ಕಮಲಶಿಲೆಯಲ್ಲಿ ನಾದಾವಧಾನ ವಿಶೇಷ ಕಾರ್ಯಾಗಾರ ಶಿಬಿರ ಸಮಾರೋಪ : ಹಳೇ ಬೇರು ಹೊಸ ಚಿಗುರಿನ ಹಾಗೆ ಯಕ್ಷಗಾನ ಕಲೆ ಬೆಳೆಯಲಿ : ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು

ಕಮಲಶಿಲೆಯಲ್ಲಿ ನಾದಾವಧಾನ ವಿಶೇಷ ಕಾರ್ಯಾಗಾರ ಶಿಬಿರ ಸಮಾರೋಪ : ಹಳೇ ಬೇರು ಹೊಸ ಚಿಗುರಿನ ಹಾಗೆ ಯಕ್ಷಗಾನ ಕಲೆ ಬೆಳೆಯಲಿ : ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು

0Shares

ಉಡುಪಿ : ಹಳೆ ಬೇರು ಹೊಸ ಚಿಗುರು ಎಂಬoತೆ ಯಕ್ಷಗಾನ ಕೂಡಾ ಹೊಸತನವನ್ನು ಬೆಳೆಸಿಕೊಂಡು ತನ್ನ ಸಂಪ್ರಾದಾಯಕ ಚೌಕಟ್ಟಿನಲ್ಲಿಯೇ ಬೆಳೆದರೆ ಅದು ಜನಾನುರಾಗಿಯಾಗುತ್ತದೆ. ಆಧುನಿಕತೆಯ ಹೆಸರಿನಲ್ಲಿ ಪ್ರೇಕ್ಷಕರನ್ನು ರಂಜಿಸುವವ ಧಾವಂತದಲ್ಲಿ ಕಲಾವಿದ ಹೆಜ್ಜೆ ತಪ್ಪಬಾರದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಕೊಡುವುದು ಬೇಕಾಗಿಯೇ ಇಲ್ಲ. ಗುರು ಮೂಲಕವೇ ಕಲೆ ಹಸ್ತಾಂತರವಾದರೆ ಮಾತ್ರ ಅದು ಪೂರ್ಣವಾಗುತ್ತದೆ. ಹಾಗಾಗಿ ಕಲಾವಿದ ತನ್ನ ಅಹಂನ್ನು ಮರೆತು ನಿರಂತರ ಕಲೆಯನ್ನು ಅಭ್ಯಾಸಿಸುವ ಮನೋಭಾವ ಹೊಂದಿದ್ದರೆ ಅದರಿಂದ ಕಲಾವಿದನಿಗೂ, ಕಲೆಗೂ ಲಾಭವಾಗುತ್ತದೆ. ಯಕ್ಷಗಾನ ಹಾದಿ ತಪ್ಪುತ್ತಿದೆ ಎಂಬ ಟೀಕೆಗಳು ಬಾರದಂತಾಗುತ್ತವೆ ನಾನು ಎಂಬುದು ಹೋದರೆ ನಾನು ಬೆಳೆದೇನು ಎಂಬುದನ್ನು ಕಲಾವಿದರು ಅರಿತುಕೊಳ್ಳಬೇಕು ಎಂದು ಅವರು ಮಾರ್ಮಿಕವಾಗಿ ನುಡಿದರು.

ಖ್ಯಾತ ವೈದ್ಯ ಹಾಗೂ ಕಲಾಪೋಷಕ ಡಾ.ಜಗದೀಶ್ ಶೆಟ್ಟಿ ಅವರು ಮಾತನಾಡಿ, ಕಲಾವಿದರು ತಾನು ಕಲಿತದ್ದಾಗಿದೆ ಎಂಬ ಮನೋಭಾವವನ್ನು ಬಿಟ್ಟು, ತನಗಿನ್ನೂ ಕಲಿಯಲಿಕ್ಕಿದೆ ಎಂಬ ಮನೋಭಾವ ತಳೆದರೆ ಅವರಿಗೆ ಇನ್ನಷ್ಟು ಬೆಳೆಯುವ ಅವಕಾಶ ಲಭ್ಯವಾಗುತ್ತದೆ. ಯಕ್ಷಗಾನಕ್ಕೆ ಯಾವುದು ಅಗತ್ಯವೋ ಅದನ್ನು ಮಾತ್ರ ಕಲಿಸುವ ನಾದಾವಧಾನ ಸಂಸ್ಥೆಯ ಕಾರ್ಯ ಮಾದರಿಯಾಗಿದೆ. ಇಂತಹ ಕಾರ್ಯಕ್ರಮಗಳು ಎಲ್ಲೆಡೆಯೂ ನಡೆಯಲಿ ಎಂದು ಹಾರೈಸಿದರು.

