ಶಿರ್ವಾ ಕ್ರೆಸ್ತರ ಶಿಲುಬೆ ದ್ವಂಸ ; ದುಷ್ಕರ್ಮಿಗಳ ಬಂಧನಕ್ಕೆ ನ್ಯಾಯವಾದಿ ಎ.ಪಿ ಮೊಂತೆರೋ ಆಗ್ರಹ

ಶಿರ್ವಾ ಕ್ರೆಸ್ತರ ಶಿಲುಬೆ ದ್ವಂಸ ; ದುಷ್ಕರ್ಮಿಗಳ ಬಂಧನಕ್ಕೆ ನ್ಯಾಯವಾದಿ ಎ.ಪಿ ಮೊಂತೆರೋ ಆಗ್ರಹ

0Shares

ಮುಂಬಯಿ (ಆರ್‌ಬಿಐ), ಫೆ.23: ಕರ್ನಾಟಕ ಕರಾವಳಿಯಲ್ಲಿ ಭಯದ ವಾತಾವರಣ ಸೃಷ್ಟಿಸಲು ಕೆಲವೊಂದು ಕಿಡಿಗೇಡಿಗಳು ಹುನ್ನಾರ ಮಾಡುತ್ತಿದ್ದು ಜಾತಿ ಧರ್ಮಗಳ ಮಧ್ಯೆ ದ್ವೇಷ ಉಂಟುಮಾಡಿ ಸಾಮರಸ್ಯವನ್ನು ಕೆಡವಿ ಭಯದ ವಾತವರಣ ಉಂಟುಮಾಡುವ ಉದ್ದೇಶದಿಂದ ಉಡುಪಿ ಜಿಲ್ಲೆಯ ಕಾಪು ತಾಲೂಕು ಶಿರ್ವಾ ಇಲ್ಲಿನ ಕುದುರೆಮಲೆ ಕ್ರೆಸ್ತರ ಪವಿತ್ರ ಶಿಲುಬೆಯನ್ನು ಧ್ವಂಸ ಮಾಡಿರುವ ಈ ಘಟನೆಯನ್ನು ಯುವ ವಕೀಲರು, ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಪ್ರಧಾನ ಕಾರ್ಯದರ್ಶಿ ಎ.ಪಿ ಮೊಂತೆರೋ ತೀವ್ರವಾಗಿ ಖಂಡಿಸಿದ್ದಾರೆ.

ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ಸೂಕ್ತ ಕ್ರಮಕೈಗೊಂಡು ಕರವಳಿಯಾದ್ಯಂತ ಸೌಹಾರ್ದ ವಾತಾವರಣ ನಿರ್ಮಾಣ ಮಾಡುವರೇ ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಘಟನೆಯನ್ನು ಲಘುವಾಗಿ ಪರಿಗಣಿಸಿದರೆ ನಾಡಿನ ಸೌಹಾರ್ದ ಬಯಸುವ ಎಲ್ಲರನ್ನು ಒಗ್ಗೂಡಿಸಿಕೊಂಡು ಜಿಲ್ಲಾಡಳಿತದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ನ್ಯಾಯವಾದಿ ಎ.ಪಿ.ಮೊಂತೆರೋ ಎಚ್ಚರಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now