
Brahmavar, 14 Sept 2024: ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ 2023/2024 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 14-09-2024 ರಂದು ಕೊಳಲಗಿರಿ ಚರ್ಚ್ ವಠಾರದ ಸೌಹಾರ್ದ ಸಭಾಂಗಣದಲ್ಲಿ ಜರುಗಿತು.
ಸಂಘದ ಅಧ್ಯಕ್ಷರಾದ ಎನ್ ರಮೇಶ್ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಮಹಾಸಭೆ ಜರುಗಿತು. ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಸಂದೀಪ್ ಶೆಟ್ಟಿ ರವರು 2023/2024 ನೇ ಸಾಲಿನ ವರದಿ ಮಂಡಿಸಿದರು. ಸಂಘವು ವರದಿ ಸಾಲಿನಲ್ಲಿ 232 ಕೋಟಿ ವ್ಯವಹಾರ ನಡೆಸಿ ಉತ್ತಮ ಪ್ರಗತಿ ಸಾಧಿಸಿದೆ. ಠೇವನಾತಿಯು 73 ಕೋಟಿ 24 ಲಕ್ಷ ದಾಟಿದ್ದು. 51 ಕೋಟಿ 2 ಲಕ್ಷ ಸಾಲ ಹೊರ ಬಾಕಿ ಇರುತ್ತದೆ. ವರದಿ ಸಾಲಿನಲ್ಲಿ ಶೇಕಡಾ 96% ರಷ್ಟು ಸಾಲ ವಸೂಲಾಗಿದ್ದು ಶೇಕಡಾ 4% ರಷ್ಟು ಸುಸ್ತಿ ಸಾಲ ಬಾಕಿ ಇರುತ್ತದೆ. ವರದಿ ಸಾಲಿನಲ್ಲಿ 1 ಕೋಟಿ 3 ಲಕ್ಷ ಲಾಭ ಗಳಿಸಿದ್ದು, ಸತತವಾಗಿ 26 ವರ್ಷಗಳಿಂದ ‘ಎ’ ಶ್ರೇಣಿಯಲ್ಲಿ ಮುಂದುವರಿಸುತ್ತಿದೆ. ಸುಮಾರು 31 ಕೋಟಿ ಹಣವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ವಿವಿಧ ರೀತಿಯ ಠೇವನಾತಿ ರೂಪದಲ್ಲಿ ವಿನಿಯೋಗ ಮಾಡಿರುತ್ತೇವೆ ಎಂದು ವರದಿಯಲ್ಲಿ ವಿವರಿಸಿದರು.
2023/24ನೇ ಸಾಲಿನ ವರದಿ ಮತ್ತು ಆರ್ಥಿಕ ತಂಖ್ತೆ, ಲಾಭ ವಿಂಗಡಣೆ, ಮುಂದಿನ ಸಾಲಿನ 2024/25 ರ ಬಜೆಟ್ ಮಂಜೂರಾತಿಗೆ ಅನುಮೋದನೆ ಪಡೆಯಲಾಯಿತು.

ಅಧ್ಯಕ್ಷರ ಭಾಷಣದಲ್ಲಿ ಎನ್. ರಮೇಶ್ ಶೆಟ್ಟಿರವರು ಸಂಸ್ಥೆಗೆ ರಾಜ್ಯ ಆಪೆಕ್ಸ್ ಬ್ಯಾಂಕ್ ಪ್ರಶಸ್ತಿ ದೊರಕಿರುವ ಸಂತಸಕ್ಕೆ ಗ್ರಾಹಕರೆಲ್ಲರಿಗೂ ಮೆಚ್ಚುಗೆ ವ್ಯಕ್ತಪಡಿಸಿದರು. ಉಪ್ಪೂರು ಮತ್ತು ಹಾವಂಜೆ ಕೇವಲ ಎರಡು ಗ್ರಾಮದ ಕಾರ್ಯ ವ್ಯಾಪ್ತಿಗೆ ಒಳಪಟ್ಟು ವ್ಯವಹಾರ ನಡೆಸಿ ಮುನ್ನಡೆಯುತ್ತಿರುವ ಸಂಘದ ಪ್ರಗತಿಯಲ್ಲಿ ಠೇವಣಾತಿ ಸಂಗ್ರಹಣೆ ಸಾಲ ವಸೂಲಾತಿ, ಸಂಘದ ನಿರ್ವಹಣೆಗೆ ಸಹಕಾರ ನೀಡಿದ ಎಲ್ಲಾ ಸದಸ್ಯರಿಗೂ, ಗ್ರಾಹಕರಿಗೂ, ಠೇವಾಣಾತಿದಾರರಿಗೂ, ಸಾಲಗಾರ ಸದಸ್ಯರಿಗೂ, ಸಿಬ್ಬಂದಿ ವರ್ಗದವರಿಗೂ ಅಭಿನಂದನೆ ಸಲ್ಲಿಸಿದರು. ಸಂಗವು ಗಳಿಸಿದ ಲಾಭದಂತೆ ಸದಸ್ಯರಿಗೆ ಶೇಕಡಾ 15% ಡಿವಿಡೆಂಡು ಘೋಷಣೆ ಮಾಡಿದರು.

