
ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಮಧ್ವನವರಾತ್ರೋತ್ಸವ ಸಂಭ್ರಮ
ದಿನಾಂಕ ಫೆಬ್ರವರಿ 2 ರಂದು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಸಂಜೆ ರಾಜಾಂಗಣದಲ್ಲಿ ನಡೆದ ಮಧ್ವ ನವರಾತ್ರೋತ್ಸವದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಮುಖ್ಯಸ್ಥರನ್ನು ಸನ್ಮಾನಿಸಿದರು.

ಶ್ರೀಮಧ್ವಾಚಾರ್ಯರು ಅವತರಿಸಿದಾಗ ಅವರಿಗೆ ಹಾಲಿನ ವ್ಯವಸ್ಥೆಗಾಗಿ ಗೋದಾನ ಮಾಡಿದ ಮೂಡಿಲ್ಲಾಯರೆಂದೇ ಪ್ರಸಿದ್ಧವಾದ ಚಿತ್ಪಾಡಿಯ ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ ದೇವಸ್ಥಾನದ ಮುಖ್ಯಸ್ಥರಾದ ಡಾ. ಗೋಪಾಲಕೃಷ್ಣ ಬಲ್ಲಾಳರು ಹಾಗೂ ಕಾಸರಗೋಡಿನಲ್ಲಿ ಇರುವ ಶ್ರೀ ಜಯಸಿಂಹ ರಾಜನ ಪರಂಪರೆಯ ಮಾಣಿಪ್ಪಾಡಿ ಅರಮನೆಯ ಅರ್ಚಕರಾದ ಶ್ರೀ ವೆಂಕಟೇಶ ಮನೋಲಿತ್ತಾಯ ಹಾಗೂ ಶ್ರೀ ಮಧ್ವಾಚಾರ್ಯರು ಕೃಷ್ಣಾಮೃತಮಹಾರ್ಣವ ಗ್ರಂಥವನ್ನು ರಚಿಸಿದ ಶ್ರೀಕ್ಷೇತ್ರ ಕೊಕ್ಕಡ ಶ್ರೀವೈದ್ಯನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ *ಶ್ರೀ ಕೆ. ರಮಾನಂದ ಭಟ್ ಇವರನ್ನು ಪರಮಪೂಜ್ಯ ಶ್ರೀಪಾದರು ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಪರಮಾನುಗ್ರಹ ರೂಪವಾದ ಪ್ರಸಾದವನ್ನು ನೀಡಿ ಸನ್ಮಾನಿಸಿದರು. ಶ್ರೀ ಪುತ್ತಿಗೆ ಮಠದ ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಹಾಗೂ ಹಿರಿಯ ವಿದ್ವಾಂಸರಾದ ಪ್ರೊ ವ್ಯಾಸನಕೆರೆ ಪ್ರಭಂಜನಾಚಾರ್ಯರು ದಿವಾನರಾದ ವಿದ್ವಾನ್ ಎಂ ಪ್ರಸನ್ನ ಆಚಾರ್ಯ , ಶ್ರೀ ಮಹಿತೋಷ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಡಾ. ಬಿ ಗೋಪಾಲಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























