
ಉಪ್ಪೂರು ಗ್ರಾಮದ ಚಕ್ಕುಲಿಕಟ್ಟೆಯಲ್ಲಿ ಅಗ್ನಿ ಆಕಸ್ಮಿಕ…
ಉಪ್ಪೂರು ಗ್ರಾಮದ ಚಕ್ಕುಲಿಕಟ್ಟೆಯಲ್ಲಿ ಬೆಂಕಿ ಹತ್ತಿಕೊಂಡು ದಟ್ಟವಾದ ಹೊಗೆಯೊಂದಿಗೆ ಕಾಡು ಆವರಿಸಿದ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಆರತಿ ಪೂಜಾರಿಯವರು ಸಾರ್ವಜನಿಕರಿಗೆ ಹಾಗೂ ಒಂದನೇ ವಾರ್ಡಿ ಅಭಿವೃದ್ಧಿ ಸಮಿತಿಯ ಸಂಚಾಲಕರು ಹಾಗೂ ವಾರ್ಡ್ ಸದಸ್ಯ ಅಶ್ವಿನ್ ರೋಚ್ ಅವರ ಗಮನಕ್ಕೆ ತಂದರು… ಒಂದನೇ ವಾರ್ಡಿನ ಯುವಕರು ಹಾಗೂ ಸಾರ್ವಜನಿಕರು ಹರಸಾಹಸಪಟ್ಟರೂ ಬೆಂಕಿಯನ್ನು ಹತೋಟಿಗೆ ತರಲು ವಿಫಲರಾದಾಗ ಪಂಚಾಯತ್ ಅಧ್ಯಕ್ಷರಾದ ಗ್ರಾಯತ್ರಿ ಹಾಗೂ ಶಾಸಕರಾದ ಯಶಪಾಲ್ ಸುವರ್ಣ ರವರು ಕೂಡಲೆ ಸ್ಪಂದಿಸಿ ಅಗ್ನಿಶಾಮಕದವರಿಗೆ ವಿಚಾರ ತಿಳಿಸಿ ಅವರ ಅವಿರತ ಶ್ರಮದಿಂದ ಬೆಂಕಿ ಹತೋಟಿಗೆ ಬಂದು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಯಿತು.. ಈ ಸಂದರ್ಭದಲ್ಲಿ ನೀರಿನ ಟ್ಯಾಂಕರ್ ನೀಡಿ ಸಹಕರಿಸಿದ ಯಶವಂತ್ ನಾಯಕ್ ಅಮ್ಮುಂಜೆ, ಮತ್ತು ಬ್ರಹ್ಮಾವರ ಠಾಣಾಧಿಕಾರಿಗಳು.. ಅರಣ್ಯ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಸದಸ್ಯರುಗಳಾದ ಧರಣೇಶ್, ಪ್ರಕಾಶ್ ದೇವಾಡಿಗ ಹಾಗೂ ಅಗ್ನಿಶಾಮಕ ಅಧಿಕಾರಿಗಳಿಗೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದರು….

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























