
ಪುತ್ತೂರು: ದೆಹಲಿಯ ಗಣರಾಜ್ಯೋತ್ಸವ ಪರೇಡ್ ನ ಪ್ರಯುಕ್ತ ಆಯೋಜಿಸಿದ ಸತತ ಏಳು ಕ್ಯಾಂಪಿನಲ್ಲಿ ಭಾಗವಹಿಸಿ ಯಶಸ್ವಿಗೊಂಡು ಇದೀಗ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡಿಗೆ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ)ದ ಎನ್.ಸಿ.ಸಿ ಘಟಕದ ಮೂವರು ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.
ಪ್ರೈಮ್ ಮಿನಿಸ್ಟರ್ ರ್ಯಾಲಿ ಯಲ್ಲಿ ಭಾಗವಹಿಸಲು ಗೊಳಿತಡಿ
ನಿವಾಸಿಯಾದ ರುಕ್ಷ್ಮಯ ಮತ್ತು ಗೀತಾ ಇವರ ಪುತ್ರ ದ್ವಿತೀಯ ಬಿಕಾಂ ವಿದ್ಯಾರ್ಥಿ ಜೂನಿಯರ್ ಅಂಡರ್ ಆಫೀಸರ್ ಸುಜಿತ್, ಕರ್ತವ್ಯಪಥ್ ನಲ್ಲಿ ಪಾಲ್ಗೊಳ್ಳಲು ಬೊಂಡಾಲ ನಿವಾಸಿಯಾದ ಉದಯಕುಮಾರ್ ಮತ್ತು ವನಿತಾ ಇವರ ಪುತ್ರಿ ತೃತೀಯ ಬಿಸಿಎ ವಿದ್ಯಾರ್ಥಿನಿ ಜೂನಿಯರ್ ಅಂಡರ್ ಆಫೀಸರ್ ಲಹರಿ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಸುಳ್ಯ ನಿವಾಸಿಯಾದ ರವಿಪ್ರಕಾಶ್ ಮತ್ತು ಜಯಶ್ರೀ ಆರ್ ಪ್ರಕಾಶ್ ಪುತ್ರಿ ಕಾರ್ಪೊರಲ್ ಶುಭದ ಆರ್ ಪ್ರಕಾಶ್ ಆಯ್ಕೆಗೊಂಡ ವಿದ್ಯಾರ್ಥಿಗಳು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























