ಉಜ್ಜಿವನ ಹಿರಿಯ ನಾಗರಿಕ ಬಡಾವಣೆಯ ಸೌಲಭ್ಯಗಳನ್ನೊಳಗೊಂಡ ವಾಣಿಜ್ಯ ಸಂಕೀರ್ಣದ ಶಂಕುಸ್ಥಾಪನೆ ಕಾರ್ಯಕ್ರಮ..!

ಉಜ್ಜಿವನ ಹಿರಿಯ ನಾಗರಿಕ ಬಡಾವಣೆಯ ಸೌಲಭ್ಯಗಳನ್ನೊಳಗೊಂಡ ವಾಣಿಜ್ಯ ಸಂಕೀರ್ಣದ ಶಂಕುಸ್ಥಾಪನೆ ಕಾರ್ಯಕ್ರಮ..!

0Shares

ಕೆಮ್ಮಾರ, ಉಪ್ಪಿನಂಗಡಿಯಲ್ಲಿ ಉಜ್ಜಿವನ ಹಿರಿಯನಾಗರಿಕರ ಬಡಾವಣೆಯನ್ನು ನಿರ್ಮಿಸುತ್ತಿರುವ ದ್ವಾರಕಾ ಸಮೂಹ ಸಂಸ್ಥೆಯು ವಿಷು ಹಬ್ಬದ ಶುಭದಿನದಂದು ಭೂಮಿ ಪೂಜೆಯ ಮುಖೇನ ಬಡಾವಣೆಯ ಸೌಲಭ್ಯಗಳನ್ನೊಳಗೊಂಡ ವಾಣಿಜ್ಯ ಸಂಕೀರ್ಣ ದ ಶಂಕುಸ್ಥಾಪನೆ ಯನ್ನು ನಡೆಸಿತು.

ಈ ಸಂದರ್ಭದಲ್ಲಿ ನೆರೆದ ಸ್ಥಳೀಯ ಹಿತೈಷಿಗಳು, ಉಜ್ಜಿವನ ಹಿರಿಯನಾಗರಿಕರ ಬಡಾವಣೆ ನಿರ್ಮಾಣದಿಂದ ಸ್ಥಳೀಯ ಉದ್ಯೋಗ ಅವಕಾಶದೊಂದಿಂಗೆ ಸುತ್ತಮುತ್ತಲಿನ ಪರಿಸರದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಉಜ್ಜಿವನ ಯೋಜನೆಗೆ ಶುಭವನ್ನು ಹಾರೈಸಿದರು. ಸ್ಥಳೀಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ದ್ವಾರಕಾ ಸಂಸ್ಥೆಯು ಶಾಲೆಯಲ್ಲಿ ನಡೆಸಿದ ಅಭಿವೃದ್ಧಿ ಕೆಲಸಗಳನ್ನು ಸ್ಮರಿಸಿದರು.

ಶ್ರೀಯುತ ಗೋಪಾಲಕೃಷ್ಣ ಭಟ್ ಇವರು ಉಜ್ಜಿವನ ಯೋಜನೆಯನ್ನುದ್ದೇಶಿಸಿ, ನಿವೃತ್ತ ಜೀವನದ ವರೆಗೂ ದುಡಿಮೆಯ ಮೂಲಕ ಜೀವನವನ್ನು ಸಾಗಿಸಿ ಮುಂದಿನ ನಿವೃತ್ತ ಜೀವನವನ್ನು ಅಗತ್ಯ ಸೌಲಭ್ಯಗಳೊಂದಿಗೆ ಸ್ವಾಭಿಮಾನಿಯಾಗಿ ಬದುಕುವ ಕನಸನ್ನು ಉಜ್ಜಿವನ ವು ನನಸಾಗಿಸುತ್ತದೆ. ಕೇವಲ ಹಿರಿಯರಿಗಾಗಿ ಮಾತ್ರವಲ್ಲದೆ ವಯೋಮಿತಿ ಇಲ್ಲದೆ ಯಾರೊಬ್ಬರೂ ಈ ವ್ಯವಸ್ಥಿತ ಹಾಗೂ ಸೌಲಭ್ಯಯುತ ಯೋಜನೆಯ ಪ್ರಯೋಜನೆಯನ್ನು ಪಡೆದುಕೊಳ್ಳಬಹುದು ಎಂದು ನುಡಿದರು.

ಈ ಸಂದರ್ಭದಲ್ಲಿ, ದ್ವಾರಕಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಶ್ರೀಯುತ ಗೋಪಾಲಕೃಷ್ಣ ಭಟ್, ವ್ಯವಸ್ಥಾಪನಾ ನಿರ್ದೇಶಕರಾದ ಶ್ರೀಮತಿ ಅಶ್ವಿನಿ ಎನ್ ಹಾಗೂ ಶ್ರೀ ಅಮೃತಕೃಷ್ಣ ಎ, ಸ್ಥಳೀಯ ಪಂಚಾಯತ್‌ ಸದಸ್ಯರು, ಸ್ಥಳೀಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ದ್ವಾರಕಾ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದು ಇವರೆಲ್ಲರ ಸಮ್ಮುಖದಲ್ಲಿ ವೈದಿಕ ವಿದ್ವಾಂಸರಿಂದ ಉಜ್ಜಿವನ ಹಿರಿಯ ನಾಗರಿಕ ಬಡಾವಣೆಯ ಸೌಲಭ್ಯಗಳನ್ನೊಳಗೊಂಡ ವಾಣಿಜ್ಯ ಸಂಕೀರ್ಣ ದ ಶಂಕುಸ್ಥಾಪನೆ ಕಾರ್ಯಕ್ರಮವು ನಡೆಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now