ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಡಿ. ಆರ್. ರಾಜು ನಿಧನಕ್ಕೆ ಶ್ರದ್ದಾಂಜಲಿ ಸಭೆ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಡಿ. ಆರ್. ರಾಜು ನಿಧನಕ್ಕೆ ಶ್ರದ್ದಾಂಜಲಿ ಸಭೆ

0Shares

ಮುಂಬಯಿ : ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಜಿಲ್ಲಾಧ್ಯಕ್ಷರಾದ ಡಿ. ಆರ್. ರಾಜು ಅವರು ನ. 17 ರಂದು ಹೃದಯಘಾತದಿಂದಾಗಿ ನಿಧನ ಹೊಂದಿದ್ದು, ಅಗಲಿದ ಜಿಲ್ಲಾಧ್ಯಕ್ಷರಿಗೆ ಅರ್ಪಿಸಲು ನ. 23 ರಂದು ಬಿಲ್ಲವ ಭವನ, ಸಾಂತಾಕ್ರೂಸ್ ಪೂರ್ವ, ಇಲ್ಲಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಯವರು ಮಾತನಾಡುತ್ತಾ ಒರ್ವ ಉದ್ಯಮಿಯಾಗಿ, ಮೌನ ಸಮಾಜ ಸೇವಕರಾಗಿ, ಧಾರ್ಮಿಕ ಚಿಂತಕರಾಗಿ ಹಾಗೂ ರಾಜಕಾರಿಣಿಯಾಗಿ ಜನಪ್ರಿಯರಾಗಿದ್ದ ಡಿ. ಆರ್. ರಾಜು ಅವರು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಅಭಿವೃದ್ದಿಗಾಗಿ ಜಿಲ್ಲಾಧ್ಯಕ್ಷರಾಗಿ ಸಮಿತಿಯ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು ದೇವರೇ ಸಮಿತಿಗೆ ನೀಡಿದ ಸಮರ್ಥ ವ್ಯಕ್ತಿಯಾಗಿದ್ದರು. ತನ್ನ ಜೀವಿತ ಕಾಲದಲ್ಲಿ ಅವರು ಮಾಡಿದ ಜನಪರ ಸೇವೆಯಿಂದ ಅವರ ಜೀವನ ಸಾರ್ಥಕವಾಗಿದೆ. ತನ್ನ ಕೊನೆಯ ಗಳಿಗೆಯಲ್ಲಿ ಅಂದು ಬೆಳಿಗ್ಗಿನಿಂದ ಹಲವಾರು ಕಾರ್ಯಕ್ರಮಗಳಲ್ಲಿ ಬಾಗವಹಿಸಿದ ಅವರು “ಬೆಳಿಗ್ಗೆ ಸನ್ಮಾನ, ಸಂಜೆ ಸ್ಮಶಾನ” ಎಂಬಂತೆ ನಮ್ಮೆಲ್ಲರನ್ನು ಅಗಲಿದ್ದು, ಬಿಲ್ಲವ ಸಮುದಾಯವೂ ಸೇರಿ ಎಲ್ಲರ ಗೌರವಕ್ಕೆ ಪಾತ್ರರಾದ ಮೇರು ವ್ಯಕ್ತಿತ್ವ ಅವರದ್ದು. ಇಂತಹ ವ್ಯಕ್ತಿಯನ್ನು ಸಮಿತಿಯು ಕಳೆದುಕೊಂಡಿದ್ದು ಡಿ. ಆರ್. ರಾಜು ಅವರ ಪತ್ನಿ ಮತ್ತು ಮಕ್ಕಳಿಗೆ ಅವರ ಅಗಲಿಕೆಯ ದುಖವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಂತಾಪವನ್ನು ವ್ಯಕ್ತಪಡಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now