ಚಿತ್ರಾಪು ಬಿಲ್ಲವರ ಸಂಘ ಮುಂಬಯಿ (ರಿ.) ಪಂಢರಪುರ ತೀರ್ಥಯಾತ್ರೆ

ಚಿತ್ರಾಪು ಬಿಲ್ಲವರ ಸಂಘ ಮುಂಬಯಿ (ರಿ.) ಪಂಢರಪುರ ತೀರ್ಥಯಾತ್ರೆ

0Shares

ಮುಂಬಯಿ, (ಆರ್‍ಬಿಐ) ಮಾ.04 : ಚಿತ್ರಾಪು ಬಿಲ್ಲವರ ಸಂಘ ಮುಂಬಯಿ (ರಿ.) ಸಂಚಾಲಕರು ಶ್ರೀ ವಿರೋಭ ಬಾಲಲೀಲಾ ಭಜನಾ ಮಂದಿರ ಚಿತ್ರಾಪು ಮುಲ್ಕಿ ಇದರ ಮುಂಬಯಿಯಲ್ಲಿ ನೆಲೆಸಿರುವ ಚಿತ್ರಾಪು ಗ್ರಾಮದ ಸದಸ್ಯರೊಂದಿಗೆ ಕಳೆದ ಗುರುವಾರ (ಫೆ. 20-23) ಎರಡು ದಿನಗಳ ಮಹಾರಾಷ್ಟ್ರ ಮತ್ತು ಕರ್ನಾಟದ ಗಡಿ ಪ್ರದೇಶದ ತೀರ್ಥ ಸ್ಥಳಗಳಾದ ಅಕ್ಕಲಕೋಟೆ, ಗಾಣಗಾಪುರ, ತುಳಜಾ ಭವಾನಿ, ಪಂಡರಪುರ, ಜೆಜುರಿ, ಪ್ರತಿ ಬಾಲಾಜಿ, ಪ್ರತಿ ಶಿರ್ಡಿ ಯಾತ್ರೆಗಳನ್ನು ಹಮ್ಮಿಕೊಂಡಿತು.

ಚಿತ್ರಾಪು ಬಿಲ್ಲವರ ಸಂಘ ಮುಂಬಯಿ ಹಿರಿಯ ಸದಸ್ಯರ ಮಾರ್ಗದರ್ಶನದೊಂದಿಗೆ ಹಾಗೂ ಎನ್ ಸಿಪಿ ನೇತಾರ ಲಕ್ಷ್ಮಣ್ ಸಿ. ಪುಜಾರಿ ದಂಪತಿಯ ಉಪಸ್ಥಿತಿಯೊಂದಿಗೆ 45 ಮಂದಿ ಸದಸ್ಯರು ತೀರ್ಥಯಾತ್ರೆಯಲ್ಲಿ ಭಾಗವಹಿಸಿದರು. ಸೋಲಾಪುರ ಜಿಲ್ಲೆಯ ಅಕ್ಕಲಕೋಟೆಯ ಸ್ವಾಮಿಯೆಂದೇ ಪ್ರಸಿದ್ಧರಾಗಿರುವ ಹತ್ತೊಂಬತ್ತನೇ ಶತಮಾನದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾರತೀಯ ರಾಜ್ಯಗಳಲ್ಲಿ ಪ್ರಸಿದ್ಧರಾಗಿದ್ದ ಆಧ್ಯಾತ್ಮಿಕ ಗುರು ಶ್ರೀ ಸ್ನಾ ವಿ.ಸಮರ್ಥ ಮಹಾರಾಜರ ಮಂದಿರ ಹಾಗೂ ಸಮಾಧಿ ಸ್ಥಳಕ್ಕೆ ಭೇಟಿಯಿತ್ತು, ಅಲ್ಲಿ ಸ್ವಾಮಿಗಳ ಬಗ್ಗೆ ಸವಿವರವಾದ ಮಾಹಿತಿ ಪಡೆದು, ಅಲ್ಲಿಂದ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ಪುಣೆ ರಾಯಚೂರು ರೈಲು ಮಾರ್ಗದಲ್ಲಿರುವ ಭೀಮ ಅವರಜ ನದಿಗಳ ಸಂಗಮದ ಹತ್ತಿರದಲ್ಲಿರುವ ಕರ್ನಾಟಕದ ಸುಪ್ರಸಿದ್ದ ಧಾರ್ಮಿಕ ಸ್ಥಳ ಶ್ರೀ ಕ್ಷೇತ್ರ ಗಾಣಗಾಪುರಕ್ಕೆ ಭೇಟಿ ನೀಡಿ, ಶ್ರೀ ವತ್ತಾತ್ರೇಯ ಹಾಗೂ ಶ್ರೀ ನರಸಿಂಹ ಸರಸ್ವತಿ ದೇವರ ದರ್ಶನ ಪಡೆದರು.

