
ಶತಮಾನದ ಹೆಗ್ಗಳಿಕೆಯ ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್‍ಗೆ ಭಾರತೀಯ ರಿಸರ್ವ್ ಬ್ಯಾಂಕ್‍ನ ಮಾನದಂಡ ಮತ್ತು ಮೇಲ್ವಿಚಾರಣೆ ಕ್ರಿಯೆಯ ಚೌಕ್ಕಟ್ಟಿನಂತೆ (Sಂಈ) ಬ್ಯಾಂಕಿನ ಹಣಕಾಸು ಸ್ಥಿರತೆ ಮತ್ತು ಸದೃಢತೆಯನ್ನು ಖಚಿತಪಡಿಸಿಕೊಂಡು ಸಹಕಾರಿ ಬ್ಯಾಂಕಿಂಗ್ ಶ್ರೇಷ್ಠತೆಯನ್ನು ಪರಿಗಣಿಸಿ “ಃesಣ ಖಿuಡಿಟಿ ಂಡಿಡಿouಟಿಜ ಃಚಿಟಿಞ” ಎನ್ನುವ ಹೆಗ್ಗಳಿಕೆಯೊಂದಿಗೆ ಮಹಾರಾಷ್ಟ್ರದ ಲೋನಾವಾಲ ಆ್ಯಬಿವ್ಯಾಲಿಯಲ್ಲಿ ಜರಗಿದ ರಾಷ್ಟ್ರೀಯ ಮಟ್ಟದ “ಃಚಿಟಿಛಿo ಃಟue ಖibboಟಿ” ಮತ್ತು ವಾರ್ಷಿಕ ಶೃಂಗಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಚ್. ಜಯಪ್ರಕಾಶ್ ಕೆದ್ಲಾಯರವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ಮಟ್ಟದ ಈ ಸಮಾರಂಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಸಿ.ಜಿ.ಎಮ್. ಶ್ರೀ ಭಾಗೇಶ್ವರ್ ಬ್ಯಾನರ್ಜಿಯವರು ಈ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದು ಈ ಸಮಾರಂಭದಲ್ಲಿ ಕೊಲ್ಲಾಪುರದ ಂvies Pubಟiಛಿಚಿಣioಟಿನ ಮುಖ್ಯಸ್ಥ ಶ್ರೀ ಅವಿನಾಶ್ ಶಿಂಟ್ರಿ ಗುಂಡಾಲೆ ಮತ್ತು ಪೂನಾದ ಗ್ಯಾಲಕ್ಸಿ ಇನ್ ಇದರ ನಿರ್ದೇಶಕರಾದ ಶ್ರೀ ಅಶೋಕ್ ನಾಯಕ್ ಭಾಗವಹಿಸಿದ್ದರು.
ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಿದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ. ವಿಷ್ಣುಮೂರ್ತಿ ಆಚಾರ್ಯ, ಮುಖ್ಯ ಸಲಹೆಗಾರರಾದ ಶ್ರೀ ಎಸ್. ಕುಮಾರಸ್ವಾಮಿ ಉಡುಪ, ನಿರ್ದೇಶಕರ ಮಂಡಳಿ, ಎಲ್ಲಾ ಸಿಬ್ಬಂದಿ ವರ್ಗದವರು, ಸದಸ್ಯರು ಮತ್ತು ಗ್ರಾಹಕರ ಸಹಕಾರವನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಚ್. ಜಯಪ್ರಕಾಶ್ ಕೆದ್ಲಾಯರವರು ಈ ಸಂದರ್ಭದಲ್ಲಿ ಸ್ಮರಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























