ನ್ಯಾಯ ದೇವತೆ ಕೂಡಾ ಕಣ್ಣು ಮುಚ್ಚಿ ನಿಂತಿದ್ದಾಳೆ ಇಲ್ಲಿ 😔😔
ಅಂದು ಆ ಕೋರ್ಟ್ ಅಲ್ಲಿ ಫೈನಲ್ ಜಡ್ಜ್ ಮೆಂಟ್ ಬರುವುದರಲ್ಲಿತ್ತು ಒಂದು ಕಡೆ ವೈದ್ಯರ ತಂಡ ಇನ್ನೊಂದು ಕಡೆ ವಕೀಲರ ತಂಡ ಹಾಗೆ ಇಡೀ ಕೋರ್ಟ್ ಅಲ್ಲಿ ಜನ ಕಿಕ್ಕಿರಿದು ತುಂಬಿದ್ದರು,ಎಲ್ಲರಲ್ಲೂ ಕುತೂಹಲ ವಿತ್ತು ಅಂತಿಮ ಜಡ್ಜ್ ಮೆಂಟ್ ಏನಾಗ ಬಹುದು ಎಂದು🤔🤔 …ಜಡ್ಜ್ ಓದಲು ಆರಂಭಿಸಿದರು.
ಜಡ್ಜ್ ಕಟು ಶಬ್ದಗಳಲ್ಲಿ ಹೇಳಿದ್ದಿಷ್ಟೇ ” ಯಾರು ಸರಕಾರಿ ವೈದ್ಯ ಈ ಕೋವಿಡ್ ಸಂಕಷ್ಟದ ಸಮಯದಲ್ಲಿ ರೋಗಿ ಗಳನ್ನು ಉಪಚರಿಸುವುದಿಲ್ಲವೋ ಆತ ತನ್ನ ಕೆಲಸಕ್ಕೆ ರಾಜೀನಾಮೆ ಕೊಡಲಿ ಹಾಗೆ ಯಾರು ಕೋವಿಡ್ ನ ನೆಪ ಹೇಳಿ ಆಸ್ಪತ್ರೆಗೆ ಬರುವುದಿಲ್ಲವೋ ಅಂತಹ ವೈದ್ಯರನ್ನು ಕೆಲಸದಿಂದ ವಜಾ ಮಾಡಿ😡 …ಇದು ರಾಷ್ಟ್ರೀಯ ವಿಪತ್ತು ನಾವೆಲ್ಲ ಒಟ್ಟಾಗಿ ಎದುರಿಸಬೇಕಿದೆ” ಎಂದು ವೈದ್ಯ ಸಮೂಹಕ್ಕೆ ಕಟುವಾದ ಶಬ್ದದಿಂದ ತುಂಬಿದ ನ್ಯಾಯಾಲಯದಲ್ಲಿ ಛೀಮಾರಿ ಹಾಕಲಾಯಿತು …
ವೈದ್ಯ ರೆಲ್ಲ ರು ಅವಮಾನ ದಿಂದ ತಲೆ ತಗ್ಗಿಸಿದ್ದರು😔😔
ಅಲ್ಲಿಗೆ ಕೇಸ್ ಕ್ಲೋಸ್ ಆಗಿತ್ತು ಇನ್ನೊಂದು ಮಹತ್ವಪೂರ್ಣ ಜಡ್ಜ್ ಮೆಂಟ್ ಅದೇ ಜಡ್ಜ್ ನಿಂದ ಬರುವುದರಲ್ಲಿತ್ತು.ಜಡ್ಜ್ ಹೇಳಿದ್ದರು …
ಕೋವಿಡ್ ನಿಯಮಾವಳಿ ಇಂದಾಗಿ ನಮ್ಮ ಕೋರ್ಟ್ಗೆ ನಾಳೆಯಿಂದ ಒಂದು ಒಂದು ವಾರ ರಜೆ ಇದ್ದು ಮುಂದಿನ ವಾರದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಕಲಾಪ ನಡೆಸಲಾಗುವುದು,ವಕೀಲರ ಅರೋಗ್ಯ ದ ಜೊತೆ ಸಾರ್ವಜನಿಕರ ಅರೋಗ್ಯ ರಕ್ಷಣೆ ನಮ್ಮ ಜವಾಬ್ದಾರಿ ಯಾಗಿದೆ ಎಂದಾಗ …ಆಗ ತಲೆ ತಗ್ಗಿಸಿ ಕೂತಿದ್ದ ವೈದ್ಯರು ತಲೆಯೆತ್ತಿದ್ದರು,ವಕೀಲರ ಜೀವಕ್ಕೆ ಮಾತ್ರ ಬೆಲೆ ನಮ್ಮ ಜೀವ ಕ್ಕೆ ಬೆಲೆ ಇಲ್ಲವೇ ?ಎಂದು ಪ್ರಶ್ನೆಯೊಂದು ಎದ್ದಿತ್ತು ಅವರೆಲ್ಲರ ಮನದಲ್ಲಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಾಕುವಂತೆ ಭಾಸ ವಾಗಿತ್ತು ಅವರಿಗೆ ..
