
ಮಂಗಳೂರು, ಮೇ 05: ಭಾಷೆ ಸಂವಹನ ಕೌಶಲ್ಯದ ಅತ್ಯುತ್ತಮ ಅಡಿಪಾಯವಾಗಿದೆ. ಇದು ಜೀವನದ ಪ್ರತಿ ಹಂತದಲ್ಲೂ ಪ್ರಮುಖ ಸಂಪರ್ಕ ಮತ್ತು ಸಂಬಂಧ ಬೆಳೆಸಲು ಸಹಾಯ ಮಾಡುತ್ತದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯವಹಾರ ಅಧ್ಯಯನ ಕಾಲೇಜಿನ ಆಂಗ್ಲ ಭಾಷಾ ಪ್ರಾಧ್ಯಾಪಕಿ ಲೋಲಿತ ನೀತ ಡಿಸೋಜಾ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಂಗ್ಲ ವಿಭಾಗ ಮತ್ತು ಆಂಗ್ಲ ವೇದಿಕೆ ವತಿಯಿಂದ ಹಮ್ಮಿಕೊಳ‌್ಳಲಾಗಿದ್ದ ಮಾಸ್ಟರಿಂಗ್ ಎಕ್ಸಲೆಂಟ್ ಕಮ್ಯುನಿಕೇಶನ್ ವಿಷಯದ ಕುರಿತು ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಹೇಳಿದರು.
ಯಾವುದೇ ರೀತಿಯ ಸಂವಹನದಲ್ಲಿ ಆಲಿಸುವುದು, ಮಾತನಾಡುವುದು, ಓದುವುದು, ಬರೆಯುವುದು ಪ್ರಮುಖ ಆಧಾರಸ್ತಂಭಗಳಾಗಿವೆ. ಇತರ ವ್ಯಕ್ತಿಗಳೊಂದಿಗೆ ಸಂವಹನ ನಡೆಸುವಾಗ ದೇಹ ಭಾಷೆ ಮೂಲಕ ಭಾವನಾತ್ಮಕವಾಗಿ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ಆಂಗಿಕ ಭಾಷೆಯು ಸಂವಹನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಸಂವಹನದಲ್ಲಿ ಭಾಷೆಗೆ ಇರುವಷ್ಟೇ ಮಹತ್ವ ಧ್ವನಿಯ ಏರಿಳಿತ, ಕಣ್ಣಿನ ಸಂಪರ್ಕ ಕಾಪಾಡಿಕೊಳ್ಳುವುದು, ಶಬ್ದಕೋಶ ವಿಸ್ತರಣೆ, ಸ್ಪಷ್ಟ ಮತ್ತು ನಿಖರವಾದ ಪದಗಳ ಬಳಕೆ, ಮಾತಿನ ಸ್ಪಷ್ಟತೆಯಿಂದಾಗಿ ಸಾಕಷ್ಟು ಪರಿಣಾಮಕಾರಿಯಾಗಿ ಸಂವಹನ ನಡೆಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಪ್ರೊ. ಶುಭಾಷಿಣಿ ಶ್ರೀವತ್ಸ, ವಿಭಾಗದ ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























