ಕೆ.ಎಂ.ಸಿ. ಮಣಿಪಾಲದಲ್ಲಿ ವಿಶ್ವ ಕೈ ನೈರ್ಮಲ್ಯ ದಿನ ಆಚರಣೆ

ಕೆ.ಎಂ.ಸಿ. ಮಣಿಪಾಲದಲ್ಲಿ ವಿಶ್ವ ಕೈ ನೈರ್ಮಲ್ಯ ದಿನ ಆಚರಣೆ

0Shares

ಕೆ.ಎಂ.ಸಿ. ಮಣಿಪಾಲದಲ್ಲಿ ವಿಶ್ವ ಕೈ ನೈರ್ಮಲ್ಯ ದಿನ ಆಚರಣೆ

ವಿಶ್ವ ಕೈ ನೈರ್ಮಲ್ಯ ದಿನವು ಪ್ರತೀ ವರ್ಷ ಮೇ 5 ರಂದು ಆಚರಿಸಲಾಗುತ್ತಿರುವ ಜಾಗತಿಕ ಆರೋಗ್ಯ ತಿಳುವಳಿಕೆ ಮೂಡಿಸುವ ಕಾರ್ಯಕ್ರಮವಾಗಿದ್ದು, ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಕೈ ನೈರ್ಮಲ್ಯ ಮಾನದಂಡಗಳ ಜಾಗೃತಿಯನ್ನು ಹೆಚ್ಚಿಸಲು ವಿಶ್ವದಾದ್ಯಂತ ಜನರನ್ನು ಒಂದುಗೂಡಿಸಲು ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಕೆ.ಎಂ,ಸಿ. ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗದಲ್ಲಿ ವಿಶ್ವ ಕೈ ನೈರ್ಮಲ್ಯ ದಿನವನ್ನು ಆಚರಿಸಲಾಯಿತು. ವಿಭಾಗ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 60 ಜನರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ಪ್ರಾದ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ಮಾತನಾಡಿ, ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ತಮ್ಮ ಕೈಗಳನ್ನು ಮುಖ್ಯವಾಗಿ ರೋಗಿಗಳೊಂದಿಗೆ ವ್ಯವಹರಿಸುವಾಗ ವೈಜ್ಞಾನಿಕವಾಗಿ ಏಳು ಹಂತಗಳಲ್ಲಿ ಸ್ವಚ್ಛ ನೀರು ಹಾಗೂ ಸೋಪ್ ಬಳಸಿ ತೊಳೆದರೆ ಮಾತ್ರ ಕೈಗಳಲ್ಲಿರುವ ಸೋಂಕಾಣುಗಳು ನಾಶಗೊಳ್ಳುವುದು. ಇದು ರೋಗಿಗಳು ಹಾಗೂ ವೈದ್ಯರ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗುವುದು ಅಲ್ಲದೇ ಅನಗತ್ಯ ಆ್ಯಂಟಿ ಬಯೋಟಿಕ್ಸ್‍ಗಳ ಬಳಕೆ ಅಥವಾ ಸಾವುಗಳು ಉಂಟಾಗುವುದು ತಡೆಯಬಹುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ವೈಜ್ಞಾನಿಕವಾಗಿ ಪ್ರಾತ್ಯಕ್ಷಿತೆ ವಿಡಿಯೋಗಳ ಮೂಲಕ ತರಬೇತಿ ನೀಡಲಾಯಿತು. ಸಹ ಪ್ರಾಧ್ಯಾಪಕರಾದ ಡಾ. ದಿವ್ಯ ಪೈ ಅವರು ಕಾರ್ಯಕ್ರಮ ತರಬೇತಿ ಹಾಗೂ ನಿರೂಪಣೆ ಮಾಡಿದರು. ವಿಭಾಗದ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರತೀ ವರ್ಷ ಮೇ 5 ರಂದು ವಿಶ್ವದಾದ್ಯಂತ ವೈದ್ಯರು ಹಾಗೂ ಇತರ ಆರೋಗ್ಯ ಕಾರ್ಯಕರ್ತರುಗಳಿಗೆ ಕೈ ನೈರ್ಮಲ್ಯದ ಬಗ್ಗೆ ಪದೇ ಪದೇ ನೆನಪಿಸಲು ಹಾಗೂ ಸರಿಯಾದ ತರಬೇತಿ ನೀಡಲು ಈ ದಿನದಂದು ವಿಶೇಷವಾಗಿ ಮನವರಿಕೆ ಮಾಡಿಕೊಳ್ಳಲಾಗುತ್ತದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now