ಸಂಪನ್ಮೂಲ ವ್ಯಕ್ತಿ ಅಜಿತ್ ಕಾರಂತ ಬೆಂಗಳೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅನೇಕ ಸಂಘ ಸಂಸ್ಥೆಗಳಿಗೆ ಆಶ್ರಯದಾತರಾಗಿ ಉದಾರವಾದ ಕೊಡುಗೆಗಳನ್ನು ನೀಡಿದ ಡಾ.ತಲ್ಲೂರು ಅವರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಹಾಗೆಯೇ ಈ ಕಾರ್ಯಾಗಾರದ ರೂವಾರಿ ಎನ್.ಜಿ.ಹೆಗಡೆ ಯಲ್ಲಾಪುರ ಅವರು ಆನ್‌ಲೈನ್ ಮೂಲಕ ಯಕ್ಷಗಾನ ತರಬೇತಿ ಕಾರ್ಯಕ್ರಮವನ್ನು ಹುಟ್ಟುಹಾಕಿ ಅನೇಕ ಮಂದಿ ಶಿಷ್ಯರನ್ನು ತಯಾರು ಮಾಡಿ, ಯಕ್ಷಗಾನವನ್ನು ಅಭ್ಯಾಸಿಸುವಂತೆ ಮಾಡುವ ಮೂಲಕ ಒಂದು ಅಕಾಡೆಮಿ ಮಾಡುವ ಕಾರ್ಯವನ್ನು ಮಾಡುತ್ತಿರುವುದು ಅಭಿನಂದನೀಯ ಎಂದರು. ಸಿನೆಮಾ ಸಾಹಿತ್ಯ, ನಾಟಕ ಸಾಹಿತ್ಯ, ವಾಟ್ಸಾಪ್, ಫೇಸ್‌ಬುಕ್ ಸಾಹಿತ್ಯದಿಂದ ಯಕ್ಷಗಾನ ಶ್ರೀಮಂತವಾಗಬೇಕೆ ಆದರೆ ಕಲಾವಿದರಿಗೆ ಇದರ ಪ್ರಜ್ಞೆ ಇಲ್ಲ. ನಾವು ಇಂದು ಯಕ್ಷಗಾನದಲ್ಲಿ ಕೇಳುತ್ತಿರುವುದು, ನೋಡುತ್ತಿರುವುದು ಇಂತಹ ಧೃಶ್ಯಗಳನ್ನೇ, ಇಂತಹ ಮಾತುಗಳನ್ನೇ. ಇಂತಹ ಸಂಕ್ರಮಣ ಸ್ಥಿತಿಯಲ್ಲಿ ನಾವಿರುವಾಗ ಯಕ್ಷಗಾನದ ಮಟ್ಟು, ತಿಟ್ಟುಗಳ ಬಗ್ಗೆ ತಿಳಿಸಿಕೊಡುವುದು ಸಮಾಧಾನ ತಂದಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚುಹೆಚ್ಚಾಗಿ ನಡೆಯುವ ಅಗತ್ಯವಿದೆ ಎಂದರು.

ಯಕ್ಷಗಾನ ಗುರು ಅನಂತಪದ್ಮನಾಭ ಪಾಟಕ್ ಪುಣೆ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರದೀಪ್ ಯಡಿಯಾಳ್, ಕಲಾವಿದ ಸಂಪತ್ ಕನ್ನಂತ, ಬಾಲಚಂದ್ರ ಭಟ್ ಉಪಸ್ಥಿತರಿದ್ದರು.

ಯಕ್ಷಗಾನದ ಅರ್ಥಧಾರಿ ಸತೀಶ್ ಮೂಡುಬಗೆ ಯಕ್ಷಗಾನವನ್ನು ಆನ್‌ಲೈನ್ ಮೂಲಕ ಆರಂಭಿಸಿರುವುದು ಸಂದರ್ಭೋಚಿತ ಕಾರ್ಯ ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಸಂಯೋಜಕ ಎನ್.ಜೆ.ಹೆಗಡೆ ಯಲ್ಲಾಪುರ ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now