ಮರದ ಹೆಸರು ” Beggar’s Bowl tree”
ನಾನು ಇದಕ್ಕೂ ಬ್ರಹ್ಮಕಪಾಲ ಕಥೆಗೂ ಲಿಂಕ್ ಇದೆ ಎಂದು ಹೇಳಿದಾಗ ಎಷ್ಟು ಜನ ಪುರಾಣದ ಪುಟಗಳನ್ನು ತಿರುವಿ ನೋಡಿದಿರೋ ಗೊತ್ತಿಲ್ಲ. ಆದರೆ ಇದು ಭಾರತಕ್ಕೆ ಬಂದು ನೂರಾರು ವರ್ಷಗಳು ಕಳೆದಿದ್ದರೂ, ಇದರ ಮೂಲ ಮಾತ್ರ ಅಮೇರಿಕಾದತ್ತ ತೋರಿಸುತ್ತದೆ.
ಅದನ್ನು ಕತ್ತರಿಸಿದಾಗ ಬಿಳೀ ಅನ್ನದ ಅಗುಳಿನಂತೆ ಒಳಭಾಗದಲ್ಲಿ ಕಾಣಿಸುತ್ತದೆ…
ಕೆರಿಬಿಯನ್ ದ್ವೀಪ ಸಮೂಹಗಳ ನಡುವೆ ಇರುವ ಸುಂದರವಾದ ಭೂ ದೃಶ್ಯಗಳನ್ನು ಹೊಂದಿರುವ ಸೈಂಟ್ ಲೂವಿಸ್ ಎನ್ನುವ ದೇಶ ಈ ಮರವನ್ನು ರಾಷ್ಟ್ರೀಯ ವೃಕ್ಷವನ್ನಾಗಿ ಹೊಂದಿದೆ.
ಆಂಧ್ರಪ್ರದೇಶದ ಬಹುದೊಡ್ಡ ರಾಜಕಾರಣಿ ಒಬ್ಬರ ಮನೆಯ ತೋಟದಲ್ಲಿ ಇದನ್ನು ನಾನು ಹತ್ತು ವರ್ಷಗಳ ಹಿಂದೆ ನೆಟ್ಟಿದ್ದೆ.
ಕನ್ನಡದಲ್ಲಿ ಇದು ಸನ್ಯಾಸಿ ಬಕ್ಕೆ.
ತಮಿಳಿನಲ್ಲಿ ತಿರುವಟ್ಟುಕಾಯ್
ಸಸ್ಯಶಾಸ್ತ್ರೀಯ ಹೆಸರು Crescentia cajute
ಆಂಗ್ಲ ಭಾಷೆಯಲ್ಲಿ Calabash tree ಎಂದೇ ಪ್ರಸಿದ್ಧಿ ಪಡೆದಿದೆ.
ಹಲವು ವಿಧಗಳಲ್ಲಿ ಔಷಧೀಯ ಗುಣವನ್ನು ಹೊಂದಿರುವ ಈ ಮರದ ಸಸಿಗಳು ಬೆಂಗಳೂರಿನಲ್ಲಿ ಸಿಗುತ್ತವೆ.
– ಲೋಕೇಶ್ ಪೂಜಾರಿ, Kolalgiri
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now