
ಉಡುಪಿ, 13 ಜನವರಿ 2025: ಯುವ ವಿಚಾರ ವೇದಿಕೆ (ರಿ) ಉಪ್ಪೂರು ಕೊಳಲಗಿರಿ ಇದರ ರಜತ ಮಹೋತ್ಸವದ ಲೋಗೋ ಅನಾವರಣ ಹಾಗೂ ಬೆಂಕಿ ಇಲ್ಲದ ಅಡುಗೆ ಕಾರ್ಯಕ್ರಮವು ವೇದಿಕೆಯ ಸಭಾಂಗಣದಲ್ಲಿ ನೆರವೇರಿತು. ಉದ್ಯಮಿಗಳು ಹಾಗೂ ಕೃಷಿತಜ್ಞರಾದ ರೋಯಲ್ ರತ್ನಾಕರ್ ಡಿ.ಶೆಟ್ಟಿ ಹಾಗೂ ಉಪ್ಪೂರು ವ್ಯ. ಸೇ.ಸ.ಸಂಘದ ಅಧ್ಯಕ್ಷರಾದ ಶ್ರೀ ಎನ್ ರಮೇಶ್ ಶೆಟ್ಟಿಯವರು ರಜತ ಸಂಭ್ರಮದ ಲೋಗೋ ಅನಾವರಣ ಮಾಡಿದರೆ, ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ ರಾಜೇಂದ್ರ ರವರು ಲೋಗೋ ಬಿಡುಗಡೆ ಮಾಡಿದರು.












ಬೆಂಕಿ ಇಲ್ಲದ ಅಡುಗೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಸ್ಫರ್ಧಾ ತಂಡದ ಮಾತೆಯರು ಚಾಲನೆ ನೀಡಿದರು. ಅತಿಥೇಯ ಸಂಘ ಯುವ ವಿಚಾರ ವೇದಿಕೆ, ಶ್ರೀ ಚಾಮುಂಡೇಶ್ವರಿ ಸಂಘ, ಅಭಯ ಸಂಜೀವಿನಿ ಸಂಘ, ದುರ್ಗಾಂಬಿಕಾ ನವೋದಯ ಸಂಘ, ವೀರ ಮಾರುತಿ ಮಹಿಳಾ ಸಂಘ ಹಾಗೂ ಕಾಳಿಕಾಂಬ ಮಹಿಳಾ ಸಂಘ ಒಟ್ಟು ಏಳು ತಂಡಗಳು ಭಾಗವಹಿಸಿ ವಿಧ ವಿಧವಾದ ಬೆಂಕಿ ಇಲ್ಲದ ರುಚಿ ರುಚಿಯಾದ ಖಾಧ್ಯಗಳನ್ನು ತಯಾರಿಸಿದರು. ಲೋಗೋ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ಜಯಪ್ರಕಾಶ್ , ಉಪ್ಪೂರು ವ್ಯ. ಸೇ.ಸ. ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರಾ, ತೀರ್ಪುಗಾರರಾದ ಒಕೇಶನ್ಸ್ ಇವೆಂಟ್ ಮೆನೇಜ್ ಮೆಂಟ್ ಮಾಲೀಕರಾದ ಸುದೀಪ್ ಶೆಟ್ಟಿ, ಮತ್ತು ಶೆಪ್ ರಾಹುಲ್ ಪೂಜಾರಿ ವೆಲ್ಕಂ ಗ್ರೂಪ್ ಮಾಹೆ ಮಣಿಪಾಲ ಉಪಸ್ಥಿತರಿದ್ದರು.. ಕಾರ್ಯಕ್ರಮದಲ್ಲಿ ತುಳುನಾಡು ರಕ್ಷಣಾ ವೇದಿಕೆಯ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಪ್ರ್ಯಾಂಕಿ ಡಿಸೋಜ ಅವರನ್ನು ಅಭಿನಂದಿಸಲಾಯಿತು. ಬೆಂಕಿ ಇಲ್ಲದ ಅಡುಗೆ ಸ್ಪರ್ಧೆಯ ವಿಜೇತ ತಂಡಗಳಾದ ಯುವ ವಿಚಾರ ವೇದಿಕೆ ಪ್ರಥಮ, ಅಭಯ ಸಂಜೀವಿನಿ ಸಂಘ ದ್ವಿತೀಯ, ವೀರ ಮಾರುತಿ ಮಹಿಳಾ ಸಂಘ ತೃತೀಯ ಬಹುಮಾನ ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಾಗೂ ಪ್ರಸ್ತುತಿ, ವಿವರಣೆ, ಸ್ವಚ್ಚತೆ ಹಾಗೂ ಸ್ವಾದ ವಿಭಾಗದಲ್ಲಿ ಯುವ ವಿಚಾರ ವೇದಿಕೆ, ಶ್ರೀ ಚಾಮುಂಡೇಶ್ವರಿ ಸಂಘ ಹಾಗೂ ಕಾಳಿಕಾಂಬ ಮಹಿಳಾ ಸಂಘ ವಿಶೇಷ ಬಹುಮಾನ ಪಡೆದರು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಹಾಗೂ ಕಾರ್ಯಕ್ರಮ ನಿರೂಪಣಾ ಕಾರ್ಯಾಗಾರದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳು, ಸದಸ್ಯರು, ಶಿಬಿರಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮ ಸಂಯೋಜಕರಾದ ಶಕುಂತಳ ಸುಕೇಶ್ ನಿಯಮಗಳನ್ನು ತಿಳಿಸಿದರು. ಜಯಲಕ್ಷ್ಮಿ ಪ್ರಾರ್ಥನೆ ನೆರವೇರಿಸಿದ್ದು ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸದಾಶಿವ ವಂದನಾರ್ಪಣೆ ಗೈದರು, ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಣೆಗೈದರು. ಬೆಂಕಿ ಇಲ್ಲದ ಅಡುಗೆಯಿಂದ ತಯಾರಿಸಿದ ರುಚಿ ಶುಚಿಯ ಬಗೆಬಗೆಯ ವಿವಿಧ ಖಾದ್ಯ ತಿಂಡಿ ತಿನಿಸು ಪಾನೀಯಗಳ ಸ್ವಾದ ನೆರೆದವರೆಲ್ಲರೂ ಆಹ್ಲಾದಿಸಿದರು.

















Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























