ಮುಂಬಯಿ (ಆರ್‌ಬಿಐ), ನ.೧೭: ನವಿಮುಂಬಯಿ ತುಳು-ಕನ್ನಡ ಮಿತ್ರ ವೃಂದವು ಕಳೆದ ಶನಿವಾರ ಜುಯಿ ನಗರದ ಬಂಟ್ಸ್ ಸೆಂಟರ್ ಸಭಾಗೃಹದಲ್ಲಿ ಅದ್ದೂರಿಯಿಂದ ದೀಪಾವಳಿ ಸ್ನೇಹ ಸಮ್ಮೇಳನ ನೇರವೇರಿಸಿತು.
ಮಹಾರಾಷ್ಟ್ರ ಭಾಜಪ ಐಟಿ ಸೆಲ್‌ನ ಮುಖ್ಯಸ್ಥ ಸತೀಶ ನಿಕಮ್, ಕರ್ನಾಟಕದ ಭಾಜಪ ಶಾಸಕ ಹಾಗೂ ಪಶ್ಚಿಮ ಮಹಾರಾಷ್ಟ್ರದ ಚುನಾವಣಾ ಪ್ರಭಾರಿ ಸಿ.ಟಿ.ರವಿ, ಮಂಗಳೂರು ಸಂಸದ ಕ್ಯಾ| ಬೃಜೇಶ್ ಚೌಟ, ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜ, ಬೆಂಗಳನ ಹಿರಿಯ ಭಾಜಪ ನಾಯಕರಾದ ಉಮೇಶ್ ಶೆಟ್ಟಿ, ವಾಶಿಯಲ್ಲಿನ ಉದ್ಯಮಿ ಶ್ಯಾಮ್ ಎನ್.ಶೆಟ್ಟಿ ವಿಶೇಷ ಆಮಂತ್ರಿತರಾಗಿದ್ದು, ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಟಾಟಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿಸಿ ಕು| ಕೃತಿ ಚಡಗ ಅವರಿಂದ ಗಣೇಶ ವಂದನೆ, ಭಾರತ ಮಾತೆಯ ಸ್ತುತಿ ಮತ್ತು ಕು| ರಿತಿಕಾ ಸರಸ್ವತಿ ವಂದನೆ, ಕು| ಮನಿಷಾ ಶೆಟ್ಟಿ ಅವರು ಭರತನಾಟ್ಯ ಮತ್ತು ಅವರ ತಂಡ ನಾಡಗೀತೆ, ಬಾಕ್ಯರ್ದ ಕಂಡೊಡು ಪ್ರಸ್ತುತ ಪಡಿಸಿದರು. ಗೋಕುಲ ಸಾಂಸ್ಕೃತಿಕ ಕೇಂದ್ರದ ಕಲಾವಿದರು ಕುಡುಗೋಲು ಕೃಷ್ಣನ ಉಡುಪಿ ಕ್ಷೇತ್ರ ಮತ್ತು ಚೆನ್ನಕೇಶವ, ಕು| ರಿತಿಕಾ ಮತ್ತು ತಂಡವು ಲಲ್ಲಾತಿ ಭಂಡಾರ, ನೃತ್ಯ ಸಂಯೋಜಕಿ ವಿಧುಷಿ ಶ್ರೀಮತಿ ಸಹನಾ ಭಾರಧ್ವಾಜ್ ತಂದವು ವಿವಿಧ ನೃತ್ಯವಳಿಗಳನ್ನು ಪ್ರದರ್ಶಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now