ಮಾ.೮ ರಂದು ಮೂಡೂರು-ಪಡೂರು ಕಂಬಳ ಮುಖ್ಯಮಂತ್ರಿ ಸಹಿತ ಮಂತ್ರಿಗಳ ದಂಡು

ಮಾ.೮ ರಂದು ಮೂಡೂರು-ಪಡೂರು ಕಂಬಳ ಮುಖ್ಯಮಂತ್ರಿ ಸಹಿತ ಮಂತ್ರಿಗಳ ದಂಡು

0Shares

ಬಂಟ್ವಾಳ: ಮಾ.೮ ರಂದು ಮೂಡೂರು-ಪಡೂರು ಕಂಬಳ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹಿತ ಮಂತ್ರಿಗಳ ದಂಡು

ಮುಂಬಯಿ, (ಬಂಟ್ವಾಳ) (ಆರ್‌ಬಿಐ) ಫೆ.೨೨: ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ೧೪ ನೇ ವರ್ಷದ ಹೊನಲು ಬೆಳಕಿನ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳ ಮಾ.೮ರಂದು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹಿತ ಹಲವು ಮಂದಿ ಸಚಿವರು ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದಿವಂಗತ ಆಲ್ಬರ್ಟ್ ಪಾಯಸ್ ಕೂಡಿಬೈಲು ವೇದಿಕೆಯಲ್ಲಿ ಅಂದು ಬೆಳಿಗ್ಗೆ ಗಂಟೆ ೮.೪೫ಕ್ಕೆ ಸೋಲೂರು ಆರ್ಯ-ಈಡಿಗ ಮಹಾ ಸಂಸ್ಥಾನ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಸಹಿತ ಅಲ್ಲಿಪಾದೆ ಸಂತ ಅಂತೋನಿ ಚರ್ಚ್‌ನ ಧರ್ಮಗುರು ರಾಬರ್ಟ್ ಡಿಸೋಜ, ಅಳದಂಗಡಿ ಅರಮನೆ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲ ಕಂಬಳ ಕೂಟಕ್ಕೆ ಚಾಲನೆ ನೀಡುವರು ಎಂದರು.

ಈ ಹಿಂದೆ ಕಾವಳಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ಬಿ.ಪದ್ಮಶೇಖರ್ ಜೈನ್ ಅಧ್ಯಕ್ಷತೆಯಲ್ಲಿ ೧೦ ವರ್ಷ ಅದ್ದೂರಿ ಕಂಬಳ ನಡೆಸಿ ಜಮೀನಿನ ಸಮಸ್ಯೆಯಿಂದ ಸ್ಥಗಿತಗೊಂಡಿತ್ತು. ಇದೀಗ ಪಿಯೂಸ್ ಎಲ್.ರಾಡ್ರಿಗಸ್ ಅಧ್ಯಕ್ಷತೆಯಲ್ಲಿ ಕಳೆದ ೪ ವರ್ಷಗಳಿಂದ ನಾವೂರು ಗ್ರಾಮದ ಕೂಡಿಬೈಲು ಗದ್ದೆಯಲ್ಲಿ ಸುವ್ಯವಸ್ಥಿತ ಮತ್ತು ವಿವಿಧ ಮೂಲಭೂತ ಸೌಕರ್ಯಗಳಿಂದ ಕೂಡಿದ ಜೋಡುಕರೆಯಲ್ಲಿ ಶಿಸ್ತುಬದ್ಧ ಕಂಬಳ ಕೂಟ ನಡೆಯುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಚಂದ್ರ ಪ್ರಕಾಶ್ ಶೆಟ್ಟಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಕೋಶಾಧಿಕಾರಿ ಫಿಲಿಪ್ ಫ್ರಾಂಕ್, ಪ್ರಮುಖರಾದ ಸುದರ್ಶನ್ ಜೈನ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಕೆ. ಪದ್ಮನಾಭ ರೈ, ಪಿ.ರಾಮಕೃಷ್ಣ ಆಳ್ವ, ಸುಧಾಕರ ಶೆಣೈ ಖಂಡಿಗ, ಸುದೀಪ್ ಕುಮಾರ್ ಶೆಟ್ಟಿ, ಉಮೇಶ ಕುಲಾಲ್ ನಾವೂರು, ಸದಾಶಿವ ಬಂಗೇರ, ಸುರೇಶ್ ಕುಮಾರ್ ನಾವೂರು, ಶಬೀರ್ ಸಿದ್ಧಕಟ್ಟೆ, ಅಬ್ಬಾಸ್ ಆಲಿ, ಬಿ.ಮೋಹನ್, ಮಹಮ್ಮದ್ ಶರೀಫ್, ಮಹಮ್ಮದ್ ನಂದಾವರ, ರಾಜೇಶ್ ರಾಡ್ರಿಗಸ್, ಲ್ಯಾಸ್ಟರ್ ರಾಡ್ರಿಗಾಸ್, ಸಿದ್ದಿಕ್ ಗುಡ್ಡೆಯಂಗಡಿ, ದೇವಪ್ಪ ಕುಲಾಲ್ ಪಂಜಿಕಲ್ಲು, ಕೇಶವ ಪೂಜಾರಿ ಅಸಲ್ಡೋಡಿ, ಪ್ರವೀಣ್ ರಾಡ್ರಿಗಸ್ ವೆಂಕಪ್ಪ ಪೂಜಾರಿ, ಡೆನ್ಜಿಲ್ ನೊರೋನ್ಹ ಮತ್ತಿತರರು ಇದ್ದರು.

ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now