ಮಹಾರಾಷ್ಟ್ರದಲ್ಲಿ ಅಗ್ರಿ ಹಾಗೂ ಬೋಯರ್ ಸಮಾಜದವರಿಂದ ಹಾಗೂ ಗುಜರಾತದ ರಜಪೂತರು, ಉತ್ತರ ಕರ್ನಾಟಕ, ಪಶ್ಚಿಮ ರಾಜಸ್ಥಾನ ಮತ್ತು ಪಂಜಾಬ್ ರಾಜ್ಯದ ಜನರಿಂದಲೂ ಪೂಜಿಸಲ್ಪಡುವ, ಮರಾಪರ ರಾಜ ಛತ್ರಪತಿ ಶಿವಾಜಿ ಮಹಾರಾಜನ ರಕ್ಷಕ ದೇವತೆ ಎಂಬ ಖ್ಯಾತಿ ಪಡೆದ ತುಳಜಾ ಭಮನಿ’ಯ ದರ್ಶನಗೈದು ಮರುದಿನ ಸೋದಾಪುರ ಜಿಲ್ಲೆಯಲ್ಲಿರುವ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಲಿಂಗಾಯತ ಧರ್ಮದವರಿಗೆ ಪವಿತ್ರವಾದ ಈ ಕ್ಷೇತ್ರ ಸಂಕೀರ್ಣದ ಹೊರಗೆ ಸುಂದರ ಸರೋವರವಿದೆ, ಈ ದೇವಾಲಯವು ಹನ್ನೆರಡನೇ ಶತಮಾನದ ಶಿವಭಕ್ತ ಮತ್ತು ಸೋಲಾಪುರದ ಗ್ರಾಮದೇವತೆ ಎಂದು ಪರಿಗಣಿಸಲ್ಪಟ್ಟ ಸಿದ್ದೇಶ್ವರನಿಗೆ ಸಮರ್ಪಿತವಾಗಿದೆ. ದೇವಾಲಯದ ಮಧ್ಯ ಭಾಗದಲ್ಲಿ ಅಮೃತಶಿಲೆಯ ಸಮಾಧಿ ಅಸ್ತಿತ್ವದಲ್ಲಿದೆ.
ಸೋಲಾಪುರ ಜಿಲ್ಲೆಯಲ್ಲಿರುವ ಭೀಮಾ ನದಿಯ ತಟದಲ್ಲಿರುವ ಪಂಢರಪುರಕ್ಕೆ ಭೇಟಿ ಇತ್ತರು ನದಿಯಲ್ಲಿ ಪವಿತ್ರ ಸ್ನಾನವನ್ನು ಮುಗಿಸಿ, ರಾತ್ರಿ ವಿಠಲನ ದರ್ಶನಗೈದು ಭಜನೆ ಹಾಡುತ್ತಾ ವಿಠಲ ವಿಠಲ ಪಾಂಡುರಂಗ ಶ್ರೀ ಹರಿ ವಿಠಲ ಎಂಬ ತಾರಕ ಮಂತ್ರದೊಂದಿಗೆ ಎಲ್ಲೆಲ ಹಾಗೂ ರುಕ್ಷ್ಮಿಣಿಯ ದರ್ಶನಗೈದರು.

