ಅಸಹಾಯಕ ವೃದ್ಧನಿಗೆ ಆಶ್ರಯ ನೀಡಿದ ಹೋಂ ಡಾಕ್ಟರ್ ಫೌಂಡೇಷನ್ : ವಿಶು ಶೆಟ್ಟಿ ಅವರಿಂದ ಮಾನವೀಯ ಸ್ಪಂದನೆ

ಅಸಹಾಯಕ ವೃದ್ಧನಿಗೆ ಆಶ್ರಯ ನೀಡಿದ ಹೋಂ ಡಾಕ್ಟರ್ ಫೌಂಡೇಷನ್ : ವಿಶು ಶೆಟ್ಟಿ ಅವರಿಂದ ಮಾನವೀಯ ಸ್ಪಂದನೆ

0Shares

Udupi, 3 January 2025: ವೃದ್ಧಾಪ್ಯದ ದೆಸೆಯಿಂದ ಜೀವನ ನಡೆಸಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧರನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ ಉಡುಪಿಯ ಹೋಮ್ ಡಾಕ್ಟರ್ ಫೌಂಡೇಶನ್ ನಡೆಸುವ ಸ್ವರ್ಗ ಆಶ್ರಮಕೆ ದಾಖಲಿಸಿದ್ದಾರೆ.


ಹಿರಿಯಡ್ಕ ಮೂಲದ ಮಂಜುನಾಥ ಜೋಗಿ (78) ಅವರು ಹಳೆ ಮನೆಯಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇತ್ತೀಚಿಗೆ ವೃದ್ಧಾಪ್ಯದ ದೆಸೆಯಿಂದಾಗಿ ಆಹಾರ ತಯಾರಿಸಲು ಕೂಡಾ ಸಾಧ್ಯವಾಗದೇ ತನಗೆ ಆಶ್ರಯ ಒದಗಿಸುವಂತೆ ವಿಶು ಶೆಟ್ಟಿ ಅವರಲ್ಲಿ ವಿನಂತಿಸಿದ್ದಾರೆ.

ವೃದ್ಧರ ಕೋರಿಕೆಗೆ ಸ್ಪಂದಿಸಿದ ವಿಶು ಶೆಟ್ಟಿ ಅವರು ಹೋಂ ಡಾಕ್ಟರ್ ಫೌಂಡೇಶನ್ ನ ಮುಖ್ಯಸ್ಥರಾದ ಡಾ.ಶಶಿಕಿರಣ ಅವರನ್ನು ಸಂಪರ್ಕಿಸಿ ವೃದ್ಧರಿಗೆ ಆಶಯ ನೀಡುವಂತೆ ಮನವಿ ಮಾಡಿದ್ದಾರೆ .

ಇದಕ್ಕೆ ಸ್ಪಂದಿಸಿದ ಡಾ.ಶಶಿಕಿರಣ್ ಅನುಮತಿ ನೀಡಿದ್ದು , ವೃದ್ಧರನ್ನು ತನ್ನ ವಾಹನದಲ್ಲಿಯೇ ಕರೆದೊಯ್ದು ಕೊಳಲಗಿರಿಯಲ್ಲಿರುವ ಸ್ವರ್ಗ ಆಶ್ರಮಕ್ಕೆ ದಾಖಲಿಸಿದ್ದಾರೆ.

ವೃದ್ಧರ ಸಂಬಂಧಿಕರು ಯಾರಾದರೂ ಇದ್ದರೆ ಆಶ್ರಮವನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಪ್ರಕರಣದ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ನಡೆಸಲಾಗಿದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

ಹಿರಿಯ ವ್ಯಕ್ತಿಯ ನೋವಿಗೆ ಸ್ಪಂದಿಸಿದ ವಿಶು ಶೆಟ್ಟಿ ಹಾಗೂ ಹೋಮ್ ಡಾಕ್ಟರ್ ಫೌಂಡೇಷನ್ ನ ಮಾನವೀಯ ಸೇವೆಗೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now