




ಉಡುಪಿ, 1 ಜನವರಿ 2025: ಭರತ ನಾಟ್ಯ ಲಲಿತ ಕಲೆಗಳ ಮೂಲಕ ಮಕ್ಕಳಲ್ಲಿ ಆಚಾರ ವಿಚಾರ ಸಂಸ್ಕೃತಿಗಳ ಅನಾವರಣ: ವಿದ್ವಾನ್ ಶ್ರೀ ರಾಮಚಂದ್ರ ಕೊಡಂಚ.
ಶ್ರೀ ಭ್ರಾಮರೀ ನಾಟ್ಯಾಲಯ ಅಮ್ಮುಂಜೆ ಉಪ್ಪೂರು ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಡೆದ “ಬಾಲ – ಯುಗ್ಮ ನೃತ್ಯ” ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಕುಂದ ಕೃಪಾ ಮ್ಯೂಸಿಕ್ ಆಂಡ್ ಫೈನ್ ಆರ್ಟ್ಸ್ ಉಡುಪಿ ಇದರ ನೃತ್ಯ ಗುರುಗಳಾದ ವಿದ್ವಾನ್ ಶ್ರೀ ರಾಮಕೃಷ್ಣ ಕೊಡಂಚ ಮಾತನಾಡುತ್ತಾ ತಿಳಿಸಿದರು.

ಸಂತೆಕಟ್ಟೆ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ನಾಗರಾಜ್ ಕುಂದರ್, ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಜ್ಯೋತಿ ಪ್ರಸಾದ್ ಶೆಟ್ಟಿಗಾರ್, ಕಲ್ಯಾಣಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಸತೀಶ್ ನಾಯಕ್, ಕಲ್ಯಾಣಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಕೃಷ್ಣ ದೇವಾಡಿಗ, ವಿದುಷಿ ಪಾವನ ಮತ್ತು ಬ್ರಾಮರಿ ನಾಟ್ಯಾಲಯದಿಂದ ಗೌರವಾರ್ಪಣೆಯ ಸಮ್ಮಾನಕ್ಕೆ ಪಾತ್ರರಾದ ನಾಡುಕಂಡ ಹೆಸರಾಂತ ಪ್ರಸಾದನ ಕಲಾವಿದರಾದ ಸರಸ್ವತಿ ಡ್ರಾಮಾ ಆರ್ಟ್ಸ್ ಇದರ ಮಾಲಕರಾದ ಶ್ರೀ ವಿಜಯ್ ಕಲ್ಯಾಣಪುರ , ಶ್ರೀ ಭ್ರಾಮರಿ ನಾಟ್ಯಾಲಯದ ನೃತ್ಯ ನಿರ್ದೇಶಕರಾದ ಶ್ರೀ ವಿದ್ವಾನ್ ಶ್ರೀ ಕೆ ಭವಾನಿ ಶಂಕರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನಾಟ್ಯಾಲಯದ ಬಾಲಪ್ರತಿಭೆಗಳಿಂದ ಭರತನಾಟ್ಯದ ಎಂಟು ಪ್ರಕಾರಗಳಲ್ಲಿ ಎಂಟು ನೃತ್ಯ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಹಿಮ್ಮೇಳದಲ್ಲಿ ನಟುವಾಂಗ ಹಾಗೂ ನೃತ್ಯ ಸಂಯೋಜನೆಯಲ್ಲಿ ವಿದ್ವಾನ್ ಕೆ ಭವಾನಿ ಶಂಕರ್, ಹಾಡುಗಾರಿಕೆಯಲ್ಲಿ ವೀಕ್ಷಣ್ ಉಡುಪಿ, ಮೃದಂಗದಲ್ಲಿ ಆದಿತ್ಯ ವೆಂಕಟಕೃಷ್ಣ ಉಡುಪಿ, ಕೊಳಲು ವಾದಕರಾಗಿ ಮುರಳಿ ಉಡುಪಿ, ಪಿಟೀಲು ವಾದಕರಾಗಿ ವೈಭವ್ ಪೈ ಮಣಿಪಾಲ್, ರಿದಂ ಪ್ಯಾಡ್ ನಲ್ಲಿ ಸಂತೋಷ್ ಹಾವಂಜೆ ಯವರು ಸಹಕರಿಸಿದರು.


ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಶ್ರೀ ಭವಾನಿ ಶಂಕರ್ ಸ್ವಾಗತಿಸಿ ಶ್ರೀ ಸುಬ್ರಹ್ಮಣ್ಯ ಆಚಾರ್ಯ ಧನ್ಯವಾದ ನೆರವೇರಿಸಿದರು. ಶ್ರೀ ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























