‘ಉಪನ್ಯಾಸಕ ವೃತ್ತಿಗೆ ನಿವೃತ್ತಿ ಎಂಬುದಿಲ್ಲʼ – ಹೊಸದಿಗಂತ ಪತ್ರಿಕೆಯ ಸಿಇಓ ಪ್ರಕಾಶ್ ಪಿ.ಎಸ್

‘ಉಪನ್ಯಾಸಕ ವೃತ್ತಿಗೆ ನಿವೃತ್ತಿ ಎಂಬುದಿಲ್ಲʼ – ಹೊಸದಿಗಂತ ಪತ್ರಿಕೆಯ ಸಿಇಓ ಪ್ರಕಾಶ್ ಪಿ.ಎಸ್

0Shares


ಮಂಗಳೂರು, 18 ಜನವರಿ, 2025: ಜಗತ್ತಿನಲ್ಲಿ ಪರಮ ಪವಿತ್ರ ವೃತ್ತಿ ಎಂದರೆ ಅದು ಉಪನ್ಯಾಸಕ ವೃತ್ತಿ. ಜೀವನ ಪರ್ಯಂತ ಸಿಗುವ ಗೌರವ ಮಾತ್ರವಲ್ಲ ನಿವೃತ್ತಿ ಎಂಬುದೇ ಈ ವೃತ್ತಿಗೆ ಇಲ್ಲ, ಎಂದು ಹೊಸದಿಗಂತ ಪತ್ರಿಕೆಯ ಸಿಇಓ ಪ್ರಕಾಶ್ ಪಿ.ಎಸ್ ಹೇಳಿದರು.

ಇವರು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗ ನಗರದ ಶಾರದಾ ವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಯಕ ಸಂಕಲ್ಪ ದಿನ ಉದ್ಘಾಟಿಸಿ ಮಾತನಾಡಿದರು. ಯುವ ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಅವರು, ವಿವೇಕಾನಂದರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಒಬ್ಬ ಆದರ್ಶ ಶಿಕ್ಷಕ ತನ್ನ ವಿದ್ಯಾರ್ಥಿಗಳೇ ಆಸ್ತಿ ಎಂಬಂತೆ ಸೇವೆ ಸಲ್ಲಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚ.ನ ಶಂಕರರಾವ್ ಮಾತನಾಡಿ ಶಿಕ್ಷಕ ವೃತ್ತಿ ಅತ್ಯಂತ ಪಾವಿತ್ರ್ಯತೆಯುಳ್ಳದ್ದು. ಅಂತಹ ಶಿಕ್ಷಕ ವೃತ್ತಿಯನ್ನು ಆತ್ಮ ಸಾಕ್ಷಿಯಿಂದ ಮಾಡುವ ಅವಶ್ಯಕತೆ ಇಂದಿನ ಶಿಕ್ಷಕರಲ್ಲಿರಬೇಕು, ಎಂದರು.

ಕೆಆರ್‌ಎಂಎಸ್‌ಎಸ್ ರಾಜ್ಯ ಪ್ರಧಾನ ಜಂಟಿ ಕಾರ್ಯದರ್ಶಿ ಡಾ ಮಾಧವ ಎಂ. ಕೆ ಪ್ರಸ್ತಾವನೆಗೈದರು. ಡಾ. ಸುಭಾಷಿಣಿ ಶ್ರೀವತ್ಸ ಸಂಕಲ್ಪ ಬೋಧನೆಗೈದರು. ಶಿಕಾರಿಪುರ ಕೃಷ್ಣಮೂರ್ತಿ, ಎಬಿಆರ್‌ಎಸ್‌ಎಂ ವಿಶ್ವವಿದ್ಯಾನಿಲಯ ಘಟಕದ ಅಧ್ಯಕ್ಷೆ ಪ್ರೊ.ವಿಶಾಲಾಕ್ಷಿ ಉಪಸ್ಥಿತರಿದ್ದರು. ಕೆಆರ್‌ಎಂಎಸ್‌ಎಸ್ ಮಂಗಳೂರು ವಿಭಾಗದ ಅಧ್ಯಕ್ಷೆ ವಾಣಿ ಯು ಎಸ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ವಂದಿಸಿದರು. ಶ್ರುತಿ ಕಾರ್ಯಕ್ರಮ ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now