ಸಾಹಿತ್ಯದ ಲಯ ಅರಿತವನು ಕವಿಯಾಗುತ್ತಾನೆ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

ಸಾಹಿತ್ಯದ ಲಯ ಅರಿತವನು ಕವಿಯಾಗುತ್ತಾನೆ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

0Shares

ಸಾಹಿತ್ಯದ ಲಯ ಅರಿತವನು ಕವಿಯಾಗುತ್ತಾನೆ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

ಉಪ್ಪಿನಂಗಡಿ: ’ಸಾಹಿತ್ಯಕ್ಕೆ ಒಂದು ಲಯವಿದೆ, ಅದಕ್ಕೆ ಅದರದ್ದೇ ಆದ ರುಚಿಯಿದೆ. ಅದನ್ನರಿತವನು ನಾಳೆ ಕವಿಯಾಗುತ್ತಾನೆ,’ ಎಂದು ಕವಿತೆಯ ಹಿಂದಿನ ಮರ್ಮವನ್ನು ಬಿಚ್ಚಿಟ್ಟವರು ಯುವ ಕವಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು.

ಉಪ್ಪಿನಂಗಡಿ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಇತ್ತೀಚೆಗೆ ಮಂಗಳೂರಿನ ಸಾಹಿತ್ಯಕೂಟ ಆಯೋಜಿಸಿದ್ದ ಸಾಹಿತ್ಯ ಕಲರವ (ಸರಣಿ-2) ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ʼಕಾವ್ಯಾನುಸಂಧಾನʼ ಎಂಬ ವಿಷಯದ ಕುರಿತು ಮಾತನಾಡಿದ ಅವರು ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಕುತೂಹಲ ಮೂಡಿಸಿದರು.

ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಹವ್ಯಾಸಿ ಪತ್ರಕರ್ತ ಗುರುಪ್ರಸಾದ್ ಟಿ.ಎನ್, ʼಬರೆಯುವ ಖುಷಿʼ ಎಂಬ ವಿಷಯವನ್ನಿಟ್ಟುಕ್ಕೊಂಡು ಮಾತನಾಡುತ್ತಾ, ಬರವಣಿಗೆ ಮಕ್ಕಳಲ್ಲಿ ಚಿಂತನಾಶಕ್ತಿಯನ್ನು, ಸೂಕ್ಷ್ಮ ಸಂವೇದನೆಯನ್ನು ಹೆಚ್ಚಿಸುತ್ತದೆ, ಎಂದು ಅಭಿಪ್ರಾಯಪಟ್ಟರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now