ಸ್ವರ್ಗೀಯ ಜಯ ಸಿ.ಸುವರ್ಣರ ಎಪ್ಪತ್ತೊಂಬತ್ತನೇ ಜನ್ಮದಿನದ ಸ್ಮರಣಾ ಕಾರ್ಯಕ್ರಮ

ಸ್ವರ್ಗೀಯ ಜಯ ಸಿ.ಸುವರ್ಣರ ಎಪ್ಪತ್ತೊಂಬತ್ತನೇ ಜನ್ಮದಿನದ ಸ್ಮರಣಾ ಕಾರ್ಯಕ್ರಮ

0Shares

ಮುಂಬಯಿ (ಆರ್‌ಬಿಐ), ಮೆ.೧೬: ನಾಯಕತ್ವದ ಗುಣಮಟ್ಟ ಎಂದೂ ಕಳೆದುಕೊಳ್ಳದಿದ್ದಾಗ ನಾಯಕತ್ವ ಸಫಲವಾಗುದುವು. ಎಲ್ಲೆಲ್ಲೂ ಸೋಲನ್ನು ಕಂಡರೂ ವ್ಯಕ್ತಿಗತವಾಗಿ ಎಂದೂ ಸೋಲದೆ ಮುನ್ನಡೆಯುವ ವ್ಯಕ್ತಿತ್ವ ಸಾಧನೆಯ ಶಿಖರವಾಗುವುದು. ಆತ್ಮವಿಶ್ವಾಸವು ಧುರೀಣರ ಆಶಯಗಳಿಗೆ ಪ್ರೇರಣೆಯ ವಿಶ್ವಾಸವಾಗಲಿದ್ದು ಇದನ್ನೇ ರೂಡಿಸಿ ಜಾತ್ಯಾತೀತ, ಪಕ್ಷತೀತವಾಗಿ ಬೆಳೆದು ಧುರೀಣರಾಗಿದ್ದ ಜಯ ಸುವರ್ಣರ ಅಭಿಮಾನ ಸದಾ ಅಮರವಾಗಿ ಉಳಿಯಲಿದೆ. ಸೂರ್ಯಕಾಂತ್‌ರ ೫೦ರ ಹುಟ್ಟುಹಬ್ಬ ಜಯ ಸುವರ್ಣರ ೫೦೦ರ ನೆನಪು ಮಾಡಿಕೊಳ್ಳುವ ಸಂದೇಶವಾಗಿದೆ ಎಂದು ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಇಂದಿಲ್ಲಿ ಗುರುವಾರ ಸಂಜೆ ಗೋರೆಗಾಂವ್ ಪೂರ್ವದ ಬ್ರೀಜ್‌ವಾಸಿ ಪ್ಯಾಲೇಸ್ ಸಭಾಗೃಹದಲ್ಲಿ ಮುಂಬಯಿ ಬಿಲ್ಲವಾಸ್ ಮತ್ತು ಶ್ರೀ ಜಯ ಸಿ.ಸುವರ್ಣ ಅಭಿಮಾನಿಗಳು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮೂಲ್ಕಿ ಹಾಗೂ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷ, ಭಾರತ್ ಬ್ಯಾಂಕ್‌ನ ಸರ್ವಾಂಗೀಣ ಅಭಿವೃದ್ಧಿಯ ಸರದಾರರಾಗಿದ್ದು ಅಗಲಿದ ಜಯ ಸಿ.ಸುವರ್ಣ ಅವರ ಶಾಶ್ವತ ಸ್ಫೂರ್ತಿಯ ೭೯ನೇ ಜನ್ಮದಿನದ ಸ್ಮರಣಾರ್ಥ ಸವಿನೆನಪು ಕಾರ್ಯಕ್ರಮ ಮತ್ತು ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ, ಉದಯೋನ್ಮುಖ ನಾಯಕ ಸೂರ್ಯಕಾಂತ್ ಜಯ ಸುವರ್ಣ ಅವರ ಸ್ವರ್ಣಜನ್ಮೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.

