
ಸುವರ್ಣ ಮಹೋತ್ಸವ ಸಮಿತಿ, ಚೇತನಾ ಕಲೆ ಮತ್ತು ಕ್ರೀಡಾ ಸಮಿತಿ ಕೋಟೇಶ್ವರ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೋಟೇಶ್ವರ ಮತ್ತು ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ ಮಣಿಪಾಲ ಇದರ ಸಹಯೋಗದಲ್ಲಿ 2025ರ ಮಾರ್ಚ್ 2ರಂದು ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗ, ಕೋಟೇಶ್ವರದಲ್ಲಿ ಸಾಮಾನ್ಯ ಆರೋಗ್ಯ ಶಿಬಿರ ಆಯೋಜಿಸಲಾಯಿತು.
ಈ ಕಾರ್ಯಕ್ರಮವನ್ನು ಡಾ. ಸಂಜಯ್ ಕಿಣಿ, ಸಹ ಪ್ರಾಧ್ಯಾಪಕರು, ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ ಮಣಿಪಾಲ ; ಶ್ರೀ ಎಸ್ ಜಯಕರ ಶೆಟ್ಟಿ, ಅಧ್ಯಕ್ಷರು, ಭಾರತೀಯ ರೆಡ್‌ಕ್ರಾಸ್ ಸೊಸೈಟಿ, ಕುಂದಾಪುರ; ಡಾ. ಪೂರ್ಣಿಮಾ, ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೋಟೇಶ್ವರ; ಡಾ. ಶೋಭಾ, ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕುಂಭಾಶಿ ಹಾಗೂ ಶ್ರೀ ಚಂದ್ರ ನಾಯ್ಕ ಹೆಚ್, ಮುಖ್ಯೋಪಾಧ್ಯಾಯರು, ಕರ್ನಾಟಕ ಪಬ್ಲಿಕ್ ಸ್ಕೂಲ್, ಪ್ರಾಥಮಿಕ ವಿಭಾಗ, ಕೋಟೇಶ್ವರ ಇವರು ಉದ್ಘಾಟಿಸಿದರು.
ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ತಪಾಸಣೆ, ಮಧುಮೇಹ ಪರೀಕ್ಷೆ, ಹಿಮೋಗ್ಲೋಬಿನ್ (ಊb) ತಪಾಸಣೆ, ರಕ್ತದೊತ್ತಡ ಪರೀಕ್ಷೆ ಮತ್ತು ಇ.ಸಿ.ಜಿ ಸೇವೆಗಳನ್ನು ಉಚಿತವಾಗಿ ಒದಗಿಸಲಾಯಿತು.
ಸುಮಾರು 105 ಜನ ಫಲಾನುಭವಿಗಳು ಈ ಆರೋಗ್ಯ ತಪಾಸಣಾ ಶಿಬಿರದ ಲಾಭವನ್ನು ಪಡೆದುಕೊಂಡರು

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























