ಉಡುಪಿ: ಶ್ರೀ ಭ್ರಾಮರಿ ನಾಟ್ಯಾಲಯ ಅಮ್ಮುಂಜೆ “ನೃತ್ಯ ಮಂಥನ-9”

ಉಡುಪಿ: ಶ್ರೀ ಭ್ರಾಮರಿ ನಾಟ್ಯಾಲಯ ಅಮ್ಮುಂಜೆ “ನೃತ್ಯ ಮಂಥನ-9”

0Shares

ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ,ಇವರ ಆಶ್ರಯದಲ್ಲಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಇದರ ಸಹಯೋಗದಲ್ಲಿ ,ಶ್ರೀ ಭ್ರಾಮರೀ ನಾಟ್ಯಾಲಯ (ರಿ) ಅಮ್ಮುಂಜೆ ಇವರ ವಾರ್ಷಿಕೋತ್ಸವದ ಪ್ರಯುಕ್ತ “ನೃತ್ಯ ಮಂಥನ -9 “ಕಾರ್ಯಕ್ರಮವು
ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನೆರವೇರಿತು.
ಪುತ್ತಿಗೆ ಮಠದ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನಾಟ್ಯಾಲಯದ ವಿದ್ಯಾರ್ಥಿಗಳಿಗೆ ಆಶೀರ್ವಚನದೊಂದಿಗೆ ಹರಸಿದರು.
ರಾಧಾಕೃಷ್ಣ ನೃತ್ಯನಿಕೇತನ ಉಡುಪಿ ಇದರ ಗುರುಗಳಾದ ವಿದುಷಿ ವೀಣಾ ಎಂ. ಸಾಮಗ ಅವರು ಜ್ಯೋತಿ ಪ್ರಜ್ವಲಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಂಜುನಾಥ್ ಪುತ್ತೂರು ರಚನೆಯ ವಿನೀತ್ ಕೇರಳ ರಾಗ ಸಂಯೋಜನೆಯ ನಾಟ್ಯಾಲಯದ ಶೀರ್ಷಿಕೆ ಗೀತೆಯನ್ನು ಅನಾವರಣಗೊಳಿಸಿ ಎಲ್ಲರಿಗೂ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರು ಅನುಗ್ರಹಿಸಲಿ ನಮ್ಮ ಪೂಜ್ಯ ತಂದೆಯವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ ಎಂದು ಹರಸಿದರು
ನೃತ್ಯ ಗುರು ವಿದ್ವಾನ್ ಶ್ರೀಧರ ಬನ್ನಂಜೆ, ಪಿಟೀಲು ವಾದಕರಾದ ಶ್ರೀಧರ್ ಪಾಡಿಗಾರ್,ನಾದಸ್ವರ ಗುರುಗಳಾದ ಜಯಕರ್ ಸೇರಿಗಾರ್ ಅಮ್ಮುಂಜೆ ಇವರನ್ನು ಭ್ರಾಮರೀ ನಾಟ್ಯಾಲಯದ ವತಿಯಿಂದ ಸಮ್ಮಾನಿಸಲಾಯಿತು.
ಸಮ್ಮಾನ ಸ್ವೀಕರಿಸಿದವರ ಪರವಾಗಿ ವಿದ್ವಾನ್ ಶ್ರೀಧರ ಬನ್ನಂಜೆಯವರು ಮಾತನಾಡಿ,ಮಕ್ಕಳಿಗೆ ಕೇವಲ ಕಲಿಕೆ ಮಾತ್ರ ಮುಖ್ಯವಲ್ಲ,ಅದರ ಜೊತೆಗೆ ಲಲಿತ ಕಲೆಗಳಲ್ಲೂ ಆಸಕ್ತಿಯನ್ನು ಹೊಂದಿರಬೇಕು.ಕಲೆಯ ಬಗೆಗಿನ ಆಸಕ್ತಿಗಳು ಮಕ್ಕಳಲ್ಲಿ ಹೆಚ್ಚುಸಂಸ್ಕಾರವನ್ನು ಬೆಳೆಸಿಕೊಳ್ಳುವುದಕ್ಕೆ ಕಾರಣವಾಗುತ್ತವೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಾಟ್ಯಾಧನ ಕಲಾಕೇಂದ್ರ ಉರ್ವ ಇಲ್ಲಿನ ನೃತ್ಯ ಗುರುಗಳಾದ ಶ್ರೀಮತಿ ವಿದುಷಿ ಸುಮಂಗಲ ರತ್ನಾಕರ್ ಅವರು ಮಾತನಾಡಿ,ಬರುವ ವರ್ಷಕ್ಕೆ ನಾಟ್ಯಾಲಯದ ರಜತ ಮಹೋತ್ಸವ. ಹಾಗೂ ನೃತ್ಯ ಮಂಥನಕ್ಕೆ ದಶಕದ ಸಂಭ್ರಮ.ಮುಂದಿನ ಪೀಳಿಗೆಗೆ ಈ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಉತ್ಸಾಹವನ್ನು ಹೊಂದಿರಬೇಕು ಎಂದರು. ಇನ್ನೋರ್ವ ಅತಿಥಿಗಳಾದ ಮಂಜುನಾಥ ನೃತ್ಯ ಕಲಾ ಶಾಲೆ ಕಲಬುರ್ಗಿ ಇಲ್ಲಿನ ಗುರುಗಳಾದ ವಿದ್ವಾನ್ ಮಂಜುನಾಥ್ ಪುತ್ತೂರುರವರು ಮಾತನಾಡುತ್ತಾ ಗುರು ಶಿಷ್ಯ ಪರಂಪರೆಯನ್ನು ಶ್ರೀ ಭ್ರಾಮರೀ ನಾಟ್ಯಾಲಯ ಉಳಿಸಿ ಬೆಳೆಸಿಕೊಂಡು ಹೋಗುತ್ತಿದೆ ಇದು ಮುಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ವತ್ ಮುಗಿಸಿದ ನಾಟ್ಯಾಲಯದ ವಿದ್ಯಾರ್ಥಿಗಳಾದ ವಿದುಷಿ ಸಂಜನಾ ಜೆ.ಸುವರ್ಣ,ವಿದುಷಿ ಯಶಸ್ವಿ,ವಿದುಷಿ ಕಾತ್ಯಾಯಿನಿ,ವಿದುಷಿ ಸಂಜನಾ ಸನಿಲ್ ,ಇವರನ್ನು ಅಭಿನಂದಿಸಲಾಯಿತು.
ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು.
ವೇದಿಕೆಯಲ್ಲಿ ಭ್ರಾಮರೀ ನಾಟ್ಯಾಲಯದ ಗೌರವಾಧ್ಯಕ್ಷರಾದ ಕೆ.ಭಾಸ್ಕರ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ನಂತರ ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯ ಕಾರ್ಯಕ್ರಮ ನೆರವೇರಿತು..
ಶ್ರೀ ಭ್ರಾಮರೀ ನಾಟ್ಯಾಲಯದ ಗುರುಗಳಾದ ವಿದ್ವಾನ್ ಕೆ ಭವಾನಿ ಶಂಕರ್ ಸ್ವಾಗತಿಸಿ,ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now