ಮರುದಿನ ಆದಿತ್ಯವಾರದಂದು ಪುಣೆ ಜಿಲ್ಲೆಯ ಜೆಜುರಿಯ ಗುಡ್ಡದ ತುದಿಯಲ್ಲಿರುವ ಖಂಡೋಬಾಚಿ ಜೆಜುರಿ’ಗೆ ಭೇಟಿ ನೀಡಿದರು. ಮಹಾರಾಷ್ಟ್ರದಲ್ಲಿ ಹೆಚ್ಚು ಭೇಟಿ ನೀಡುವ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ.
ಖಂಡೋಬಾನ ಗುಡ್ಡಕ್ಕೆ ಹತ್ತಿ-ಇಳಿದು, ಬಸವಳಿದ ಹಿರಿಯ-ಕಿರಿಯ ಸದಸ್ಯರು ಹಾಗೂ ಮಕ್ಕಳು ಸಮಯದ ಅಭಾವದಿಂದ ಮುಂದಿನ ಎರಡು ಕ್ಷೇತ್ರಗಳಾದ ಪ್ರತಿ ಶಿರ್ಡಿ ಹಾಗೂ ಪ್ರತಿ ಬಾಲಾಜಿ ಮಂದಿರಗಳಿಗೆ ದೂರದಿಂದ ಮನದಲ್ಲೇ ಕ್ಷಮೆ ಯಾಚಿಸಿದರು.

ಈ ಯಾತ್ರೆಯಲ್ಲಿ ಚಿತ್ರಾಪು ಬಿಲ್ಲವರ ಸಂಘ ಮುಂಬಯಿ (ರಿ.) ಸಂಚಾಲಕರು ಶ್ರೀ ವಿರೋಭ ಬಾಲಲೀಲಾ ಭಜನಾ ಮಂದಿರ ಚಿತ್ರಾಪು ಮುಲ್ಕಿ ಇದರ ಮುಂಬಯಿಯ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಶೇಖರ್ ಅಂಚನ್, ಉಮೇಶ್ ಜಿ. ಕೋಟ್ಯಾನ್, ಸೋಮನಾಥ್ ಪೂಜಾರಿ, ಮಧುಕರ್ ಆರ್. ಕೋಟ್ಯಾನ್, ನಿಶಿತ್ ಎಸ್. ಕೋಟ್ಯಾನ್, ರಾಧಾ ಸುರೇಶ್ ಕೋಟ್ಯಾನ್, ವಿಜಯ್ ಮುಲ್ಕಿ, ಗಂಗಾಧರ್ ಕೋಟ್ಯಾನ್, ರೇವತಿ ಪೂಜಾರಿ, ರಮಾ ವಿಶ್ವನಾಥ ಸನಿಲ್ ನವರ ಪರಿವಾರ ಸದಸ್ಯರು, ಪೂರ್ಣಿಮಾ ಅಶೋಕ್ ಅಂಚನ್, ರಮೇಶ್ ಕುಂದರ್, ಶಾಂಭವಿ ಕೋಟ್ಯಾನ್ ಮತ್ತು ರಾಮಚಂದ್ರ ಕೋಟ್ಯಾನ್, ಮೋನಪ್ಪ ಅವಿನ್ ಮಲಾಡ್, ಪಷ್ಟ ಸುಂದರ್ ಪೂಜಾರಿ ಕಾಂದಿವಲಿ, ಬಂಧು-ಮಿತ್ರರು ಜೊತೆಗಿದ್ದರು. ಯಾತ್ರೆ ಯಶಸ್ವಿಯಾಗಲು ಚಿತ್ರಾಪು ಬಿಲ್ಲವರ ಸಂಘ ಮುಂಬಯಿ (ರಿ.) ಅಧ್ಯಕ್ಷ ರಾಜು ಎಸ್. ಪೂಜಾರಿಯವರ ಅನುಪಸ್ಥಿತಿಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯ ಶೇಖರ್ ಅಂಚನ್, ಕಾರ್ಯದರ್ಶಿ ಉಮೇಶ್ ಜಿ. ಕೋಟ್ಯಾನ್, ಕೋಶಾಧಿಕಾರಿ ಸೋಮನಾಥ್ ಪಂಜಾರಿ, ಜೊತೆ ಕಾರ್ಯದರ್ಶಿ ನಿಶಿತ್ ಎಸ್. ಕೋಟ್ಯಾನ್ ಜವಾಬ್ದಾರಿ ವಹಿಸಿಕೊಂಡು ಯಾತ್ರೆ ಯಶಸ್ವಿಯಾಗಲು ಸಹಕರಿಸಿದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now