ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲ) ಶತಮಾನೋತ್ಸವ ಸಂಭ್ರಮಕ್ಕೆ ಆದಿ

ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲ) ಶತಮಾನೋತ್ಸವ ಸಂಭ್ರಮಕ್ಕೆ ಆದಿ

0Shares

ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲ) ಶತಮಾನೋತ್ಸವ ಸಂಭ್ರಮಕ್ಕೆ ಆದಿ
ವಡಲಾ ಶ್ರೀರಾಮನಿಂದ ಸಯಾನ್‌ನ ಶ್ರೀಕೃಷ್ಣನೆಡೆಗೆ ಗೋಕುಲಾಯ್ಟ್‌ಸ್ ನಡಿಗೆ

ಮುಂಬಯಿ, ಜ.೦೧: ರಾಷ್ಟ್ರದ ಆಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ಶತಮಾನದ ಹಿಂದೆ ಸ್ಥಾಪಿಸಲ್ಪಟ್ಟು ಪ್ರಸ್ತುತ ನೂರರಲ್ಲಿನ ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲ) ಸಯಾನ್ ಸಂಸ್ಥೆಯು ಆಚರಿಸುತ್ತಿರುವ ಶತಮಾನೋತ್ಸವ ಸಂಭ್ರಮ ಇಂದಿಲ್ಲಿ ನೂತನ ವರ್ಷದ ಮೊದಲದಿನದಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಮೊದಲ್ಗೊಂಡಿತು.

ಗೋಕುಲದ ನೂರು ವರ್ಷಗಳ ‘ಏಕತೆ, ಸಂಪ್ರದಾಯ, ಸಂಸ್ಕೃತಿ’ ಧ್ಯೇಯದ ಘೋಷಣೆಯೊಂದಿಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಕ್ರೀಡೆ ಇತ್ಯಾದಿಗಳ ಮೇಳೈಕೆಗಳೊಂದಿಗೆ ೨೦೨೫ರ ವರ್ಷವಿಡೀ ಹಮ್ಮಿಕೊಳ್ಳಲಾದ ಶತ ಕಾರ್ಯಕ್ರಮಗಳ ಸಂಕಲ್ಪಕ್ಕೆ ಚಾಲನೆಯನ್ನೀಡಲಾಯಿತು.

ಇಂದಿಲ್ಲಿ ಬುಧವಾರ ಮುಂಜಾನೆ ಮಹಾರಾಷ್ಟ್ರದ ಅಯೋಧ್ಯನಗರ ಪ್ರಸಿದ್ಧಿಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಮುಂಬಯಿ ಇದರ ವಡಲಾದಲ್ಲಿನ ಶ್ರೀರಾಮ ಮಂದಿರದಲ್ಲಿ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮ ದೇವರಿಗೆ ಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸಿ ಮಹಾರಾಷ್ಟ್ರದ ಮಥುರಾ ಪ್ರಸಿದ್ಧಿಯ ಸಯಾನ್‌ನ ಗೋಕುಲದಲ್ಲಿನ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಾನಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಶತಸಂಭ್ರಮಕ್ಕೆ ಚಾಲನೆಯನ್ನೀಡಲಾಯಿತು. ನಡಿಗೆಯುದ್ದಕ್ಕೂ ಭಜನೆ, ಸಂಕೀರ್ತನೆಗಳು ಮೊಳಗಿದ್ದು ಭಕ್ತ ಸಮೂಹ ಸಾಥ್ ನೀಡಿತು.

ಮುಂಜಾನೆ ೬.೦೦ ಗಂಟೆಗೆ ಶ್ರೀರಾಮ ದೇವಳದ ಅರ್ಚಕ ವೇ| ಮೂ| ಗೋವಿಂದ ಆಚಾರ್ಯ ಶ್ರೀರಾಮ ದೇವರಿಗೆ ಪೂಜೆ ನೆರವೇರಿಸಿ ನೀಡಿದ್ದ ಪ್ರಸಾದ ಸ್ವೀಕರಿಸಿದ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ಗೋಕುಲ ಪರಿವಾರವು ಬಳಿಕ ಕಾಲ್ನಡಿಗೆ ಮೂಲಕ ಸಯಾನ್‌ನ ಗೋಕುಲಕ್ಕೆ ಆಗಮಿಸಿದ್ದು ಗೋಕುಲದ ಆರ್ಚಕ ಅಕ್ಷಯ್ ಬಲ್ಲಾಳ್ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now