2 ಕಪ್ ಮೈದಾ ಹಿಟ್ಟು/all purpose flour (1/4 ಕೆಜಿ)
2 ಟೇಬಲ್ ಸ್ಪೂನ್ ತುಪ್ಪ ಕಾಯಿಸಿರಿ, ಅದನ್ನು ಮೈದಾ ಹಿಟ್ಟಿಗೆ ಹಾಕಿ ಸ್ಪೂನ್ ನಿಂದ ಮಿಕ್ಸ್ ಮಾಡಿ ತುಪ್ಪ ತಣ್ಣಗಾದ ಮೇಲೆ ಕೈಯಲ್ಲಿ ಸರಿಯಾಗಿ ಮಿಕ್ಸ್ ಮಾಡಿ, ಸಕ್ಕರೆ ಪುಡಿ ಅರ್ಧ ಕಪ್ ಸೇರಿಸಿ, 1 ಮೊಟ್ಟೆ, 1/2 ಕಪ್ ಹಾಲು ಸ್ವಲ್ಪ ಸ್ವಲ್ಪವೇ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಚಪಾತಿ ಹಿಟ್ಟಿಗಿಂತಲೂ ಇನ್ನು ಮೃದುವಾಗಿ ಕಲಿಸಿಕೊಳ್ಳಬೇಕು. (ಫ್ಲೇವರ್ ಗೆ ಬೇಕಾದರೆ ವೆನಿಲ್ಲಾ ಎಸೆನ್ಸ್ ಅಥವಾ ಏಲಕ್ಕಿ ಪುಡಿ ಸೇರಿಸಬಹುದು.)
ಮೃದುವಾದ ಹಿಟ್ಟನ್ನು ತಯಾರಿಸಿ ಮುಚ್ಚಳ ಮುಚ್ಚಿಟ್ಟು 10 ನಿಮಿಷ ಬಿಡಿ.
ಹತ್ತು ನಿಮಿಷದ ನಂತರ ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿ ಇಡಿ ನಂತರ ಫೋರ್ಕ್ ಅಥವಾ ಬಾಚಣಿಗೆ ಸಹಾಯದಿಂದ ಉಂಡೆಯನ್ನು ಹಚ್ಚಿ ಸ್ಪ್ರೆಡ್ ಮಾಡಿ ಅದನ್ನು ರೋಲ್ ಮಾಡಿ ಎರಡು ಬದಿಯನ್ನು ಪ್ರೆಸ್ ಮಾಡಿ ಪಾತ್ರೆಗೆ ಹಾಕಿ ಬಟ್ಟೆಯನ್ನು ಮುಚ್ಚಿ ಇಡಬೇಕು. ಇಲ್ಲವಾದಲ್ಲಿ ಕಲ್ ಕಲ್ ಒಣಗುತ್ತದೆ. ಫ್ರೈ ಮಾಡಲು ಎಣ್ಣೆಯು ತೀರಾ ಬಿಸಿ ಆಗಿರಬಾರದು, ಮೀಡಿಯಂ ಬಿಸಿ ಇರಬೇಕು, ಆವಾಗ ಕಲ್ ಕಲ್‌ನ್ನು ಎಣ್ಣೆಯಲ್ಲಿ ಬಿಡಬೇಕು. ಒಂದು ನಿಮಿಷದ ನಂತರ ಚಮಚದಿಂದ ಮಿಕ್ಸ್ ಮಾಡ್ತಾ ಇರಿ. ಕೆಂಪು ಬಣ್ಣ ಬಂದ ಮೇಲೆ ಎಣ್ಣೆಯಿಂದ ತೆಗಿಯಿರಿ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now