ರೀ…SORRY..
ತಂದೆಯ ಫೋನ್ ಬಂದಿತ್ತು ಮಗಳು ಡಾ.ಸುನೀತಾ ರಾವ್ ನಿರೀಕ್ಷಿಸಿದ್ದಳು..ಕಾಲ್ ಅನ್ನು ತಂದೆ ಹೇಳಿದ್ದಿಷ್ಟೇ “ಮಗ ಅಮ್ಮ ನಿಗೆ ಸೀರಿಯಸ್ ಆಗಿದೆ ಡಯಾಲಿಸಿಸ್ ಆಗುತ್ತಿದೆ ನನಗೆ ಕಷ್ಟ ವಾಗುತ್ತಿದೆ ಇನ್ನೆಷ್ಟು ದಿನ ಎಂದು ಗೊತ್ತಿಲ್ಲ ಮನೆಗೆ ಬಂದು ಬಿಡು ಅಮ್ಮನ ಚಾಕರಿ ಮಾಡಲು ಎಂದ ಲೌಡ್ ಸ್ಪೀಕರ್ ಆನ್ ಇಟ್ಟು ..
“ಅಪ್ಪ ಈಗ ಏಪ್ರಿಲ್ ಸಮಯ ಮುನ್ನಿಗೆ ಎಕ್ಸಾಮ್ ಹಾಗೆ ಅಣ್ಣು ಗೂ ಎಕ್ಸಾಮ್ ನಡೀತಾ ಇದೆ ಇನ್ನೆರಡು ತಿಂಗಳು ಬರಲು ಸಾಧ್ಯವೇ ಇಲ್ಲ ,ನೀನೆ ಅಡ್ಜಸ್ಟ್ ಮಾಡಿಕೋ ಮತ್ತೆ ನೋಡೋಣ” ಎಂದಿದ್ದಳು ಡಾಕ್ಟರ್ ಮಗಳು😔 ..
..ನನ್ನ ಮಗಳು ,ನನ್ನ ಮಗಳು ಎಂದು ಕೊಂಡಾಡು ತಿದ್ದವಳಿಗೆ ಮಗಳ ಹಣೆಬರಹ ಗೊತ್ತಾಗಲಿ ಎಂದೇ ಲೌಡ್ ಸ್ಪೀಕರ್ ಆನ್ ಮಾಡಿ ಮಾತಾಡಿದ್ದ😔 ಗಂಡ * …
*ಸಿಟ್ಟಲ್ಲಿ ಫೋನ್ ಇಟ್ಟ.. ಹೆಂಡತಿಯಲ್ಲಿ ಹೇಳಿದ ಲೇ ಆಕೆ ಬರೋಲ್ವನಂತೆ ಏಪ್ರಿಲ್ ಅಂತೇ ಎಕ್ಸಾಮ್ ಅಂತೇ ಮಕ್ಕಳಿಗೆ 😔ನೆನಪಿದೆಯಾ ನಿನಗೆ 40 ವರ್ಷದ ಹಿಂದೆ ನೀನಾಗ ಬಿ ಎಡ್ ಎಕ್ಸಾಮ್ ಬರೆಯುತಿದ್ದಿ ಕೊನೆಯ ವರ್ಷ ಪ್ರೇಗ್ನನ್ಟ್ ಆಗಿದ್ದಿ ಡೆಲಿವರಿ ಡೇಟ್ ಏಪ್ರಿಲ್ ಅಲ್ಲಿ ನಿನ್ ಎಕ್ಸಾಮ್ ಟೈಮ್ ನಲ್ಲಿ ಬರೋದ್ರಲ್ಲಿತ್ತು ಅದು ನಿನ್ನ ಬಹಳ ವರ್ಷದ ಕನಸಾಗಿತ್ತು ..ನಾನು ಹೇಳಿದ್ದೆ ಅಬಾರ್ಶನ್ ಮಾಡಿಸಿ ತೆಗೆಸಿ ಬಿಡು ಎಂದು ಆದರೆ ನೀನು ಆ ಪಿಂಡ ವನ್ನು ಉಳಿಸಿದ್ದೆ ನಿನ್ನ ಕನಸನ್ನೇ ತ್ಯಾಗ ಮಾಡಿದ್ದೆ ಅವಳಿಗಾಗಿ,ನಾ ಕೇಳಿದರೆ ಆಕೆ ನನ್ನ ಮಗಳು ನನ್ನ ಕೊನೆಗಾಲದಲ್ಲಿ ನೋಡುವವಳು 😔ಎಂದಿದ್ದೆ ಇಂದು ನೋಡು ಅವಳು *ಎಕ್ಸಾಮ್ ಗಾಗಿ ಇಂದು ನಿನ್ನನ್ನೇ ಬಿಟ್ಟಿದ್ದಾಳೆ..ಅಂದೇ ನೀನು ನನ್ನ ಮಾತು ಕೇಳಿದ್ದರೆ ಇಂದು ನಾವು ಈ ರೀತಿ ಚಿಂತೆ ಮಾಡ ಬೇಕಿರಲಿಲ್ಲ ಎಂದಾಗ ...
ಹೆಂಡತಿ
ಗಂಡನ ಭುಜ ಒತ್ತಿ, ಉಕ್ಕಿ ಬರುತಿದ್ದ ಕಣ್ಣೀರಿನೊಂದಿಗೆ ಹೇಳಿದ್ದು ಒಂದೇ ಮಾತು ….
“ರೀ….SORRY..😔.
😔😔😔
ಹೌದು ಇಂತಹ ಅದೆಷ್ಟೋ ಮಕ್ಕಳಿದ್ದಾರೆ ನಮ್ಮದೇ ಸಮಾಜದಲ್ಲಿ ,ತಂದೆ ತಾಯಿಯರ ವೃದ್ಧಾಶ್ರಮಕ್ಕೆ ಹಾಕಿ ಕೊನೆಯ ಗಳಿಗೆ ಯಲ್ಲಿ ಆಶ್ರಮದಿಂದ ಫೋನ್ ಬಂದಾಗಲೂ ಗಾಬರಿ ಬೇಡ ಜೀವ ಹೋದ ಮೇಲೆ ಕಾಲ್ ಮಾಡಿ ಎನ್ನುವಂತಹ ಮಕ್ಕಳು,
ಇಂತಹ ಮಕ್ಕಳು ಹುಟ್ಟಿಲ್ಲದಿದ್ದರೇ ಖಂಡಿತ ಆ ದಂಪತಿಗಳು ಪುಣ್ಯಾತ್ಮರು ಎನ್ನಿಸಿ ಕೊಳ್ಳುತಿದ್ದರು 😔😔😔😔
😔😔😔😔
ನಿಮ್ಮ ಅನಿಸಿಕೆ ನನಗೆ ವಾಟ್ಸಪ್ ಮಾಡಿ ತಿಳಿಸಿ ..
9945130630 (ವಾಟ್ಸಪ್)
ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ
ಉಡುಪಿ,ಹೋಂ ಡಾಕ್ಟರ್ ಫೌಂಡೇಶನ್
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now