
Udupi, Sept 16, 2024: ರಕ್ತದಾನವು ಅತ್ಯಂತ ಶ್ರೇಷ್ಠದಾನವಾಗಿದೆ. ರಕ್ತದಾನ ಮಾಡುವಾಗ ನಿಮ್ಮ ಜಾತಿ ಧರ್ಮ ಯಾವುದು ಎಂದು ಕೇಳುವುದಿಲ್ಲ. ಇದು ಮಾರುಕಟ್ಟೆಯಲ್ಲಿ ಸಿಗುವ ವಸ್ತು ಅಲ್ಲ ಎಂದು ತೋನ್ಸೆ ಗ್ರಾ.ಪಂ. ಅಧ್ಯಕ್ಷೆ ಕುಸುಮ ರವೀಂದ್ರ ತಿಳಿಸಿದರು. ಕೆಮ್ಮಣ್ಣು ಲಿಟಲ್ ಫ್ಲವರ್ ಚರ್ಚ್ ಸಭಾಂಗಣದಲ್ಲಿ ರವಿವಾರ ನಡೆದ ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ ಶತಮಾನೋತ್ಸವ ‘ಶತಾಭಿವಂದನಂ’ ಆಚರಣೆ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯ ರಕ್ತ ನಿಧಿ ಸಹಕಾರದಲ್ಲಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.


ಸಂಘದ ಅಧ್ಯಕ್ಷ ಟಿ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜನಾರ್ಧನ ತೊನ್ಸೆ, ಸರಕಾರಿ ಆಸ್ಪತ್ರೆಯ ರಕ್ತ ನಿಧಿ ವಿಭಾಗದ ಮುಖ್ಯಸ್ಥೆ ಮಂಜುಶ್ರೀ ಪೈ, ಕೆಮ್ಮಣ್ಣು ಸೌಹಾರ್ದ ಸಮಿತಿ ಸಂಚಾಲಕಿ ಜ್ಯೋತಿ ಲೂವಿಸ್, ಸಂಘದ ಉಪಾಧ್ಯಕ್ಷ ಅಫ್ಜಲ್ ಸಾಹೇಬ್, ನಿರ್ದೇಶಕರಾದ ಟಿ ಗೋಪಾಲಕೃಷ್ಣ ಹೆಗಡೆ, ನಾರಾಯಣ ಬಂಗೇರ, ರಾಘವೇಂದ್ರ ಪ್ರಸಾದ್, ಉಮೇಶ್ ಅಮೀನ್, ಶ್ಯಾಮ್ ಎನ್, ಪುರುಷೋತ್ತಮ ಸಾಲ್ಯಾನ್, ಲತಾ ಪಿ ರಾವ್, ಲೇನಿ ಫೆರ್ನಾಂಡಿಸ್, ಲಕ್ಷ್ಮಿ, ಹ್ಯೂಬರ್ಟ್ ಸಂತಾನ ಲೂವಿಸ್, ಹರೀಶ್ ಶೆಟ್ಟಿ, ಸಿ ಇ ಒ ಮಹೇಶ ಸಲ್ಯಾನ್, ಕಾರ್ಯಕ್ರಮ ಸಂಯೋಜಕಿ ಧನ್ಯಾ ಉಪಸ್ಥಿತರಿದ್ದರು.

50 ಬಾರಿ ರಕ್ತದಾನ ಮಾಡಿದ ನಿತ್ಯಾನಂದ ಕೆಮ್ಮಣ್ಣು ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಸಿ ಇ ಒ ಭಾಸ್ಕರಾ ಕಾಂಚನ್ ಸ್ವಾಗತಿಸಿ ನಿರೂಪಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