ಮತ್ತೆ ಅಲ್ಲೇ ಇದ್ದ ನ್ಯಾಯ ದೇವತೆ ಯನ್ನು ನೋಡಿದರು
ಅಲ್ಲೂ ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿ ತಕ್ಕಡಿ ತೂಗುತಿದ್ದುದು ಕಾಣಿಸಿತು 😔😔 ..
ಹೌದು
.
ನ್ಯಾಯ ದೇವತೆ ಕೂಡ ಕಣ್ಣು ಮುಚ್ಚಿ ನಿಂತಿದ್ದಾಳೆ ಇಲ್ಲಿ
😔😔*….
🔴🔴🔴🔴🔴🔴
ಇದು ನಮ್ಮ ಸಮಾಜ ಇಲ್ಲಿ ನಾವು ನೀವೆಲ್ಲರೂ ಅದನ್ನೇ ಮಾಡುವುದು ಇನ್ನೊಬ್ಬನನ್ನು ದೂರುವುದು,ಇನ್ನೊಬ್ಬನಿಗೆ ಬಯ್ಯುವುದು,ಇನ್ನೊಬ್ಬ ಮಾಡಿದ್ದನ್ನು ತಪ್ಪುಎನ್ನುವುದು ,ಕಡಿಮೆ ಪಕ್ಷ ಅವನನ್ನು ದೂರುವ ಮೊದಲು ಅವನ ಜಾಗದಲ್ಲಿ ನಾನು ಇದ್ದಿದ್ದರೆ ಏನು ಮಾಡುತಿದ್ದೆ ಎನ್ನುವ ಚಿಕ್ಕ ಯೋಚನೆ ಯೊಂದು ಮಾಡಿದ್ದಲ್ಲಿ ನಮ್ಮ ನಿರ್ಧಾರ ಬದಲಾಗಬಹುದು,
ನೆನಪಿಡಿ
ಇಲ್ಲಿ ನಿಮ್ಮ ಒಂದು ಬೆರಳಲ್ಲಿ ಅವನನ್ನು ಕಳ್ಳ ಎಂದು ಬೊಟ್ಟು ಮಾಡಿದರೆ ಉಳಿದ ಮೂರು ಬೆರಳುಗಳು ಕಳ್ಳ ನೀನೇ ಎನ್ನುತ್ತದೆ ಅಲ್ಲವೇ ??? 😂😂
🔴🔴🔴🔴🔴🔴
ಕತೆಗೆ ನಿಮ್ಮ ಪ್ರತಿಕ್ರೀಯೆ ನನ್ನ ವಾಟ್ಸಪ್ ನಂಬರ್ ಗೆ ಕಳುಹಿಸಿ .
🔴🔴🔴🔴🔴🔴
ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ
ಹೋಂ ಡಾಕ್ಟರ್ ಫೌಂಡೇಶನ್,ಉಡುಪಿ
9945130630(ವಾಟ್ಸಪ್)
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now