ಶ್ರೀ ಮಹಾಶೇಷ ರುಂಡಮಾಲಿನಿ (ಸ್ವರ್ಣ ನಾಗ ಮಂದಿರ) ಪಂಚಕುಠೀರ ಪೊವಾಯಿ ಇದರ ಶ್ರೀ ಸುವರ್ಣ ಬಾಬಾ ಚಿತ್ತೈಸಿ ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಜಯ ಸುವರ್ಣ ಬಹಳಷ್ಟು ಶ್ರಮಪಟ್ಟು ಕೆಲಸವನ್ನು ಮಾಡಿದ್ದಾರೆ. ಅSಂಡ ಸಮಾಜಕ್ಕೆ ಅನುಪಮ ಕೊಡುಗೆಯನ್ನಿತ್ತಿದ್ದಾರೆ ಎಂದರು. ಹಾಗೂ ಸೂರ್ಯಕಾಂತ್ ಅವರಿಗೆ ಗೋಲ್ಡ್ ವಾಚ್ ಕೊಡುಗೆಯಾಗಿ ನೀಡಿ ಕಾಲಚಕ್ರದಂತೆ ನಡೆದು ಜಯಣ್ಣರ ಧುರೀಣತ್ವದಂತೆ ನುಡಿದಂತೆ ನಡೆದು ಗೋಲ್ಡ್‌ಮ್ಯಾನ್ ನಾಯಕನಾಗಿ ಬೆಳೆಯುವಂತೆ ಹಾರೈಸಿದರು.
ಮುಖ್ಯ ಅತಿಥಿಯಾಗಿ ಉತ್ತರ ಮುಂಬಯಿಯ ಮಾಜಿ ಸಂಸದ ಗೋಪಾಲ್ ಸಿ.ಶೆಟ್ಟಿ, ಅತಿಥಿ ಅಭ್ಯಾಗತರಾಗಿ ಕರ್ನಾಟಕ ಸರ್ಕಾರದ ಮಾಜಿ ಸಚಿವ ಡಾ| ನಾರಾಯಣ ಆರ್.ಗೌಡ, ಬಂಟ್ಸ್ ಸಂಘ ಮುಂಬಯಿ (ಃuಟಿಣs Sಚಿಟಿghಚಿ ಒumbಚಿi Pಡಿesiಜeಟಿಣ) ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಪ್ರತಿಷ್ಠಿತ ಉದ್ಯಮಿಗಳಾದ ಹರೀಶ್ ಎಸ್.ಪೂಜಾರಿ (ವಡಾಲ), ಟಿಎಂಸಿ ಮಾಜಿ ಮೇಯರ್ ವಿನಾಕ್ಷಿ ಆರ್.ಶಿಂಧೆ, ಜಯಶ್ರೀಕೃಷ್ಣ ಪರಿಸರ ಪ್ರಮಿ ಸಮಿತಿ ಸಂಸ್ಥಾಪಕ ಜಯಕೃಷ್ಣ ಎ.ಶೆಟ್ಟಿ ಹಾಗೂ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಬಿಲ್ಲವರ ಸಂಘ ಬೆಂಗಳೂರು ಅಧ್ಯಕ್ಷ ವೇದ್ ಕುಮಾರ್, ಗೌರವ್ವಾನಿತ ಅತಿಥಿಗಳಾಗಿ ಶ್ರೀ ಕ್ಷೇತ್ರ ಕುದ್ರೋಳಿ ಮಂಗಳೂರು ಇದರ ಗೌರವ ಕೋಶಾಧಿಕಾರಿ ಅಡ್ವಕೇಟ್ ಪದ್ಮರಾಜ್ ಆರ್.ಪೂಜಾರಿ, ಉದ್ಯಮಿಗಳಾದ ಸುಂದರ್ ಪೂಜಾರಿ (ಪುಣೆ), ಗಣೇಶ್ ಆರ್.ಪೂಜಾರಿ ಥಾಣೆ, ಐಕಳ ಗುಣಪಾಲ್ ಆರ್.ಶೆಟ್ಟಿ, ಬೊಂಬೇ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಅಡ್ವಕೇಟ್ ಡಿ.ಕೆ.ಶೆಟ್ಟಿ, ಕುಲಾಲ ಸಂಘ ಮುಂಬಯಿ ಅಧ್ಯಕ್ಷ ರಘು ಡಿ.ಮೂಲ್ಯ, ಒಕ್ಕಲಿಗರ ಸಂಘ ಮುಂಬಯಿ ಅಧ್ಯಕ್ಷ ಕೆ.