ಮಣಿಪಾಲ: ‘’ಶಿಕ್ಷಣ ಎನ್ನುವುದು ಪ್ರತಿಯೊಬ್ಬರ ಸ್ವತ್ತು” – ಡಾ. ಎಚ್. ಎಸ್. ಬಲ್ಲಾಳ್

ಮಣಿಪಾಲ: ‘’ಶಿಕ್ಷಣ ಎನ್ನುವುದು ಪ್ರತಿಯೊಬ್ಬರ ಸ್ವತ್ತು” – ಡಾ. ಎಚ್. ಎಸ್. ಬಲ್ಲಾಳ್

0Shares

ಇಂದಿನ ಯುವಜನರು ನಮ್ಮ ದೇಶದ ಉತ್ತಮ ಪ್ರಜೆಗಳಾಗುವ ನಿಟ್ಟಿನಲ್ಲಿ ನಾವು ಅವರಿಗೆ ಉತ್ತಮವಾದ ಶಿಕ್ಷಣವನ್ನು ಒದಗಿಸಬೇಕಾಗಿದೆ”- ಡಾ. ಎಚ್ ಎಸ್ ಬಲ್ಲಾಳ್

‘’ಶಿಕ್ಷಣ ಎನ್ನುವುದು ಪ್ರತಿಯೊಬ್ಬರ ಸ್ವತ್ತು ,ಇಂತಹ ಉತ್ತಮ ಶಿಕ್ಷಣ ದೇಶದ ಹಳ್ಳಿ ಹಳ್ಳಿಯ ಮಕ್ಕಳಿಗೂ ದೊರಕುವಂತಾಗಬೇಕು. ನಮ್ಮ ದೇಶದ ಯಾವ ಮಕ್ಕಳೂ ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು’’ ಎಂದು ಮಣಿಪಾಲದ ಮಾಧವ ಕೃಪಾ ಶಾಲೆಯಲ್ಲಿ ನಡೆದ ‘ಸಂಸ್ಮರಣ-ಹಳೆವಿದ್ಯಾರ್ಥಿಗಳ ಸಮ್ಮಿಲನ ’ ಎನ್ನುವ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ಮಾಹೆಯ ಉಪಕುಲಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್ ಅವರು ಹೇಳಿದರು.

ಸಮಾರಂಭದ ಮುಖ್ಯ ಅತಿಥಿಗಳಾದ ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಉಪ ಕುಲಪತಿಗಳಾದ ಡಾ. ನಾರಾಯಣ್ ಸಭಾಹಿತ್ ಅವರು ಮಾತನಾಡುತ್ತಾ “ಹಳೆ ವಿದ್ಯಾರ್ಥಿಗಳು ಶಾಲೆಯ ಅತಿದೊಡ್ಡ ಆಸ್ತಿ. ಶಾಲೆಯ ಕೀರ್ತಿಯನ್ನು ಎತ್ತರಕ್ಕೇರಿಸುವಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಹಿರಿದಾಗಿದೆ “ ಎಂದು ಹೇಳಿದರು. ಶಾಲಾ ಸಂಚಾಲಕಿ ಶ್ರೀಮತಿ ರಾಧಿಕಾ ಪೈ ಅವರು ಇತ್ತೀಚಿನ ವರ್ಷಗಳಲ್ಲಿ ಶಾಲೆ ಬೆಳೆದು ಬಂದ ಹಾದಿಯ ಕುರಿತು ಮಾಹಿತಿ ನೀಡಿದರು. ಶಾಲಾ ಹಳೆವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಾಯಿಕೇತನ್ ತಾವು ಶಾಲೆಯಲ್ಲಿ ಕಳೆದ ಸವಿದಿನಗಳನ್ನು ಮೆಲುಕು ಹಾಕಿದರು.

ಶಾಲಾ ಪ್ರಾಂಶುಪಾಲೆ ಶ್ರೀಮತಿ ಸ್ವಾತಿ ಕುಲಕರ್ಣಿ ಅವರು ಸ್ವಾಗತಿಸಿದರು. ಮಣಿಪಾಲದ ಎ ಜಿ ಇ ಸಮೂಹದ ಕಾರ್ಯದರ್ಶಿಗಳಾದ ಸಿಎ ಬಿ. ಪಿ. ವರದರಾಯ ಪೈ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಾಲಾ ಉಪ ಪ್ರಾಂಶುಪಾಲರುಗಳಾದ ಶ್ರೀಮತಿ ಶಕಿಲಾಕ್ಷಿ ಕೃಷ್ಣ, ಶ್ರೀಮತಿ ಜ್ಯೋತಿ ಸಂತೋಷ್ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಶಾ ನಾಯಕ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಕೃಷ್ಣ ಭಂಡಾರಿ, ಕಾರ್ಯದರ್ಶಿ ಅನುಷ ಅವರು ಉಪಸ್ಥಿತರಿದ್ದರು.

ಶಾಲಾ ಶಿಕ್ಷಕಿ ಶ್ರೀಮತಿ ಗ್ರೇಸ್ ಅವರು ಕಾರ್ಯಕ್ರಮ ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now