ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 31

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 31

0Shares

ಮಲ್ಲಿಗೆಯ ಜೊತೆ ಇದ್ದಿದ್ದರಿಂದ ದಾರವು ಕೂಡ ದೇವರ ಮುಡಿಗೇರಿತ್ತು

ಆ ಗುಲಾಬಿ ಗಿಡದ ಮುಳ್ಳು ಅಂದು ಬಾರೀ ಚಿಂತೆ ಯಲ್ಲಿತ್ತು ..ಜನ ಗುಲಾಬಿ ಯನ್ನು ಇಷ್ಟ ಪಡುತಿದ್ದರು,ಫೋಟೋ ತೆಗೆಯುತಿದ್ದರು,ತಲೆಯಲ್ಲಿಡುತಿದ್ದರು ಆದರೆ ಜೊತೆಯಲ್ಲೇ ಇರುವ ಮುಳ್ಳನ್ನು ತಿರಸ್ಕರಿಸುತಿದ್ದರು…

ಇದರಿಂದ ಆ ಮುಳ್ಳಿಗೆ ಗುಲಾಬಿಯನ್ನು ಕಂಡರೆ ಸಿಟ್ಟಿತ್ತು ಅಸೂಹೆ ಇತ್ತು .ಸಮಯ ಸಿಕ್ಕಾಗೆಲ್ಲ ಅದರ ಎಸಳುಗಳನ್ನು ಚುಚ್ಚಿ ಹರಿದು ಹಾಕುತಿತ್ತು…

ಅಲ್ಲೇ ಬೇಲಿ ಬದಿ ಇದ್ದ ಪಾಪಾಸು ಕಳ್ಳಿಗಿಡ( ಮುಳ್ಳಿನ ಗಿಡ ),ಗುಲಾಬಿ ಯಾ ಮುಳ್ಳು ಗಳಿಗೆ ಗುಲಾಬಿ ಬಗ್ಗೆ ಮತ್ತಷ್ಟು ಚಾಡಿ ಮಾತು ಹೇಳಿ ಕೊಡುತಿತ್ತು…ಇದರಿಂದ
ಗುಲಾಬಿ ಮುಳ್ಳು ಮತ್ತಷ್ಟು ಪ್ರೇರಿತರಾಗಿತ್ತು …

ಕಳ್ಳಿ ಗಿಡ ದಂತೆ ಸ್ವಾತಂತ್ರ್ಯ ವಾಗಿ ಇರಬೇಕಿತ್ತು ಎಂದು ಅಸೆ ಪಟ್ಟಿತ್ತು..ಕೂಡಾ😔.

ಆದರೆ ಅಂದು ಒಂದು ಆಶ್ಚರ್ಯ ನಡೆದಿತ್ತು🥱 ಮನೆಯ ಯಜಮಾನ 2 ಆಳು ಗಳೊಂದಿಗೆ ಕತ್ತಿ ಹಿಡಿದು ಬಂದಿದ್ದ, ಏಕ ಏಕಿ ಎಲ್ಲ ಮುಳ್ಳು,ಕಳ್ಳಿ ಗಿಡ ಗಳನ್ನು ಕತ್ತಿಯಿಂದ ಸವರಿ ಕತ್ತರಿಸಿದ್ದ..ಅಂದು ಚಾಡಿ ಹೇಳಿದ ಇದೇ ಗಿಡ ಗಳು ತಮ್ಮ ಜೀವ ಕಳೆದು ಕೊಂಡಿತ್ತು .ಇನ್ನು ಅರ್ಧ ಜೀವ ಇರುವಾಗಲೇ ಬೆಂಕಿ ಹಾಕಿ ಸುಡಲಾಯಿತು. ಹೀಗೆ ಬೆಂಕಿಯಲ್ಲಿ ಜೀವಂತ ಸುಡುವಾಗ ಕಳ್ಳಿಗಿಡ ಅಸಾಧ್ಯ ನೋವಿನಿಂದ ಚೀರುತಿತ್ತು.😔
ಯಜಮಾನ ಹೇಳುತಿದ್ದುದು ಕೇಳಿಸಿತ್ತು ಗುಲಾಬಿ ಮುಳ್ಳು ,ಈ ದರಿದ್ರ ಮುಳ್ಳಿನ ಗಿಡಗಳು ಯಾವ ಪ್ರಯೋಜನವೂ ಇಲ್ಲದ್ದು ಹೀಗೆ ಬಿಟ್ಟರೆ ಇಡೀ ಜಾಗವನ್ನು ಆಕ್ರಮಿಸಿ ಬಿಡುವುದು ಇವತ್ತು ಅವುಗಳ ಸಮೂಲ ನಿರ್ಮೂಲ ಆಗಬೇಕಿದೆ ಎನ್ನುತಿದ್ದ..ಕೇಳಿಸುತ್ತಿದ್ದ ಗುಲಾಬಿ ಮುಳ್ಳಿಗೆ ಒಳಗೋಳಗೇ ಹೆದರಿಕೆ ಆಗುತಿತ್ತು ಅದೂ ತನ್ನನ್ನು ಮುಳ್ಳು ಎಂದೇ ತಿಳಿದಿತ್ತು , ಹೀಗೆ ಜೀವಂತ ಸುಟ್ಟು ಹಾಕುತ್ತಾರೆ ಎಂದು ಹೆದರಿ ಕಣ್ಣು ಮುಚ್ಚಿ ಬೆಂಕಿಯ ಕೆನ್ನಾಲಿಗೆ ನನ್ನ ಸುಡುವುದು ಗ್ಯಾರಂಟಿ ಎಂದು ಕೊಂಡಿತು ..ಕಣ್ಣು ತೆಗೆಯುವ ಧೈರ್ಯ ಇರಲಿಲ್ಲ ಅದಕ್ಕೆ

