೆ ಶ್ರೀ ಮತಿ ಆಶಾ ಡಿ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಶಾಲಾ ಪ್ರಾರಂಭೋತ್ಸವ ,ಉಚಿತ ನೋಟ್ ಬುಕ್ ಹಾಗೂ ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮವು ನೆರವೇರಿತು.ಅತಿಥಿಗಳು ಜೊತೆಗೂಡಿ ಅಕ್ಷರ ಜ್ಯೋತಿಯನ್ನು ಪ್ರಜ್ವಲಿಸಿದರು.ಒಂದನೇ ತರಗತಿಯ ವಿದ್ಯಾರ್ಥಿಗಳನ್ನು ಅತ್ಯಂತ ಗೌರವದಿಂದ ಆಹ್ವಾನಿಸಿ ,ದೀಪದಾರತಿಯನ್ನುಬೆಳಗಿದರು.ಉಚಿತ ನೋಟ್ ಬುಕ್ ಗಳ ದಾನಿಗಳಾದ ಫ್ರಾಂಕಿ ಡಿಸೋಜ-ಜಿಲ್ಲಾಧ್ಯಕ್ಷರು(,ತು.ರ.ವೇದಿಕೆ,) ಶ್ರೀ ಉ‌ಮೇಶ್ ಹೆಗ್ಡೆ ಬಾಣಬೆಟ್ಟು, ಜಿಲ್ಲಾ ಉಪಾಧ್ಯಕ್ಷರು( ತು.ರ.ವೇ.) ಶ್ರೀ ಸತೀಶ್ ಪೂಜಾರಿ ಕೀಳಂಜೆ ಬ್ರಹ್ಮಾವರ ತಾಲೂಕು ಅಧ್ಯಕ್ಷರು (ತು.ರ.ವೇ.) ಅತಿಥಿಗಳನ್ನೊಳಗೊಂಡು ಉಚಿತ ನೋಟ್ ಬುಕ್ ಗಳನ್ನು ವಿತರಿಸಿದರು.ಗ್ರಾ.ಪ. ಹಾವಂಜೆಯ ಸದಸ್ಯರಾದ ಶ್ರೀ ಉದಯ ಕೋಟ್ಯಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ವಿಕ್ರಾಂತ್ ಶೆಟ್ಟಿ ಕೀಳಂಜೆ, ಹ.ವಿ.ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಮಮತಾ ಶೆಟ್ಟಿ, ಬಾಣಬೆಟ್ಟು, ಹಿರಿಯ ಹಳೆ ವಿದ್ಯಾರ್ಥಿ ಗಳಾದ ಶ್ರೀ ಗಣಪತಿನಾಯಕ್, ಮಂಜಪ್ಪ ಸನಿಲ್, ಹಾಗೂ ಶಾಲಾಭಿವೃದ್ಧಿಯ ಉಪಾಧ್ಯಕ್ಷರಾದ ಶ್ರೀ ಹರೀಶ್ ಆಚಾರ್ಯ ರವರು ವಿದ್ಯಾರ್ಥಿಗಳಿಗೆ ಹಿತ‌ನುಡಿಗಳನ್ನು ಆಡಿದರು. ಮುಖ್ಯೋಪಾಧ್ಯಾರಾದ ಸಖಾರಾಮ್ ಮಾಸ್ತರ್ ರವರು ಪ್ರತಿವರ್ಷ ವಿದ್ಯಾರ್ಥಿ ಗಳಿಗೆ ಉಚಿತ ಸಮವಸ್ತ್ರ ಶೂ ಸಾಕ್ಸ್ ,ಇಂಗ್ಲೀಷ್ ಬೋಧಿಸುವ ಶಿಕ್ಷಕಿಯ ಸಂಭಾವನೆ ಯನ್ನು ನೀಡುವ ಶಾಲಾ ವ್ಯವಸ್ಥಾಪಕರಾದ ಅಜಿತ್ ಶೆಟ್ಟಿ ಬಾಣಬೆಟ್ಟು ಅವರನ್ನು ಶ್ಲಾಘಿಸಿದರು.ಈ ಹಿಂದೆ ಉಚಿತ ನೋಟ್ ಬುಕ್ ಗಳನ್ನು ನೀಡಿದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಬಾಣಬೆಟ್ಟು ,ಶ್ರೀ ಸತೀಶ್ ಶೆಟ್ಟಿ ಬಾಣಬೆಟ್ಟು , ವಿಕ್ರಾಂತ್ ಶೆಟ್ಟಿ ಮತ್ತು ಮುಳ್ಳುಗುಡ್ಡೆ ಶ್ರೀ ಕೊರಗಜ್ಜ ಕ್ಷೇತ್ರದ ಪೀಠಾಧಿಕಾರಿ ಶ್ರೀ ಪುನೀತ್ ಶೆಟ್ಟಿ ಅವರ ಕೊಡುಗೆಯನ್ನು ಸ್ಮರಿಸಲಾಯಿತು.ಶಿಕ್ಷಕರಾದ ಸುಕೇಶ್ ಕುಮಾರ್ ರವರು ಸ್ವಾಗತಿಸಿ ,ಗೌರವ ಶಿಕ್ಷಕಿ ಪ್ರೆಸಿಲ್ಲಾ ಮೇಡಂ ವಂದಿಸಿದರು. ಶಾಲಾಡಳಿತಾಧಿಕಾರಿ ಯಾದ ಶ್ರೀ ಸತೀಶ್ ಶೆಟ್ಟಿ ಬಾಣಬೆಟ್ಟು ರವರು ವಿದ್ಯಾರ್ಥಿ ಗಳಿಗೆ ಸಿಹಿ ಭೋಜನವನ್ನು ಉಣಬಡಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now