ಪ್ರಗತಿ ಸ್ಟಡಿ ಸೆಂಟರ್‌ಗೆ ಜವಾಹರ್ ನವೋದಯ ಪ್ರವೇಶ ಪರೀಕ್ಷೆಯಲ್ಲಿ 3 ಸೀಟುಗಳು :

ಪ್ರಗತಿ ಸ್ಟಡಿ ಸೆಂಟರ್‌ಗೆ ಜವಾಹರ್ ನವೋದಯ ಪ್ರವೇಶ ಪರೀಕ್ಷೆಯಲ್ಲಿ 3 ಸೀಟುಗಳು :

0Shares

“ಇಲ್ಲಿಯವರೆಗೆ 162 ವಿದ್ಯಾರ್ಥಿಗಳು ಆಯ್ಕೆ”

ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಶೈಕ್ಷಣಿಕ ವರ್ಷ 2025 ಜನವರಿ 18 ರಂದು ನಡೆದ ಜವಾಹರ್ ನವೋದಯ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ತರಬೇತಿ ಪಡೆದ 8 ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.

ಕುಂಬ್ರ ಒಳಮೊಗ್ರು ಗ್ರಾಮದ ನಿವಾಸಿಯಾಗಿರುವ ಲೋಕೆಶ್ ಕೆ. ಜಿ. ಹಾಗೂ ಜಯಲಕ್ಷ್ಮಿ ಕೆ. ಎಂ. ದಂಪತಿಗಳ ಪುತ್ರನಾದ ಹರ್ಷಿತ್ ಕೆ. ಎಲ್‌, ಬಂಟ್ವಾಳ ತಾಲೂಕಿನ ಅಮೂರು ಗ್ರಾಮದ ಸೂರ್ಯ ಮೂಲ್ಯ ಹಾಗೂ ಗೀತಾಕ್ಷಿ ದಂಪತಿಗಳ ಪುತ್ರನಾದ ಮನ್ವಿತ್ ಎಸ್. ಕೆ. ಮತ್ತು ಬಂಟ್ವಾಳ ತಾಲೂಕಿನ ಸಜಿಪ ಮೂನುರು ಗ್ರಾಮದ ನಿವಾಸಿಗಳಾದ ರಘುನಾಥ್ ಮತ್ತು ಜಯಶ್ರೀ ದಂಪತಿಗಳ ಪುತ್ರನಾದ ಜಿತಿನ್ ಎಂ ಇವರು ಆಯ್ಕೆ ಆಗಿರುತ್ತಾರೆ ಎಂದು ಸಂಸ್ಥೆಯ ಸಂಚಾಲಕರಾದ ಗೋಕುಲ್‌ನಾಥ್ ಪಿ.ವಿ. ತಿಳಿಸಿರುತ್ತಾರೆ.

202526 ನೇ ಸಾಲಿನ ಜವಾಹರ್ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಗೆ ತರಬೇತಿ ಶಿಬಿರವು ಎಪ್ರಿಲ್ 10ರಿಂದ ಪ್ರಾರಂಭಗೊಂಡು ಮುಂದಿನ ಪರೀಕ್ಷೆಯವರೆಗೆ 2 ಹಂತದಲ್ಲಿ ನಡೆಯಲಿದೆ.

ಬೇಸಿಗೆ ರಜಾ ದಿನಗಳಲ್ಲಿ ಪ್ರತಿನಿತ್ಯ ಬೆಳಗ್ಗೆ 6.30 ರಿಂದ ಸಂಜೆ 3.30 ರವರೆಗೆ, ಶಾಲೆಗಳು ಪ್ರಾರಂಭವಾದ ಬಳಿಕ ಪ್ರತಿ ಆದಿತ್ಯವಾರದಂದು ಮುಂದಿನ ಪರೀಕ್ಷೆಯವರೆಗೆ ನಡೆಸಲಾಗುವುದು ಎಂದು ಪ್ರಾಂಶುಪಾಲರಾದ ಕೆ. ಹೇಮಲತಾ ಗೋಕುಲ್‌ನಾಥ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಸಂಸ್ಥೆಯ ಕಛೇರಿಗೆ ಮುಖತಃ ಅಥವಾ ದೂರವಾಣಿ ಮುಖಾಂತರ ಸಂಸ್ಥೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ:

9900109490, 8123899490

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now