ರಾಜೇ ಗೌಡ, ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಎನ್.ದೇವಾಡಿಗ, ತೀಯ ಸಮಾಜ ಮುಂಬಯಿ ಮಾಜಿ ಮಾಜಿ ಅಧ್ಯಕ್ಷ ಚಂದ್ರಶೇಖರ ಆರ್.ಬೆಳ್ಚಡ, ಸಾಫಲ್ಯ ಸೇವಾ ಸಂಘ ಮುಂಬಯಿ ಉಪಾಧ್ಯಕ್ಷ ಕೃಷ್ಣಕುಮಾರ್ ಎನ್.ಬಂಗೇರ, ಬಿಲ್ಲವ ಸಂಘ ಗುಜರಾತ್ ಮಾಜಿ ಅಧ್ಯಕ್ಷ ವಿಶ್ವನಾಥ ಜಿ.ಪೂಜಾರಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಭಾರತ್ ಬ್ಯಾಂಕ್‌ನ ಸಿಇಒ ಮತ್ತು ಆಡಳಿತ ನಿರ್ದೇಶಕ ವಿದ್ಯಾನಂದ ಎಸ್.ಕರ್ಕೇರ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಜಯ ಸುವರ್ಣರ ಸ್ನೇಹತ್ವ, ಬಾಂಧವ್ಯವನ್ನು ಬಣ್ಣಿಸಿ ಒಡನಾಟವನ್ನು ಮೆಲುಕು ಹಾಕಿ ಸೂರ್ಯಕಾಂತ್ ಅವರ ನಾಯಕತ್ವದ ಭವ್ಯ ಭವಿಷ್ಯಕ್ಕೆ ಶುಭಾರೈಸಿದರು. ಹಿರಿಯ ಪತ್ರಕರ್ತ, ವಾಗ್ಮಿ ದಿನೇಶ್ ಅಮೀನ್ ಮಟ್ಟು ದಿ| ಜಯ ಸುವರ್ಣರ ಸ್ಮರಣೆಗೈದು ಮಾತನಾಡಿದರು.

ಇವತ್ತಿನ ಸಡಗರಕ್ಕೆ ನಾನು ನೆಪ ಮಾತ್ರ. ಜಯ ಸುವರ್ಣರು ಮಾಡಿದ ತ್ಯಾಗ, ಬದ್ಧತೆ, ತಾಳ್ಮೆ, ನೇತೃತ್ವ ಎಲ್ಲವೂ ನಮ್ಮೆಲ್ಲರಿಗೆ ಪ್ರೇರಣಾಶಕ್ತಿಯಾಗಿರುವುದೇ ಈ ಸಂಭ್ರಮವಾಗಿದೆ. ಇಂತಹ ವ್ಯಕ್ತಿತ್ವವುಳ್ಳ ಜಯ ಸುವರ್ಣರ ಹೆಸರು ಅಳಿಸಲು ಯಾರಿಂದಲೂ ಸಾಧ್ಯವಾಗದು. ಬಿಲ್ಲವ ಸಮಾಜದ ಗಡುಸುತನಕ್ಕೆಂದೇ ಜಯ ಸುವರ್ಣರು ಹುಟ್ಟಿದ್ದಿರಬಹುದು. ನಾವೂ ಇಂತಹ ಯುಗಪುರುಷನ ಅನುಯಾಯಿಗಳಾಗಿ ಒಗ್ಗಟ್ಟಾಗಿ ಮುನ್ನಡೆದಾಗಲೇ ಸಮಾಜವು ಇನ್ನಷ್ಟು ಶಕ್ತಿದಾಯಕವಾಗಬಲ್ಲದು. ಭದ್ರ ಸಮಾಜದ ನಿರ್ಮಾಣಕ್ಕೆ ಸಬೂಬು ನೀಡುವ ವ್ಯಕ್ತಿಗಳಿಕ್ಕಿಂತ ಜಯ ಸುವರ್ಣರಂತಹ ಧೀರತ್ವ ನಾಯಕತ್ವವುಳ್ಳ ಜನನಾಯಕನ ಆಯ್ಕೆ ಅತ್ಯವಶ್ಯ ಎಂದು ಸೂರ್ಯಕಾಂತ್ ಸುವರ್ಣ ಅಭಿಪ್ರಾಯ ಪಟ್ಟರು. ಹಾಗೂ ಪತ್ನಿ ನಿಶಿತಾ ಎಸ್.