ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಕಳೆದ 36 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನ.30ರಂದು ಸೇವಾ ನಿವೃತ್ತಿಗೊಂಡ ಐವಿ ಗ್ರೆಟ್ಟಾ ಪಾಸ್‌ರವರಿಗೆ ಸಂಸ್ಥೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಲಾರೆನ್ಸ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಜೀವನ ಒಂದು ಪಯಣ. ತಾಯಿಯ ಗರ್ಭದಿಂದ ಪ್ರಕೃತಿ ಗರ್ಭಕ್ಕೆ ಬಂದ ಮೇಲೆ ಬೇರೇ ಬೇರೆ ರೀತಿಯ ಜವಾಬ್ದಾರಿಗಳು ಇರುತ್ತದೆ. ಎಲ್ಲವನ್ನೂ ನಾವು ಒಳ್ಳೆಯ ರೀತಿಯಲ್ಲಿ ಸ್ವೀಕರಿಸಿದರೆ ನಮ್ಮ ಜೀವನಕ್ಕೆ ಅರ್ಥ ಇದೆ. ನಮ್ಮ ಜೀವನದಲ್ಲಿ ಹಲವರ ಸಹಾಯ ಇರುತ್ತದೆ. ಅವರಿಗೆ ಚಿರಋಣಿಯಾಗಿರಬೇಕು. ನಿವೃತ್ತಿ ಸಮಯದಲ್ಲಿ ಹಲವು ಭಾವನೆಗಳು ಇರುತ್ತದೆ ಎಂದರು. ಈ ಸಂಸ್ಥೆಯು ೭೫ ವರ್ಷಗಳನ್ನು ಪೂರೈಸಿ ಸಂಭ್ರಮದಲ್ಲಿದೆ. ಇದೇ ಸಂದರ್ಭದಲ್ಲಿ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಐವಿ ಗ್ರೆಟ್ಟಾ ಪಾಸ್ ನಿವೃತ್ತಿ ಹೊಂದುತ್ತಿದ್ದಾರೆ. ಅವರು ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ವಿವಿಧ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಅವರ ಮುಂದಿನ ಜೀವನ ನೆಮ್ಮದಿಯಾಗಿರಲಿ ಅವರ ಕುಟುಂಬಕ್ಕೆ ಬೇಕಾದ ವರಗಳನ್ನು ದೇವರು ಕೊಡಲಿ ಎಂದು ಹಾರೈಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now