ಅಷ್ಟರಲ್ಲಿ ಯಾರೊ ತಣ್ಣೀರ ಸಿಂಚನ ಗೈಯ್ಯುತಿದ್ದರು ..ಬೆಂಕಿಯ ಬಿಸಿ ತನ್ನನ್ನು ಸುಡಬಹುದೆಂದು ಕೊಂಡ ಮುಳ್ಳಿಗೆ ವಿರುದ್ಧ ವಾದ ತಂಪು ಸ್ಪರ್ಶ ಆಶ್ಚರ್ಯ ತಂದಿತ್ತು ….

ಆಶ್ಚರ್ಯ ದಿಂದ ಕಣ್ತೆರೆದು ನೋಡಿದರೆ ಅದೇ ಯಜಮಾನ ಗುಲಾಬಿ ಗಿಡಕ್ಕೆ ತನ್ನ ಮಗನೊಂದಿಗೆ ನೀರೆರಿಯುತಿದ್ದ ..

ಚಾಡಿ ಮಾತುಗಳನ್ನು ಹೇಳಿ ಕೊಡುತಿದ್ದ ಪಾಪಾಸು ಕಳ್ಳಿ ಬೆಂಕಿಯಲ್ಲಿ ಸುಟ್ಟು ಕಾರಕಲಾಗಿದ್ದರೆ,ತಾನು ಅಸೂಹೆ ಪಟ್ಟು ಕೊಳ್ಳು ತಿದ್ದ, ನನ್ನ ಮುಳ್ಳು ಗಳಿಂದ ಆ ಹೂವಿನ ಎಸಳನ್ನು ಅಸೂಹೆ ಯಿಂದ ಚುಚ್ಚಿ ದ್ದ ಅದೇ ಗುಲಾಬಿ ಹೂ ಇಂದು ನನ್ನ ಜೀವ ಉಳಿಸಿತ್ತು ,ಮುಳ್ಳನ್ನು ನೋಡಿ ಹೂ ನಗುತಿತ್ತು …ಇಂದು ಮುಳ್ಳು ತನ್ನ ಅಸ್ತಿತ್ವ ಉಳಿಸಿ ಕೊಂಡಿರಲು ಅದೇ ಗುಲಾಬಿ ಕಾರಣ ವಾಗಿತ್ತು ನಾಚಿಕೆ ಇಂದ ತಲೆ ತಗ್ಗಿಸಿ ನಿಂತಿತ್ತು ಮುಳ್ಳು 😔😔😔😔😔

ನಮ್ಮ ಸಮಾಜ ದಲ್ಲೂ ಅದೆಷ್ಟೋ ಬಾರಿ ನಾವು ಬೇರೊಬ್ಬರ ಚಾಡಿ ಮಾತು ಕೇಳಿ ಇನ್ನೊಬ್ಬರ ಬಗ್ಗೆ ಅಸಹ್ಯ ಪಟ್ಟಿಕೊಂಡಿರಬಹುದು..ಬಿಳಿ ಬಣ್ಣ ದವಳೊಟ್ಟಿಗೆ ಹೋಗುತ್ತಾ ಮನಸ್ಸೊಳಗೆ ಕುದಿಯುವ ಕಪ್ಪು ಬಣ್ಣದವಳು,ಉದ್ದ ಹೆಚ್ಚಿರುವವನ ನೋಡಿ ಒಳಗೊಳಗೇ ಉರಿಯುವ ಕುಳ್ಳ ,ಶ್ರೀಮಂತ ನ ನೋಡಿ ಕುದಿಯುತ್ತಿರುವ ಬಡವ ನೇ ಇರಬಹುದು ..ಹೊಟ್ಟೆ ಕಿಚ್ಚು ಅಸೂಹೆ ಪಡುವ ಮೊದಲು ಎರಡೆರಡು ಬಾರಿ ಯೋಚಿಸಿ ಅದೆಷ್ಟೋ ಬಾರಿ ಅವನಿರುವುದರಿಂದಲೇ ನಿಮ್ಮ ಜೀವನ ನಡೆಯುತ್ತಿರಬಹುದು,ಹಾಗಾಗಿ ಅವರಿವರ ಮಾತು ಕೇಳುವ ಮುನ್ನ ಮತ್ತೆ ಮತ್ತೆ ಯೋಚಿಸಿ ..

ಮಲ್ಲಿಗೆಯ ಜೊತೆ ಇದ್ದಿದ್ದರಿಂದ
ದಾರವು ಕೂಡಾ ದೇವರ ಮುಡಿಗೇರಿತ್ತು …..

🙏🙏🙏🙏🙏🙏
🔴🔴🔴🔴🔴🔴


ಡಾ.ಶಶಿಕಿರಣ್ ಶೆಟ್ಟಿ,ಉಡುಪಿ
ಹೋಂ ಡಾಕ್ಟರ್ ಫೌಂಡೇಶನ್
9945130630(ವಾಟ್ಸಪ್)
ನಿಮ್ಮ ಅನಿಸಿಕೆ ಗಳು ನೇರವಾಗಿ ನನಗೆ ವಾಟ್ಸಪ್ ಮಾಡಿ ತಿಳಿಸಿ
🔴🔴🔴🔴🔴🔴

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now