ಸುರ್ವರ್ಣ ಮತ್ತು ಪರಿವಾರ ಹಾಗೂ ಹಿತೈಷೆಗಳನ್ನೊಳಗೊಂಡು ಕೇಕ್ ಕತ್ತರಿಸಿ ಜನ್ಮೋತ್ಸವ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಮುಂಬಯಿ ಬಿಲ್ಲವಾಸ್ ಕಾರ್ಯಕ್ರತರು ಮತ್ತು ಶ್ರೀ ಜಯ ಸಿ.ಸುವರ್ಣ ಅಭಿಮಾನಿ ಬಳಗದ ಪ್ರಧಾನ ಸಂಘಟಕರುಗಳಾದ ಸುರೇಂದ್ರ ಎ.ಪೂಜಾರಿ (ಸಾಯಿಕೇರ್), ಸಂಘಟಕರುಗಳಾದ ಚಿತ್ರಾಪು ಲಕ್ಷ್ಮಣ ಸಿ.ಪೂಜಾರಿ (ಎನ್‌ಸಿಪಿ), ಸದಾಶಿವ ಎ.ಕರ್ಕೇರ, ಭಾರತ್ ಬ್ಯಾಂಕ್‌ನ ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಸೋಮನಾಥ್ ಬಿ.ಅಮೀನ್, ನಿರ್ದೇಶಕರಾದ ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ.ಪೂಜಾರಿ, ನಿರಂಜನ್ ಲಕ್ಷ್ಮಣ ಪೂಜಾರಿ, ಬಿಲ್ಲವರ ಅಸೋಸಿಯೇಶನ್‌ನ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶ್ ಕರ್ಕೇರ, ನ್ಯಾಯವಾದಿ ಶಶಿಧರ ಕಾಪು, ಎರ್ಮಳ್ ಹರೀಶ್ ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಯದು ನಾರಾಯಣ ಶೆಟ್ಟಿ, ರವಿ ಪೂಜಾರಿ ಬೋಳ, ಸುರೇಶ್ ಶೆಟ್ಟಿ ಯೆಯ್ಯಾಡಿ, ರವೀಂದ್ರ ಶಾಂತಿ, ಗಣೇಶ ಪೂಜಾರಿ, ನ್ಯಾಯವಾದಿ ರವಿ ಕೋಟ್ಯಾನ್, ಅಶೋಕ್ ಕುಕ್ಯಾನ್ ಸಸಿಹಿತ್ಲು, ಬಬಿತಾ ಜೆ.ಕೋಟ್ಯಾನ್, ಶಶಿಕಲಾ ಕೋಟ್ಯಾನ್, ಅನಿತಾ ಪೂಜಾರಿ ತಾಕೋಡೆ ಮತ್ತಿತರ ಗಣ್ಯರು, ಭಾರತ್ ಬ್ಯಾಂಕ್‌ನ ನಿರ್ದೇಶಕರು, ಉನ್ನತಾಧಿಕಾರಿಗಳು ಸಿಬ್ಬಂದಿಗಳು, ಬಿಲ್ಲವರ ಅಸೋಸಿಯೇಶನ್‌ನ ಸಮಿತಿ ಸದಸ್ಯರು, ಮಾಜಿ ಪದಾಧಿಕಾರಿಗಳು ಸೇರಿದಂತೆ ಸೇವಾದಳದ ಸದಸ್ಯರು ಉಪಸ್ಥಿತರಿದ್ದು ಅಭಿನಂದಿಸಿದರು.

ಯಶೋಧರ ಬಂಗೇರ ಪ್ರಾರ್ಥನೆಯನ್ನಾಡಿದರು. ಹರೀಶ್ ಹೆಜಮಾಡಿ ಪ್ರಸ್ತಾವನೆಗೈದು ಅತಿಥಿಗಳನ್ನು ಪರಿಚಯಿಸಿದರು. ಧನಂಜಯ ಶಾಂತಿ ಕಾರ್ಯಕ್ರಮ ನಿರೂಪಿಸಿದರು. ಶಶಿಧರ ಬಂಗೇರ ಮಟ್ಟು ವಂದಿಸಿದರು. ಜಯ ಸುವರ್ಣ ಅಭಿಮಾನಿ ಬಳಗದ ಪ್ರತಿಭಾನ್ವಿತ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now