
ಪುತ್ತೂರು : ಜಿಲ್ಲೆಯ ಜೀವನದಿಯಾಗಿರುವ
ನೇತ್ರಾವತಿಯ ಕಿನಾರೆಯ ಉಪ್ಪಿನಂಗಡಿಯಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಕೋಡಿಂಬಾಡಿ ಅವರ ನೇತೃತ್ವದಲ್ಲಿ 39ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಉಬಾರ್ ಕಂಬಳೋತ್ಸವ’ ಮಾರ್ಚ್ 22 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಅವರು ತಿಳಿಸಿದರು.
ಉಪ್ಪಿನಂಗಡಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, 24 ಗಂಟೆಯ ಮಿತಿಯೊಳಗೆ ಈ ಬಾರಿ ಕಂಬಳೋತ್ಸವವನ್ನು ಮುಗಿಸುವ ಚಿಂತನೆ ಸಮಿತಿಗಿದೆ. ಈ ಬಾರಿ 150 ಜತೆ ಕೋಣಗಳು ಕಂಬಳ ಕೂಟದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಒಟ್ಟು 6 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು. ಕನೆ ಹಲಗೆ ವಿಭಾಗ ಹೊರತು ಪಡಿಸಿ ಉಳಿದ 5 ವಿಭಾಗಗಳಲ್ಲಿ ಸೆಮಿಫೈನಲ್ ಬಂದ ಕೋಣಗಳಿಗೂ ತೃತೀಯ ಹಾಗೂ ಚರ್ತುರ್ಥ ಬಹುಮಾನ ನೀಡುವ ಚಿಂತನೆ ನಡೆಸಲಾಗಿದೆ. ವಿಜೇತ ಕೋಣಗಳ ರಕ್ಷಕರಿಗೂ `ವಿಜಯರಕ್ಷಕ’ ಗೌರವ ನೀಡಲಾಗುವುದು ಎಂದು ಅವರು ತಿಳಿಸಿದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























