ಉಪ್ಪೂರು ಒಂದನೇ ವಾರ್ಡ್ ಕೊಳಲಗಿರಿಯಲ್ಲಿ ರಂಗೇರಿದ ಗೊಬ್ಬುದ ಗಮ್ಮತ್ತ್

ಉಪ್ಪೂರು ಒಂದನೇ ವಾರ್ಡ್ ಕೊಳಲಗಿರಿಯಲ್ಲಿ ರಂಗೇರಿದ ಗೊಬ್ಬುದ ಗಮ್ಮತ್ತ್

0Shares

ಕೊಳಲಗಿರಿ,04 ಡಿಸೆಂಬರ್ 2024: ಉಪ್ಪೂರು ಗ್ರಾಮದ ಒಂದನೇ ವಾರ್ಡಿನ ಕೊಳಲಗಿರಿಯಲ್ಲಿ ಸಮಾನ ಮನಸ್ಕರು ಜೊತೆಗೂಡಿಕೊಂಡು ಅಶ್ವಿನ್ ರೋಚ್ ಸಂಚಾಲಕತ್ವದಲ್ಲಿ ಒಂದನೇ ವಾರ್ಡ್ ಅಭಿವೃದ್ಧಿ ಸಮಿತಿ ರೂಪುಗೊಂಡು.. ಈ ವರ್ಷ ಮೂರನೇ ವರ್ಷದ “ಗೊಬ್ಬುದ ಗಮ್ಮತ್ತ್” ಡಿಸೆಂಬರ್ 1 ಆದಿತ್ಯವಾರ 2024 ಸೈಂಟ್ ಕ್ಷೇವಿಯರ್ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಅನಾವರಣಗೊಂಡಿತು.

ಸಾಧ್ಯವಾದಷ್ಟು ವಾರ್ಡಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಆಶಕ್ತರಿಗೆ ಸಹಾಯ ಮಾಡುತ್ತಾ , ಶೈಕ್ಷಣಿಕ, ವೈದ್ಯಕೀಯ, ಸಾಮಾಜಿಕ, ಹಾಗೂ ಕ್ರೀಡಾ ಪ್ರೋತ್ಸಾಹ ಮತ್ತು ವಾರ್ಡಿನ ಯುವಕ ಯುವತಿಯರನ್ನು ಒಂದುಗೂಡಿಸಿ, ಐಕ್ಯತೆಯನ್ನು ಪ್ರದರ್ಶಿಸುವ ಗೊಬ್ಬುದ ಗಮ್ಮತ್ತ್, ಬೆಳಿಗ್ಗೆ ಉಪ್ಪೂರು ವ್ಯವಸಾಯ ಸೇವಾ ಸಂಘದ ಅಧ್ಯಕ್ಷರಾದ ಎನ್.ರಮೇಶ್ ಶೆಟ್ಟಿಯವರು ಕ್ರೀಡಾಂಗಣವನ್ನು ಉದ್ಘಾಟನೆಗೊಳಿಸಿದರು. ಅವಿನಾಶ್ ರೋಚ್ ಕಲಾತ್ಮಕತೆಯಲ್ಲಿ ಮೂಡಿ ಬಂದ ಕ್ರೀಡಾಂಗಣ ಆಟಗಾರರ ಮೆಚ್ಚುಗೆಗೆ ಪಾತ್ರವಾಯಿತು. ಅತಿಥಿಗಳಾದ ಮಾಧವ ಪಾಣ ಹಾಗೂ ಸದಾನಂದ ನಾಯಕ್ ಅವರು ವಾರ್ಡಿನ ನಾಲ್ಕು ಕ್ರಿಕೆಟ್ ತಂಡಗಳಾದ ರಾಯಲ್ ಚಾಲೆಂಜರ್ಸ್, ಯುನೈಟೆಡ್ ಮುಟ್ಟಿಕಲ್, ಅವೆಂಜರ್ಸ್ ಪರಾರಿ, ಹಾಗೂ ಅಮ್ಮುಂಜೆ ವಾರಿಯರ್ಸ ತಂಡದ ಸಂದೀಪ್ ಶೆಟ್ಟಿ, ಮೈಕಲ್ ಮಸ್ಕರೇನಸ್, ಅಜಯ್ ಹಾಗೂ ಸಂದೀಪ್ ನಾಯಕ್ ಅವರಿಗೆ ಗುರುತಿನ ಸಂಕೇತವಾದ ಕ್ಯಾಪ್ ನೀಡಿ ಗೌರವಿಸಿದರು.

