
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ,. ಉಡುಪಿ ಇದರ 2025-2026 ನೇ ಸಾಲಿನಿಂದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಶ್ರಿಯುತ ಬಿ.ಜಯಕರ ಶೆಟ್ಡಿ ಇಂದ್ರಾಳಿ ಇವರು ಹಾಗೂ ಉಪಾಧ್ಯಕ್ಷರಾಗಿ ಶ್ರಿಯುತ ಅಶೋಕ್ ಕುಮಾರ್ ಬಲ್ಲಾಳ್ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಇವರನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನ ಆಡಳಿತ ಮಂಡಲಿ ಹಾಗೂ ಸಿಬ್ಬಂದಿ ವರ್ಗದವರ ಪರವಾಗಿ ಆಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರು ಹಾಗೂ ಶಾಸಕರಾದ ಯಶ್ ಪಾಲ್ ಎ ಸುವರ್ಣ , ನಿರ್ದೇಶಕರುಗಳಾದ ಶ್ರೀಯುತ ಹೆಚ್.ಶೆಟ್ಟಿಯವರನ್ನು ಶೆಟ್ಟಿ, ಶ್ರೀಯುತ ಎನ್ .ಮಂಜಯ್ಯ ಶೆಟ್ಟಿ, ಶ್ರೀಯುತ ಬಿ. ಕರುಣಾಕರ ಶೆಟ್ಡಿ,ಶ್ರೀಯುತ ಪ್ರಸಾದ್ ಎಸ್.ಶೆಟ್ಟಿ, ಶ್ರೀಯುತ ಸುಧೀರ್ ವೈ ,ಶ್ರೀಯುತ ಬಿ. ಪ್ರದೀಪ್ ಯಡಿಯಾಳ್ ,ಶ್ರೀಯುತ ಅನಿಲ್ ಎಸ್ ಪೂಜಾರಿ,ಶ್ರೀಯುತ ಅಲೆವೂರು ಹರೀಶ್ ಕಿಣಿ ,ಶ್ರೀಯುತ ಬಿ.ಅರುಣ್ ಕುಮಾರ್ ಹೆಗ್ಡೆ, ಶ್ರೀಯುತ ಶ್ರೀಧರ್ ಪಿ.ಎಸ್ .ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಕೆ.ಆರ್ ಲಾವಣ್ಯ .ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಅನುಷಾ ಕೋಟ್ಯಾನ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರಿಮತಿ ಸುಕನ್ಯ ಇವರು ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷರಾಗಿ ಆಯ್ಕೆ ಯಾದ ಜಯಕರ ಶೆಟ್ಟಿ ಇಂದ್ರಾಳಿ ಯವರನ್ನು ಅಭಿನಂದಿಸಿದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























