
ಮುಂಬಯಿ, (ಆರ್‌ಬಿಐ) ಮಾ.21: ಬೃಹನ್ಮುಂಬಯಿಯಲ್ಲಿಹಿರಿಯ ತುಳು-ಕನ್ನಡಿಗ ರಾಜಕಾರಣಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಇದರ ನೇತಾರ ಲಕ್ಷ್ಮಣ್ ಸಿ.ಪೂಜಾರಿ ಚಿತ್ರಾಪು ಅವರನ್ನು ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ಮುಂಬಯಿ ಪ್ರದೇಶ ರಾಷ್ಟ್ರವಾದಿ ಕಾಂಗ್ರೆಸ್ (ಶರದ್‌ಚಂದ್ರ ಪವಾರ್) ಪಕ್ಷದ ಅಧ್ಯಕ್ಷೆ ರಾಖೀ ಜಾಧವ್ ನೇಮಿಸಿ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲ್ಕಿ ಇಲ್ಲಿನ ಚಿತ್ರಾಪು ಮೂಲತಃ ಚೆನ್ನಪ್ಪ ಪೂಜಾರಿ ಮತ್ತು ಜಾನಕಿ ಪೂಜಾರಿ ದಂಪತಿ ಸುಪುತ್ರರಾದ ಲಕ್ಷ್ಮಣ್ ಪೂಜಾರಿ ಓರ್ವ ಸರಳ ಸಜ್ಜನಿಕೆಯ ಹಿರ್ಯ ಅನುಭವೀ ರಾಜರಣಿ ಆಗಿರುವರು. ಸದಾ ತೆರೆಯಮರೆಯಲ್ಲಿದ್ದು ಸಮಾಜ ಮತ್ತು ಜನಸೇವೆಯಲ್ಲಿ ತೊಡಗಿಸಿ ಕೊಂಡಿರುವ ಇವರು ಎಐಸಿಸಿ ಕಾಂಗ್ರೇಸ್ ಪಕ್ಷದಲ್ಲಿದ್ದು 1997ರ ಬಿಎಂಸಿ ಚುನಾವಣೆಯ ನಗರಸೇವಕ ಅಭ್ಯಥಿ ಆಗಿದ್ದರು. 1999ರ ಪಕ್ಷದ ಆರಂಭದಿಂದ ಎನ್‌ಸಿಪಿಯಲ್ಲಿ ಸಕ್ರೀಯರಾಗಿದ್ದು ವಿವಿಧ ಹುದ್ದೆಗಳೊಂದಿಗೆ ಶ್ರಮಿಸಿರುವರು. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಖಿಲ ಭಾರತ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಅವರ ನಿಕಟವರ್ತಿ ಎಂದೇ ಗುರುತಿಸಿಕೊಂಡುರುವ ಲಕ್ಷ್ಮಣ್ ಪೂಜಾರಿ ಇವರು ಮಾಡಾ ಸದಸ್ಯರಾಗಿ, ಪಶ್ಚಿಮ ಪ್ರಾದೇಶಿಕ ರೈಲ್ವೇ ಮಂಡಳಿ ಸದಸ್ಯರಾಗಿ, ಚಿತ್ರಾಪು ಬಿಲ್ಲವ ಸಂಘ ಇದರ ಮಾಜಿ ಅಧ್ಯಕ್ಷರಾಗಿ, ಮೂಲ್ಕಿ ಬಿಲ್ಲವ ಸಂಘ ಮುಂಬಯಿ ಸಮಿತಿ ಉಪಾಧ್ಯಕ್ಷರಾಗಿ ಶ್ರಮಿಸಿರುವರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