ವೇದಿಕೆಯಲ್ಲಿ ಉದ್ಯಮಿಗಳಾದ ರೋಯಲ್ ರತ್ನಾಕರ್ ಶೆಟ್ಟಿ ದೀಪ ಬೆಳಗಿಸಿದರು, ರಮೇಶ್ ಕರ್ಕೆರ ಟ್ರೋಫಿ ಅನಾವರಣಗೊಳಿಸಿದರು, ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾ ವೀಕ್ಷಕರಾದ ಫ್ರ್ಯಾಂಕಿ ಡಿಸೋಜ ಟ್ರೋಫಿ ಹಸ್ತಾಂತರಿಸಿದರು. ರತ್ನಾಕರ್ ಮೊಗವೀರ ನಿರ್ಣಾಯಕರಿಗೆ ಕ್ಯಾಪ್ ನೀಡುವುದರ ಮುಖೇನ ಜವಬ್ದಾರಿ ನೀಡಿದರು.


ಸಂಜೆಯ ಸಮಾರೋಪ ಸಮಾರಂಭದಲ್ಲಿ ಕೊಳಲಗಿರಿ ಚರ್ಚಿನ ಧರ್ಮಗುರುಗಳಾದ ಫಾ.ಜೋಸೆಫ್ ಮಚಾದೋ, ಅಮ್ಮುಂಜೆ ಚರ್ಚಿನ ಧರ್ಮಗುರುಳಾದ ಫಾ.ಲಾರೆನ್ಸ್‌ ಡಿಸೋಜ, ಶಾಸಕರಾದ ಯಶ್ಪಾಲ್ ಸುವರ್ಣ, ಉಡುಪಿ ನಗರಾಭಿವೃದ್ಧಿ ಅಧ್ಯಕ್ಷರಾದ ದಿನಕರ್ ಹೇರೂರು, ಸುನಿಲ್ ಶೆಟ್ಟಿ ಉಪಸ್ಥಿತರಿದ್ದು, ಸುದೀರ್ಘವಾಗಿ ಅಮ್ಮುಂಜೆ ಚರ್ಚಿನಲ್ಲಿ ಸೇವೆಸಲ್ಲಿಸಿ ವರ್ಗಾವಣೆಗೊಂಡ ಫಾದರ್.ಡೇವಿಡ್ ಕ್ರಾಸ್ತಾ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ದಿನಕರ್ ಹೇರೂರು, ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾ ವೀಕ್ಷಕರು ಆಪತ್ಭಾಂಧವ ಫ್ರ್ಯಾಂಕಿ ಡಿಸೋಜ ಹಾಗೂ ಕಾರಂತ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಲೆನೇಟ್ ಟೀಚರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.. ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿಸಿದ ಶಾಸಕರಾದ ಯಶ್ಪಾಲ್ ಸುವರ್ಣ ಅವರು ಮಾತನಾಡುತ್ತಾ.. ವಾರ್ಡಿನ ಈ ಐಕ್ಯತೆಯ ಅಭಿವೃದ್ಧಿ ಕಾರ್ಯಕ್ರಮಗಳು ಎಲ್ಲಾ ವಾರ್ಡಿಗೂ ಮಾದರಿ ಎಂದು ತಿಳಿಸಿದರು. ಪೂಜ್ಯ ಧರ್ಮಗುರುಗಳು ಎಲ್ಲರನ್ನೂ ಹರಿಸಿದರು.. ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಮಾತನಾಡುತ್ತಾ ಒಂದನೇ ವಾರ್ಡ್ ಅಭಿವೃದ್ಧಿ ಸಮಿತಿಯ ಮುಂದಿನ ಪ್ರಾಜೆಕ್ಟ್ ಉಪ್ಪೂರು ಗ್ರಾಮದ ಅಶಕ್ತರೋರ್ವರಿಗೆ ಮನೆ ನಿರ್ಮಾಣದಲ್ಲಿ ನಾನು ಕೈ ಜೋಡಿಸುತ್ತೇನೆ ಎಂದು ಹೇಳಿದರು.


ಸಂಚಾಲಕರಾದ ಆಶ್ವಿನ್ ರೋಚ್ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿದರು.. ಸಂದೀಪ್ ಶೆಟ್ಟಿಯವರು ಒಂದನೇ ವಾರ್ಡ್ ಅಭಿವೃದ್ಧಿ ಸಮಿತಿಯವರು ನಡೆಸಿದ ಅಭಿವೃದ್ಧಿ ಕಾರ್ಯದ ಸಂಪೂರ್ಣ ಚಿತ್ರಣ ನೀಡಿದರು.. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.

Oplus_131072
Oplus_131072
Oplus_131072

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now