ಉಡುಪಿ, 17 ಡಿಸೆಂಬರ್ 2024:ಉಡುಪಿ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ 14 ಶನಿವಾರ ಶ್ರೀದೇವಿಯ ಸನ್ನಿಧಿಯಲ್ಲಿ ಪ್ರಥಮ ಬಾರಿಗೆ ನೆಡೆದ ಬ್ರಹ್ಮಮಂಡಲ ಸೇವೆ ಸಂಪನ್ನ ಗೊಂಡಿತ್ತು, ದೇವಳದ ನಾಗ ಸನ್ನಿದಿಯಲ್ಲಿ ಸಂಜೆ 6 ರಿಂದ ಸಮೂಹಿಕ ದೇವತಾ ಪ್ರಾರ್ಥನೆ, ಸಂಕಲ್ಪ ಪೂಜೆ ಯೊಂದಿಗೆ ಧಾರ್ಮಿಕ ಪೂಜಾ ವಿಧಾನಗಳನ್ನು ದೇವಳದ ತಂತ್ರಿಗಳಾದ ಕೆ.ಸ್. ಕೃಷ್ಣಮೂರ್ತಿ, ರಮಣ ತಂತ್ರಿ ಗಳು ಮಾರ್ಗದರ್ಶನದಲ್ಲಿ ಜಯರಾಮ ಆಚಾರ್ಯ ನಾಗದೇವರಿಗೆ ಪಂಚಾಮೃತ ಅಭಿಷೇಶಕ , ಮಹಾಪೂಜೆ ನೆಡೆಸಿಕೊಟ್ಟರು.
ದೇವಳದ ಪ್ರಾಂಗಣದಲ್ಲಿ ನಿರ್ಮಿಸಿದ ಹೂವಿನ ಮಂಟಪದಲ್ಲಿ ನಾಗ ಪಾತ್ರಿ ರಾಮಚಂದ್ರ ಕುಂಜಿತ್ತಾಯ ಕಲ್ಲಂಗಳ , ಮುದ್ದೂರು ಕೃಷ್ಣ ಪ್ರಸಾದ ವೈದ್ಯ ಹಾಗೂ ಬಳಗದವರಿಂದ ರಾತ್ರಿ ಬ್ರಹ್ಮಮಂಡಲ ಸೇವೆ ಜರಗಿತು ವೇದಿಕೆಯಲ್ಲಿ ಶತ ಚಂಡಿಕಾಯಾಗ ಸಮಿತಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ , ದೇವಳದ ಮೊಕ್ತೇಸರ ಮುದ್ದಣ್ಣ ಶೆಟ್ಟಿ , ಪವಿತ್ರಪಾಣಿ ಶ್ರೀನಿಚಾವಾಸ್ ಆಚಾರ್ಯ , ಆರ್ಥಿಕಸಮಿತಿ ಸಂಚಾಲಕ ರಮೇಶ್ ಶೆಟ್ಟಿ , ಪ್ರಧಾನ ಕಾರ್ಯದಶಿ , ನಗರ ಸಭೆ ಸದಸ್ಯ ಕೃಷ್ಣರಾವ್ ಕೊಡಂಚ , ನವೀನ್ ಭಂಡಾರಿ , ಕಾರ್ಯದರ್ಶಿ ನಾರಾಯಣ ದಾಸ್ ಉಡುಪ , ಕೋಶಾಧಿಕಾರಿ ಸುದರ್ಶನ್ ಶೇರಿಗಾರ್ , ಅರ್ಚಕ ವರದರಾಜ್ ಭಟ್ , ಮುಕ್ತೇಸರಾದ ರಾಜಶೇಖರ್ ಭಟ್ , ಮೋಹನ್ ಆಚಾರ್ಯ , ದುರ್ಗಾಪ್ರಸಾದ್ , ಭಾರತಿ ಜಯರಾಮ ಆಚಾರ್ , ಪ್ರೇಮನಾಥ್ , ಸುರೇಶ ಶೆಟ್ಟಿ , ಸುಭಾಸ್ ಭಂಡಾರಿ , ಅರುಣ್ ಶೆಟ್ಟಿಗಾರ್ , ಶಾಂತ ಶೇರಿಗಾರ್ , ಪ್ರವೀಣ್ ಕುಮಾರ್ , ಹರೀಶ್ ಸುವರ್ಣ , , ಕಿರಣ್ ಕುಮಾರ್ ಬೈಲೂರು ,ಸುಬ್ರಹ್ಮಣ್ಯ ತಂತ್ರಿ ಹಾಗೂ ವಿವಿಧ ಸಮಿತಿಯ ಪಧಾದಿಕಾರಿಗಳು ಉಪಸ್ಥರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now