ಇತ್ತೀಚೆಗೆ ದೈವಾಧೀನರಾದ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ದಿ. ಸಂಜೀವ ಸುವರ್ಣ, ಮತ್ತು ಸಂಸ್ಥೆಯ ಮಾಜಿ ಶಾಖ ವ್ಯವಸ್ಥಾಪಕರು ಲೆಕ್ಕಿಗರಾಗಿದ್ದ ದಿ. ವಸಂತ ಶೆಟ್ಟಿ ಹಾವಂಜೆ ಗೂಳೆ ಇವರಿಗೆ ಮಹಾಸಭೆಯಲ್ಲಿ ಮೌನಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ಸಂಘದ ಸದಸ್ಯರಲ್ಲಿ ಉತ್ತಮ ಭತ್ತದ ಕೃಷಿ ಮಾಡಿರುವ 15 ರೈತ ಸದಸ್ಯರನ್ನು ಸರಕಾರದ ಕೃಷಿ ಪ್ರಶಸ್ತಿ ಪಡೆದ ಆಶಾ ಪೂಜಾರ್ತಿ ಬಾಣಬೆಟ್ಟು, ಯಕ್ಷಗಾನ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ರಾವ್ ಹಾವಂಜೆ, ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತರಾದ ಎಚ್ ಸಖಾರಾಮ್ ಮಾಸ್ಟರ್ ಗೋಳಿಕಟ್ಟೆ, ಅಶಕ್ತರಿಗೆ ನಿರ್ಗತಿಕರಿಗೆ ಸದಾ ನೆರವು ನೀಡಿ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಹೋಂ ಡಾಕ್ಟರ್ ಫೌಂಡೇಶನ್ ಸಂಚಾಲಕರಾದ ಡಾ. ಶಶಿಕಿರಣ್ ಶೆಟ್ಟಿ ಕೊಳಲಗಿರಿ, ಶೈಕ್ಷಣಿಕ ಕ್ಷೇತ್ರದ ಪದವಿಯಲ್ಲಿ ರ್‍ಯಾಂಕ್ ಪಡೆದ ನಿಶಾ ಶೆಟ್ಟಿ ತೆಂಕಬೆಟ್ಟು, ಕ್ರೀಡಾ ಪ್ರತಿಭೆಯ ಸಾಧಕಿ ಹರ್ಷಿತಾ ಕೀಳಿಂಜೆ, ಶಿಕ್ಷಕರಾಗಿ ಇತ್ತೀಚೆಗೆ ನಿವೃತ್ತರಾದ ಜಯಪ್ರಕಾಶ್ ಸೇರ್ವೆಗಾರ್, ರುಕ್ಮಿಣಿ ಎಸ್. ಎಚ್, ಹೇಮಾ ಶೆಟ್ಟಿ ಹಾವಂಜೆ ಇವರನ್ನು ಸನ್ಮಾನಿಸಲಾಯಿತು.
ಸಂಘದ ಸದಸ್ಯರ ಮಕ್ಕಳಿಗೆ ನೀಡುವ ಸ್ಕಾಲರ್‌ಶಿಪ್ ಬಗ್ಗೆ ಪ್ರತಿಭಾನ್ವಿತ 55 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಆಕಸ್ಮಿಕ ಅಪಘಾತದಿಂದ ಮೃತಪಟ್ಟ ಸದಸ್ಯರ ಕುಟುಂಬಕ್ಕೆ ಆರ್ಥಿಕ ನೆರವು, ಅನಾರೋಗ್ಯದಲ್ಲಿರುವ ಸದಸ್ಯರ ವೈದ್ಯಕೀಯ ಆರೋಗ್ಯ ಚಿಕಿತ್ಸೆಗೆ ಆರ್ಥಿಕ ನೆರವಿನ ಚೆಕ್ಕನ್ನು ವಿತರಿಸಲಾಯಿತು.







ಸಂಘದ ಅಧ್ಯಕ್ಷರಾದ ಎನ್. ರಮೇಶ್ ಶೆಟ್ಟಿ, ಉಪಾಧ್ಯಕ್ಷರಾದ ಯು. ಕೃಷ್ಣಪ್ಪ ಪೂಜಾರಿ, ನಿರ್ದೇಶಕರಾದ ಹೂವಯ್ಯ ಸೇರ್ವೆಗಾರ್, ಪ್ರಫುಲ್ಲ ಚಂದ್ರ, ದೋಗು ಪೂಜಾರಿ, ಸುರೇಶ್ ಸುವರ್ಣ, ಪರಮೇಶ್ವರ ಯು., ರಶ್ಮೀ ಶೆಡ್ತಿ, ಪ್ರೇಮ ಲೂವಿಸ್, ರವಿಜಾ, ರಮೇಶ್ ಕರ್ಕೇರಾ, ಜಯಕರ ಆಚಾರ್, ಶ್ರೀನಿವಾಸ್ ಕುದ್ರುಬೆಟ್ಟು, ವಲಯ ಮೇಲ್ವಿಚಾರಕರಾದ ಕೆ. ರಾಜಾರಾಮ್ ಶೆಟ್ಟಿ ಉಪಸ್ಥಿತರಿದ್ದರು.


ಸದಸ್ಯರಾದ ವನಿತಾ ಆಚಾರ್ ಪ್ರಾರ್ಥನೆ ಮಾಡಿ, ನಿರ್ದೇಶಕರಾದ ಪ್ರೇಮಾ ಲೂವಿಸ್‍ರವರು ಸ್ವಾಗತಿಸಿ,
ಸಂಘದ ನಿರ್ದೇಶಕರಾದ ಪ್ರಫುಲ್ಲ ಚಂದ್ರರವರು ಸಂಘದ ಸದಸ್ಯರು ಸಭೆಗೆ ಭಾಗವಹಿಸಿ ಯಶಸ್ವಿ ನಿರ್ವಹಣೆಗೊಳಿಸಿದ ಸರ್ವ ಸದಸ್ಯರನ್ನು ಅಭಿನಂದಿಸಿ ವಂದನಾರ್ಪಣೆ ಗೈದರು.




Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























